Advertisement

Taiwan ಚುನಾವಣೆಗೆ ಚೀನ ಕೆಂಗಣ್ಣು: ತೈವಾನ್‌ ಯಾಕೆ ಅಗತ್ಯ ?

11:21 PM Aug 26, 2023 | Team Udayavani |

ಚೀನದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿರುವ ತೈವಾನ್‌ನಲ್ಲಿ ಈಗ ಚುನಾವಣೆಯ ಪರ್ವ. 2024ರ ಜನವರಿಯಲ್ಲಿ ಅದು ಚುನಾವಣೆಯನ್ನು ಎದುರಿಸಲಿದೆ. ಆದರೆ ತೈವಾನ್‌ನನ್ನು ಸ್ವತಂತ್ರ ರಾಷ್ಟ್ರವೆಂದು ಒಪ್ಪದ ಚೀನವು ತೈವಾನ್‌ಗೆ ಪ್ರಪಂಚದ ಬಲಿಷ್ಠ ರಾಷ್ಟ್ರಗಳ ಬೆಂಬಲವನ್ನು ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ತೈವಾನ್‌ ದ್ವೀಪದ ಸುತ್ತಮುತ್ತ ತನ್ನ ರಕ್ಷಣ ಕಾರ್ಯಾಚರಣೆಗಳನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವ ಚೀನ ಯುದ್ಧದ ಎಚ್ಚರಿಕೆಯನ್ನು ನೀಡುತ್ತಿದೆ. ಈಗ ತೈವಾನ್‌ನ ಚುನಾವಣೆಯ ಅಭ್ಯರ್ಥಿ ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿರುವುದು ಚೀನವನ್ನು ಮತ್ತೆ ಕೆರಳಿಸಿದ್ದು, ಚೀನ ದ್ವೀಪದ ಸುತ್ತ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಿದೆ. ತೈವಾನ್‌ನ ಚುನಾವಣ ಕಣದ ಸಂಕ್ಷಿಪ್ತ ನೋಟವನ್ನು ಇಲ್ಲಿ ನೀಡಲಾಗಿದೆ.

Advertisement

ಚೀನ ಕೆರಳಲು ಕಾರಣವೇನು ?
ತೈವಾನ್‌ನಲ್ಲಿ ಈಗ ಡೆಮೊಕ್ರೆಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ ಅಧಿಕಾರದಲ್ಲಿದೆ. ದೇಶದ ಉಪಾಧ್ಯಕ್ಷರಾಗಿರುವ ವಿಲಿಯಂ ಲಾಯ್‌ ಅಮೆರಿಕಕ್ಕೆ ಭೇಟಿ ನೀಡಿದ್ದಾರೆ. ಕೆಲವು ಮೂಲಗಳ ಪ್ರಕಾರ ವಿಲಿಯಂ ಅಲ್ಲಿನ ಮುಂದಿನ ಅಧ್ಯಕ್ಷ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಆ ಕಾರಣದಿಂದಲೂ ಈ ಭೇಟಿ ಪ್ರಾಮುಖ್ಯವನ್ನು ಪಡೆದಿದೆ. ಹಾಗಾಗಿ ಇದು ಚೀನವನ್ನು ಮತ್ತಷ್ಟು ಕೆರಳಿಸಿದೆ. ತೈವಾನ್‌ – ಅಮೆರಿಕ ಮಾತುಕತೆ ನಡೆಯುತ್ತಿದ್ದಂತೆ ಚೀನವು ಕಠಿನ ಎಚ್ಚರಿಕೆ ಎಂಬಂತೆ ತೈವಾನ್‌ ಸುತ್ತಮುತ್ತ ಮಿಲಿಟರಿ ಪಡೆಯನ್ನು ಹೆಚ್ಚಿಸಿದೆ. ಜಂಟಿ ನೌಕಾ ಸೇನೆ ಮತ್ತು ವಾಯು ಪಡೆಯನ್ನು ಚೀನ ದ್ವೀಪದ ಸುತ್ತ ಇರಿಸಿದೆ. ಚೀನವು ಅಗತ್ಯ ಬಂದರೆ ಮಿಲಿಟರಿ ಮೂಲಕ ತೈವಾನ್‌ ಮೇಲೆ ಅಧಿಕಾರ ಪಡೆದುಕೊಳ್ಳುವುದಾಗಿ ತಿಳಿಸಿದೆ. ಚೀನದ ಕ್ರಮದ ವಿರುದ್ಧ ತೈವಾನ್‌ ಕಠಿನವಾಗಿ ಪ್ರತಿಕ್ರಿಯಿಸಿದೆ. ತೈವಾನ್‌ನ ಮುಂದಿನ ಚುನಾವಣೆಯನ್ನು ನಾವೇ ನಡೆಸಲಿದ್ದು, ಬೇರೆಯವರು ಮೂಗು ತೂರಿಸುವ ಅಗತ್ಯವಿಲ್ಲ. ಚೀನವು ಅದರ ಚುನಾವಣೆಯ ಬಗ್ಗೆ ನೋಡಿಕೊಳ್ಳಲಿ ಎಂದು ತೈವಾನ್‌ನ ಕಠುವಾಗಿ ಹೇಳಿದೆ.

