Advertisement

2 ಭಾರತೀಯ ಬೈಕ್‌ ಕಂಪನಿಗಳಿಗೆ ಮಂಡಿಯೂರಿದ ಚೀನಾ

12:05 PM Jun 03, 2020 | mahesh |

ನವದೆಹಲಿ: ಲಡಾಖ್‌ ಮತ್ತು ಸಿಕ್ಕಿಂ ಗಡಿಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ನಡೆಯುತ್ತಿದೆ. ಮತ್ತೂಂದು ಕಡೆ ಜಾಗತಿಕವಾಗಿ ಚೀನಾವನ್ನು ಎಲ್ಲ ರೀತಿಯಿಂದ ಮೀರಿ ಮುನ್ನುಗ್ಗುತ್ತಿದೆ. ಸದ್ಯ ಭಾರತ-ಚೀನಾ ನಡುವೆ ಆಫ್ರಿಕಾದಲ್ಲಿ ಕುತೂಹಲಕಾರಿ ಕದನವೊಂದು ಜಾರಿಯಲ್ಲಿದೆ. ಭಾರತ ಬಿಗಿಹಿಡಿತ ಸಾಧಿಸಿದೆ! ಅರ್ಥವಾಗಲಿಲ್ಲ ತಾನೇ? ಮುಂದೆ ಓದಿ. ಆಫ್ರಿಕಾ ಖಂಡದಲ್ಲಿನ ಬೈಕ್‌ ಉದ್ಯಮದಲ್ಲಿ ಈಗ ಎರಡು ಭಾರತೀಯ ಕಂಪನಿಗಳು ಸೇರಿ, ಚೀನಾದ 200 ಕಂಪನಿಗಳನ್ನು ಸೋಲಿಸಿವೆ.

Advertisement

ಬಜಾಜ್‌ ಆಟೊ, ಟಿವಿಎಸ್‌ ಆರ್ಭಟಕ್ಕೆ ಬೆಚ್ಚಿಬಿದ್ದ ಚೀನಿ ಕಂಪನಿಗಳು ಒಂದೊಂದಾಗಿ ಹಿಂದೆ ಸರಿಯುತ್ತಿವೆ. 10 ವರ್ಷಗಳ ಹಿಂದೆ ಇದ್ದ 200 ಕಂಪನಿಗಳು ಈಗ 40ಕ್ಕಿಳಿದಿವೆ. ಅಷ್ಟು ಮಾತ್ರವಲ್ಲ. ಈ ಎರಡು ಭಾರತೀಯ ಕಂಪನಿಗಳೇ ಮಾರುಕಟ್ಟೆಯಲ್ಲಿ ಶೇ.50ರಷ್ಟು ಪಾಲು ಹೊಂದಿವೆ! 10 ವರ್ಷಗಳ ಹಿಂದೆ ಚೀನೀ ಕಂಪನಿಗಳ ಪಾಲು ಶೇ.90-95ರಷ್ಟಿತ್ತು.  ಅದರಲ್ಲೂ ಬಜಾಜ್‌ ಕಂಪನಿಯದ್ದು ಗರಿಷ್ಠ ಸಾಧನೆ, ಅದರ ಪಾಲೇ ಶೇ.40. 2020 ಮಾರ್ಚ್‌ಗೆ ಮುಕ್ತಾಯವಾದ ವಿತ್ತೀಯವರ್ಷದಲ್ಲಿ, ಮಾರುಕಟ್ಟೆಯಲ್ಲಿ ಮಾರಾಟವಾದ ಒಟ್ಟು 27 ಲಕ್ಷ ಬೈಕ್‌ಗಳ ಪೈಕಿ, ಬಜಾಜ್‌ ಹತ್ತಿರ ಹತ್ತಿರ 10 ಲಕ್ಷ ಬೈಕ್‌ ಮಾರಿದೆ. ಇನ್ನೊಂದು ಕಡೆ ಟಿವಿಎಸ್‌ ನಿಧಾನಕ್ಕೆ ಏರಿಕೆ ಸಾಧಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next