Advertisement
ನರವಾಣೆಯಿಂದ ಶಹಬ್ಟಾಶ್, ಮೆಚ್ಚುಗೆ ಪತ್ರ: ಪಾತಕಿ ಚೀನದ ಸೈನಿಕರನ್ನು ನಮ್ಮ ವೀರ ಯೋಧರು ಸದೆಬಡಿದ ಪೂರ್ವ ಲಡಾಖ್‌ನ ಗಡಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಬುಧವಾರ ಭೇಟಿ ನೀಡಿದ್ದರು. ಅಲ್ಲಿ ವೀರಯೋಧರ ಉತ್ಸಾಹ ಕುಂದಿರಲಿಲ್ಲ. ಅವರ ದಿಟ್ಟ ಸೇವೆ ಕಂಡ ನರವಾಣೆ ಅವರ ಹೆಮ್ಮೆಗೆ ಪಾರವೇ ಇರಲಿಲ್ಲ. ಸೇನಾ ಮುಖ್ಯಸ್ಥರ 2ನೇ ದಿನದ ಲಡಾಖ್ ಭೇಟಿ ಮುಂಚೂಣಿಯ ಪ್ರದೇಶಗಳಿಗೆ ಮೀಸಲಾಗಿತ್ತು. ಚೀನ ಪುಂಡಾಟ ನಡೆಸಿದ್ದ ಪ್ರದೇಶಗಳನ್ನು ಪರಿಶೀಲಿಸಿದ ನರವಾಣೆ, ಡ್ರ್ಯಾಗನ್ ಪಡೆಯ ಚಲನವಲನಗಳ ಬಗ್ಗೆ ಕಮಾಂಡರ್‌ಗಳಿಂದ ಮಾಹಿತಿ ಪಡೆದರು. ಚೀನ ಸೈನಿಕರೊಂದಿಗೆ ಹೋರಾಡಿದ ಎಲ್ಲ ವೀರಯೋಧರಿಗೂ ಮೆಚ್ಚುಗೆ ಪತ್ರಗಳನ್ನು ನೀಡಿ ನರವಾಣೆ ಬೆನ್ನು ತಟ್ಟಿದರು. “ಮುಂದೆಯೂ ಇದೇ ಕೆಚ್ಚೆದೆಯ ಹುರುಪು, ಉತ್ಸಾಹಗಳಿಂದ ಕೆಲಸ ಮಾಡಿ’ ಎಂದು ಸೂಚಿಸಿದ್ದಾರೆ.
“ಲಡಾಖ್ ಗಡಿಯಲ್ಲಿನ ಸಂಘರ್ಷವು ಭಾರತದ ಕಡೆಯಿಂದ ಉಂಟಾಗಿದೆ’ ಎಂದು ಚೀನದ ರಕ್ಷಣಾ ಸಚಿವಾಲಯ ಬುಧವಾರ ಹುಚ್ಚು ಹೇಳಿಕೆ ಕೊಟ್ಟಿದೆ. “ಭಾರತದ ಈ ನಡೆ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದಗಳನ್ನು ಉಲ್ಲಂ ಸಿವೆ. ಇದು ಏಕಪಕ್ಷೀಯ ಪ್ರಚೋದನೆ’ ಎಂದು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೇಳಿಕೊಂಡಿದೆ. ಮುಂದುವರಿದ ಗಸ್ತು
ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ಮೇಲೆ ಮುಂಚೂಣಿಯ ಸ್ಥಳಗಳಲ್ಲಿ ಸಾವಿರಾರು ಸೈನಿಕರು ನಿಯೋಜನೆಗೊಂಡಿದ್ದಾರೆ. ಐಎಎಫ್ನ ಸುಖೋಯ್ 30 ಎಂಕೆಐ, ಜಾಗ್ವಾರ್, ಮಿರಾಜ್ 200 ವಿಮಾನಗಳು ಹಾಗೂ ಅಪಾಚೆ ಹೆಲಿಕಾಪ್ಟರ್‌ಗಳು ಈಗಾಗಲೇ ಲೇಹ್ ಮತ್ತು ಶ್ರೀನಗರ ಸೇರಿದಂತೆ ಹಲವು ವಾಯುನೆಲೆಗಳಲ್ಲಿ ಸಜ್ಜಾಗಿ ನಿಂತಿವೆ. ಸಭೆ ಮುಗಿದ ಕೂಡಲೇ ಏಕಾಏಕಿ ಇವನ್ನೆಲ್ಲ ಹಿಂತೆಗೆದುಕೊಳ್ಳುವುದು ಕಷ್ಟಸಾಧ್ಯ. ಅದರಲ್ಲೂ ಕುತಂತ್ರಿ ಚೀನವನ್ನು ಭಾರತ ಎಳ್ಳಷ್ಟೂ ನಂಬುವುದಿಲ್ಲ. ಮುಂದಿನ ಎರಡು ವಾರಗಳಲ್ಲಿ ಗ್ರೌಂಡ್ ಕಮಾಂಡರ್‌ಗಳ ಸಭೆ ನಡೆಸಿ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸೇನೆ ತಿಳಿಸಿದೆ. “ಅದರಲ್ಲೂ ಚೀನ ಫಿಂಗರ್ 4 ಮತ್ತು 8ರ ನಡುವೆ ಶಾಶ್ವತ ಬಂಕರ್, ವಾಹನ ಟ್ರ್ಯಾಕ್, ವೀಕ್ಷಣಾ ಪೋಸ್ಟ್‌ಗಳನ್ನು ನಿರ್ಮಿಸಿದೆ. ಇವನ್ನೆಲ್ಲ ತಕ್ಷಣವೇ ತೆರವುಗೊಳಿಸುವುದು ಕಠಿಣವಾದ ಕೆಲಸ’ ಎಂದು ಸೇನಾಧಿಕಾರಿಯೊಬ್ಬರು “ಹಿಂದೂಸ್ತಾನ್ ಟೈಮ್ಸ್’ಗೆ ತಿಳಿಸಿದ್ದಾರೆ.
