Advertisement
ನದಿಗಳನ್ನೂ ತಿರುಗಿಸಿದೆ!: ಚೀನ ತನ್ನ ಭೂವ್ಯಾಪ್ತಿ ಹೆಚ್ಚಿಸಲು ನದಿಗಳ ದಿಕ್ಕನ್ನೇ ಬದಲಿಸುತ್ತಿದೆ. ಚೀನದ ನಿರ್ಮಾಣ ಕಾರ್ಯಗಳಿಂದಾಗಿ ಬಾಗ್ಧಾರೆ ಖೋಲಾ ಹಾಗೂ ಕರ್ನಾಲಿ ನದಿಗಳು ನೇಪಾಲದ ಹಳ್ಳಿಗಳತ್ತ ತಿರುಗಿವೆ. ಹೀಗೇ ಬಿಟ್ಟರೆ ಈ ಮಳೆಗಾಲದಲ್ಲಿನೇಪಾಲದ ಹಳ್ಳಿಗಳು ನೀರಿನಲ್ಲಿ ಕೊಚ್ಚಿಹೋಗುವ ಸಾಧ್ಯತೆ ಇದೆ ಎಂದು ಇಲಾಖೆ ತನ್ನ ಸಮೀಕ್ಷಾ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಭಾರತದ ಗಡಿಯ ಹಳ್ಳಿ ಜನರೊಂದಿಗೆ ನೇಪಾಲ ಮತ್ತೆ ವಿನಾಕಾರಣ ಜಗಳಕ್ಕಿಳಿಯುತ್ತಿದೆ. ಉತ್ತರ ಪ್ರದೇಶ, ಬಿಹಾರದ ಅಂಚಿನ ಹಳ್ಳಿಗಳಲ್ಲಿ ಜನರಿಗೆ ಒಡ್ಡು, ಡ್ಯಾಮ್ ಹಾಗೂ ಕೃಷಿ ಸಂಬಂಧಿತ ಕಾರ್ಯ ನಡೆಸಲು ನೇಪಾಲ ಅವಕಾಶ ನೀಡುತ್ತಿಲ್ಲ. ಅಲ್ಲದೆ, ಭಾರತೀಯ ಭದ್ರತಾ ಸಿಬಂದಿಯ ಮೇಲೂ ನೇಪಾಲ ಮತಿಗೇಡಿಯಂತೆ ವರ್ತಿಸುತ್ತಿದೆ. “ನೇಪಾಳ ಕಡೆಯಿಂದ 3-4 ಪೊಲೀಸರು ಪ್ರವೇಶಿಸಿ ನಮ್ಮ ಅಧಿಕಾರಿಯನ್ನು ಎಳೆದಾಡಿದ್ದಾರೆ. ನಾವೆಲ್ಲ ಹೋಗಿನೇಪಾಲ ಪೊಲೀಸರ ಸಂಚನ್ನು ವಿಫಲಗೊಳಿಸಿದೆವು’ ಎಂದು ಬಿಹಾರದ ಬಲ್ಬಾ ಗ್ರಾಮದ ನಿವಾಸಿ “ರಿಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ.