Advertisement

ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವೆತ್ತಿದ ಪಾಕ್-ಚೀನಾಗೆ ಮುಖಭಂಗ: ಭಾರತಕ್ಕೆ ಜಯ

09:53 AM Jan 17, 2020 | keerthan |

ಹೊಸದಿಲ್ಲಿ: ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಅಭಿಪ್ರಾಯ ರೂಪಿಸಲು ಸತತ ಪ್ರಯತ್ನ ಪಡುತ್ತಿರುವ ಪಾಕಿಸ್ಥಾನ ಮತ್ತು ಅದರ ಬೆಂಬಲಕ್ಕೆ ನಿಂತಿರುವ ಚೀನಾಗೆ ಮತ್ತೊಮ್ಮೆ ಮುಖಭಂಗ ಉಂಟಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಚೀನಾ ಎತ್ತಿದ್ದು, ಆದರೆ ಇತರ ಯಾವುದೇ ರಾಷ್ಟ್ರಗಳು ಬೆಂಬಲ ನೀಡದೆ, ಭಾರತದ ವಾದವನ್ನೇ ಪುರಸ್ಕರಿಸಿದೆ ಎನ್ನಲಾಗಿದೆ.

Advertisement

ಭದ್ರತಾ ಮಂಡಳಿಯ ಸದಸ್ಯರ ಸಭೆಯಲ್ಲಿ ಚೀನಾ ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿದೆ. ಆದರೆ ಇದು ಎರಡು ರಾಷ್ಟ್ರಗಳ ನಡುವಿನ ಸಮಸ್ಯೆಯಾಗಿರುವ ಕಾರಣ ಅದರ ಚರ್ಚೆಗೆ ಈ ಸಭೆ ವೇದಿಕೆಯಲ್ಲ ಎಂದು ಇತರ ರಾಷ್ಟ್ರಗಳು ಚೀನಾದ ಪ್ರಸ್ತಾವನೆಯನ್ನು ತಿರಸ್ಕರಿಸದೆ. ಭದ್ರತಾ ಮಂಡಳಿಯ ಇತರ ಸದಸ್ಯ ರಾಷ್ಟ್ರಗಳಾದ ಅಮೇರಿಕ, ಬ್ರಿಟನ್, ಫ್ರಾನ್ಸ್ ಮತ್ತು ರಷ್ಯಾಗಳು ಭಾರತದ ವಾದಕ್ಕೆ ಬೆಂಬಲ ನೀಡಿದೆ ಎಂದು ವರದಿಯಾಗಿದೆ.

ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದತಿಯ ನಂತರ ಚೀನಾ ಎರಡು ಬಾರಿ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸಿದೆ. ಆದರೆ ಪ್ರತಿ ಬಾರಿಯೂ ಚೀನಾದ ಪಾಕ್ ಪರವಾದ ವಾದಕ್ಕೆ ಬೆಂಬಲ ಲಭ್ಯವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next