Advertisement

ಶಸ್ತ್ರಾಸ್ತ್ರಗಳ ಲೆಕ್ಕದಲ್ಲಿ ಚೀನ, ಪಾಕಿಸ್ಥಾನಕ್ಕಿಂತ ನಾವು ಹಿಂದೆ!

10:01 AM Jun 16, 2020 | mahesh |

ಲಂಡನ್‌: ಭಾರತ, ಕಳೆದ ವರ್ಷ ತನ್ನ ಪರಮಾಣು ಶಸ್ತ್ರಾಸ್ತ್ರ ಭಂಡಾರಕ್ಕೆ 10 ಹೊಸ ಶಸ್ತ್ರಗಳನ್ನು ಸೇರ್ಪಡೆಗೊಳಿಸಿದೆ. ಆದರೆ, ಒಟ್ಟಾರೆ ಶಸ್ತ್ರಾಸ್ತ್ರಗಳ ಲೆಕ್ಕಾಚಾರದಲ್ಲಿ ನೆರೆಯ ಚೀನ, ಪಾಕಿಸ್ಥಾನಕ್ಕಿಂತ ಭಾರತ ಕಡಿಮೆ ಯುದ್ಧ ಸಾಮಗ್ರಿಗಳನ್ನು ಹೊಂದಿದೆ ಎಂದು ಸ್ವೀಡನ್‌ನ ಚಿಂತಕರ ಚಾವಡಿ “ದ ಸ್ಟಾಕ್‌ಹೋಂ ಇಂಟರ್‌ ನ್ಯಾಶನಲ್‌ ಪೀಸ್‌ ರಿಸರ್ಚ್‌ ಇನ್ಸ್ಟಿಟ್ಯೂಟ್‌’ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಿದೆ. ಚೀನದ ಬಳಿ 290 ಪರಮಾಣು ಶಸ್ತ್ರಾಸ್ತ್ರಗಳಿದ್ದರೆ, ಪಾಕ್‌ ಬಳಿ 150ರಿಂದ 160 ಶಸ್ತ್ರಾಸ್ತ್ರಗಳಿವೆ. ಆದರೆ, ಭಾರತದ ಬಳಿ 130-140 ಪರಮಾಣು ಶಸ್ತ್ರಾಸ್ತ್ರಗಳಿವೆ. ಸೇನೆಯ ಆಧುನೀಕರಣದಲ್ಲಿ ದಾಪುಗಾಲಿಟ್ಟಿರುವ ಚೀನ, ಪರಮಾಣು ಶಕ್ತಿ ಮತ್ತಷ್ಟು ಹೆಚ್ಚಿಸಿಕೊಂಡಿದೆ. ನೆಲ-ವಾಯು- ಜಲ ಮಾರ್ಗಗಳ ಮೂಲಕ ದಾಳಿ ಮಾಡಬಲ್ಲ ಪರಮಾಣು ಕ್ಷಿಪಣಿಗಳು, ಹೊತ್ತೂಯ್ಯಬಲ್ಲ ಹೆಲಿಕಾಪ್ಟರ್‌ಗಳನ್ನು ತಯಾರು ಮಾಡಲಾರಂಭಿಸಿದೆ ಎಂದು ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next