Related Articles
ಕಳೆದೆರಡು ದಿನಗಳಿಂದ ನಡೆಯುತ್ತಿರುವ ಉಭಯ ರಾಷ್ಟ್ರಗಳ ಕಮಾಂಡರ್ ಮಟ್ಟದ ಸಭೆ ಫಲಪ್ರದವಾದರೂ, ಲಡಾಖ್ ಸಹಜ ಸ್ಥಿತಿಗೆ ಮರಳಲು 2 ತಿಂಗಳು ಬೇಕಾಗಬಹುದು. ಘರ್ಷಣೆಯ ಕೇಂದ್ರಬಿಂದುಗಳಿಂದ ಸೇನೆ ಹಿಂತೆಗೆದುಕೊಳ್ಳಲು ಎರಡೂ ರಾಷ್ಟ್ರಗಳು ಈಗೇನೋ ಒಪ್ಪಿವೆ. ಆದರೆ ಗಾಲ್ವಾನ್ ತೀರದಲ್ಲಿ ಹೂಡಿರುವ ವೀಕ್ಷಣಾ ಪೋಸ್ಟ್, ಬಂಕರ್, ಯುದ್ಧಸಾಮಗ್ರಿ, ರಕ್ಷಾಕವಚಗಳನ್ನು ತೆರವುಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
Advertisement
ಕಾಂಗ್ರೆಸ್ ಭೂ ವ್ಯಾಪಾರಿ: ನಡ್ಡಾಚೀನ ಜತೆಗಿನ ಬಿಕ್ಕಟ್ಟಿನ ವಿಚಾರದಲ್ಲಿ ಸರ್ವಪಕ್ಷಗಳು ಒಂದಾದರೂ ಕಾಂಗ್ರೆಸ್ ತನ್ನದೇ ದಾರಿಯಲ್ಲಿ ಹೊರಟಿದೆ. ಕೈ ಪಕ್ಷದ ಈ ನಡೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತೆ ಟೀಕಿಸಿದ್ದಾರೆ. “ಕಾಂಗ್ರೆಸ್‌ನ ವಂಶಾಡಳಿತವು ಭೂ ವ್ಯಾಪಾರಿಗಳಂತೆ ಭಾರತದ ಭೂಮಿಯನ್ನು ಪಾಕಿಸ್ಥಾನ, ಚೀನಕ್ಕೆ ಬಿಟ್ಟುಕೊಟ್ಟಿತ್ತು’ ಎಂದು ಟ್ವಿಟ್ಟರ್‌ನಲ್ಲಿ ವಾಗ್ಧಾಳಿ ನಡೆಸಿದ್ದಾರೆ. “ಈ ವಂಶಾಡಳಿತದ ಕೆಟ್ಟ ನಿರ್ಧಾರಗಳಿಂದಾಗಿ ಭಾರತ ಸಾವಿರಾರು ಚದರ ಕಿ.ಮೀ. ಭೂಮಿಯನ್ನು ಕಳೆದುಕೊಂಡಿದೆ. ಭಾರತೀಯ ಸೇನೆಯ ಬಲವಾದ ಉಪಸ್ಥಿತಿ ಹೊಂದಿದ್ದ ಸಿಯಾಚಿನ್ ಹಿಮಪರ್ವತ ಕಳೆದುಹೋಗಿದೆ. ಭಾರತ ಇವರನ್ನು ತಿರಸ್ಕರಿಸಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ’ ಎಂದು ಹೇಳಿದ್ದಾರೆ.