Advertisement
ಚೀನ ಸರ್ಕಾರದ ಜನಸಂಖ್ಯೆ ಮತ್ತು ಫಲವತ್ತತೆಗೆ ಸಂಬಂಧಿಸಿ ಕ್ರಮ ಕೈಗೊಳ್ಳುವಂಥ ರಾಷ್ಟ್ರೀಯ ಕುಟುಂಬ ಯೋಜನೆ ಸಂಘವು ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ಸೂಕ್ತ ವಯಸ್ಸಿನಲ್ಲಿ ಮದುವೆಯಾಗುವುದು, ಮಕ್ಕಳನ್ನು ಹೊಂದುವುದು, ಹುಟ್ಟುವ ಮಕ್ಕಳ ಪೋಷಣೆಯ ಜವಾಬ್ದಾರಿಯನ್ನು ಪತಿ-ಪತ್ನಿಯಿಬ್ಬರೂ ಹಂಚಿಕೊಳ್ಳುವುದು, ವಧುದಕ್ಷಿಣೆ ಪ್ರಮಾಣವನ್ನು ತಗ್ಗಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಈ ಯೋಜನೆಯಡಿ ಕೈಗೊಳ್ಳಲಾಗುತ್ತದೆ. ಉಡುಗೊರೆಯ ಆಮಿಷ:
ವಿಶೇಷವೆಂದರೆ, ಸರ್ಕಾರದ ಕರೆಗೆ ಸ್ಪಂದಿಸಿದವರಿಗೆ ತೆರಿಗೆ ವಿನಾಯ್ತಿ, ಮನೆ ನಿರ್ಮಾಣಕ್ಕೆ ಸಬ್ಸಿಡಿ, ಮೂರನೇ ಮಗುವನ್ನು ಹೊಂದಿದರೆ ಆ ಮಗುವಿಗೆ ಉಚಿತ ಅಥವಾ ಸಬ್ಸಿಡಿಯುಕ್ತ ಶಿಕ್ಷಣ ಮುಂತಾದ ಹಲವು ಸೌಲಭ್ಯಗಳನ್ನೂ ಘೋಷಿಸಲಾಗಿದೆ.