Advertisement
ವಿಶ್ವದ ಮಾಜಿ ನಂ.1 ಜೋಡಿಯಾಗಿರುವ ಚಿರಾಗ್-ಸಾತ್ವಿಕ್ ಕಳೆದ ಆರ್ಕ್ಟಿಕ್ ಓಪನ್, ಡೆನ್ಮಾರ್ಕ್ ಓಪನ್ ಮತ್ತು ಚೀನ ಓಪನ್ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ಸಾತ್ವಿಕ್ ಅವರನ್ನು ಕಾಡಿದ ಭುಜದ ನೋವೇ ಇದಕ್ಕೆ ಕಾರಣ. ಇದೀಗ ಸಾತ್ವಿಕ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಚೀನದಲ್ಲಿ ನೂತನ ಆರಂಭ ಕಂಡುಕೊಳ್ಳುವ ಗುರಿ ಹೊಂದಿದ್ದಾರೆ.
ಪಿ.ವಿ. ಸಿಂಧು, ಲಕ್ಷ್ಯ ಸೇನ್ ಕೂಡ ಕಣದಲ್ಲಿದ್ದಾರೆ. ಇಬ್ಬರೂ ಇತ್ತೀಚಿನ ಕೂಟಗಳಲ್ಲಿ ಪರದಾಡಿದ್ದರು. ತಮ್ಮ ನೈಜ ಫಾರ್ಮ್ ಕಂಡುಕೊಳ್ಳಲು ಇಬ್ಬರಿಗೂ ಇದು ಮತ್ತೂಂದು ಅವಕಾಶ. ಸಿಂಧು, ಲಕ್ಷ್ಯ ಕೂಡ ಪ್ಯಾರಿಸ್ ಒಲಿಂಪಿಕ್ಸ್ನಿಂದ ಬರಿಗೈಯಲ್ಲಿ ಮರಳಿದ್ದರು.
Related Articles
Advertisement
ಪ್ಯಾರಿಸ್ ಒಲಿಂಪಿಕ್ಸ್ ವೈಫಲ್ಯದ ಬಳಿಕ ಒಡೆನ್ಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ಪಿ.ವಿ. ಸಿಂಧು ಅವರ ಉತ್ತಮ ಸಾಧನೆ. ಚೀನದಲ್ಲಿ ಅವರು ಥಾಯ್ಲೆಂಡ್ನ ಸುಪನಿದಾ ಕಟೆತಾಂಗ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇವರೆದುರು ಸಿಂಧು 5-4 ಮುನ್ನಡೆ ಹೊಂದಿದ್ದಾರೆ.
ವನಿತಾ ಸಿಂಗಲ್ಸ್ನಲ್ಲಿ ಆಕರ್ಷಿ ಕಶ್ಯಪ್, ಮಾಳವಿಕಾ ಬನ್ಸೋಡ್ ಕೂಡ ಸ್ಪರ್ಧಿಸಲಿದ್ದಾರೆ. ವನಿತಾ ಡಬಲ್ಸ್ ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್ನಲ್ಲಿ ಬಿ. ಸುಮಿತ್ ರೆಡ್ಡಿ-ಸಿಕ್ಕಿ ರೆಡ್ಡಿ ಅದೃಷ್ಟ ಪರೀಕ್ಷೆಗೆ ಇಳಿಯುವರು.