Advertisement

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಸಿಂಧು ಜಯ; ಸೈನಾ ಔಟ್‌

11:40 PM Sep 18, 2019 | Sriram |

ಚಾಂಗ್‌ಜೂ (ಚೀನ): ಹಾಲಿ ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು ಅಮೋಘ ಗೆಲುವು ಸಾಧಿಸಿ “ಚೀನ ಓಪನ್‌ ಸೂಪರ್‌ 1000 ಸೀರಿಸ್‌’ ಕೂಟದ ಪ್ರಿ-ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಆದರೆ ಭಾರತದ ಮತ್ತೋರ್ವ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್‌ ಆರಂಭಿಕ ಸುತ್ತಿನ ಆಘಾತಕ್ಕೆ ಸಿಲುಕಿ ಹೊರಬಿದ್ದಿದ್ದಾರೆ.

Advertisement

ಆತಿಥೇಯ ನಾಡಿನ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಲೀ ಕ್ಸುರುಯಿ ಅವರನ್ನು ಸಿಂಧು ಕೇವಲ 34 ನಿಮಿಷಗಳಲ್ಲಿ, 21-18, 21-12 ಅಂತರದ ಜಯ ಸಾಧಿಸಿದರು. ಈ ಪಂದ್ಯಕ್ಕೂ ಮುನ್ನ ಇಬ್ಬರೂ 3-3 ಸಮಬಲದ ಸಾಧನೆ ಹೊಂದಿದ್ದರು.

ಸೈನಾ ಅವರನ್ನು ವಿಶ್ವದ 19ನೇ ರ್‍ಯಾಂಕಿಂಗ್‌ ಆಟಗಾರ್ತಿ, ಥಾಯ್ಲೆಂಡಿನ ಬುಸನಾನ್‌ ಒಂಗ್ಬಾಮ್ರುಂಗಫಾನ್‌ 21-10, 21-17 ಅಂತರದಿಂದ ಪರಾಭವಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next