ಹೊಸದಿಲ್ಲಿ: ನೇಪಾಲ ಏಳು ಗಡಿಜಿಲ್ಲೆಗಳ ಹಲವು ಭೂಪ್ರದೇಶಗಳನ್ನು ಚೀನ ಅತಿಕ್ರಮಿಸಿಕೊಂಡಿದೆ ಎಂದು ಭಾರತೀಯ ಗುಪ್ತಚರ ಏಜೆನ್ಸಿ ತಿಳಿಸಿದೆ.
“ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ಭೂಕಬಳಿಕೆಯ ಅಜೆಂಡಾದಿಂದ ದೇಶವನ್ನು ರಕ್ಷಿಸಲು ನೇಪಾಲ ಕಮ್ಯುನಿಸ್ಟ್ ಪಕ್ಷ ಸಂಪೂರ್ಣ ವಿಫಲವಾಗಿದೆ. ಕೆಲ ತಿಂಗಳ ಹಿಂದೆ ನೇಪಾಲದ ಸರ್ವೇ ಇಲಾಖೆ ಚೀನದ ಈ ದುಷ್ಟ ಪ್ರಯತ್ನಗಳ ಬಗ್ಗೆ ಎಚ್ಚರಿಸಿದ್ದರೂ ಪ್ರಧಾನಿ ಓಲಿ ನಿರ್ಲಕ್ಷಿಸಿದ್ದಾರೆ.
ನೇಪಾಲದ ದೋಲಾಖಾ, ಗೋರ್ಖಾ, ದಾರ್ಚುಲಾ, ಹುಮ್ಲಾ, ಸಿಂಧುಪಾಲ್‌ಚೌಕ್, ಸಂಖುವಾಸಭಾ ಮತ್ತು ರಸುವಾ ಜಿಲ್ಲೆಗಳ ಹಲವು ಭಾಗಗಳನ್ನು ನೇಪಾಲ ಕಳೆದುಕೊಂಡಿದೆ’ ಎಂದು ಹೇಳಿದೆ. ದೋಲಾಖಾವೊಂದರಲ್ಲೇ ಚೀನ 1500 ಮೀ. ಪ್ರದೇಶವನ್ನು ನೇಪಾಲದ ಅಂತಾರಾಷ್ಟ್ರೀಯ ಗಡಿಯೊಳಗೆ ಅತಿಕ್ರಮಿಸಿಕೊಂಡಿ¨
ಪಾಕ್ ಪಡೆಯಿಂದ ಶೆಲ್ ದಾಳಿ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಗಳ ಮೂರು ವಲಯಗಳಲ್ಲಿ ಶನಿವಾರ ಪಾಕಿಸ್ಥಾನದ ಸೇನೆ ಕದನ ವಿರಾಮ ಉಲ್ಲಂ ಸಿದೆ. ಭಾರತೀಯ ಸೇನೆಯ ಮುಂಚೂಣಿ ನೆಲೆಗಳು ಹಾಗೂ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕ್ ಪಡೆ ಅಪ್ರಚೋದಿತ ಶೆಲ್ ಮತ್ತು ಮೋರ್ಟಾರ್ ದಾಳಿ ನಡೆಸಿದೆ.