ಚೀನದ ವಿರೋಧ ಯಾಕೆ ?
ಚೀನ ಮತ್ತು ತೈವಾನ್‌ ನಡುವಿನ ಯುದ್ಧದಲ್ಲಿ ಅಮೆರಿಕ ಮೊದಲಿನಿಂದಲೂ ತೈವಾನ್‌ನನ್ನು ಬೆಂಬಲಿಸುತ್ತಾ ಬಂದಿದೆ. ಜತೆಗೆ ತೈವಾನ್‌ಗೆ ಅಮೆರಿಕದ ರಕ್ಷಣೆ ಹಾಗೂ ಸೇನಾ ಬೆಂಬಲವಿದೆ. ಹಾಗಾಗಿ ತೈವಾನ್‌ ಹಾಗೂ ಅಮೆರಿಕ ನಡುವಿನ ಮಾತುಕತೆಯಿಂದ ಸಂಬಂಧವು ಇನ್ನಷ್ಟು ಬಲಿಷ್ಠವಾದರೆ ತೈವಾನ್‌ಗೆ ಅಮೆರಿಕ ಕಾವಲಾಗಿ ನಿಲ್ಲಲಿದೆ. ಈ ವೇಳೆ ಚೀನ ತೈವಾನ್‌ನೊಂದಿಗೆ ಅಮೆರಿಕವನ್ನು ಎದುರಿಸಬೇಕಾಗು ತ್ತದೆ. ಅಲ್ಲದೆ ದೊಡ್ಡಣ್ಣನಾಗಿರುವ ಅಮೆರಿಕದೊಂದಿಗೆ ಇತರ ದೇಶಗಳೂ ತೈವಾನ್‌ಗೆ ಬೆಂಬಲ ಸೂಚಿಸಿದಲ್ಲಿ ಚೀನಕ್ಕೆ ಹಿನ್ನಡೆಯುಂಟಾಗಬಹುದು.

ಚುನಾವಣೆ ಯಾವಾಗ ?
ಡೆಮೊಕ್ರೆಟಿಕ್‌ ಪ್ರೊಗ್ರೆಸಿವ್‌ ಪಾರ್ಟಿಯ ಸ್ಥಾಈ ಇಂಗ್‌ -ವೆನ ಸದ್ಯ ತೈವಾನ್‌ನ ಅಧ್ಯಕ್ಷೆ. ತೈವಾನ್‌ನ ನಿಯಮದ ಪ್ರಕಾರ ಒಬ್ಬ ಅಭ್ಯರ್ಥಿ ಎರಡು ಅವಧಿಗೆ ಅಂದರೆ ನಾಲ್ಕು ವರ್ಷಗಳ ಕಾಲ ಮಾತ್ರ ಅಧ್ಯಕ್ಷ ಸ್ಥಾನದಲ್ಲಿರಬಹುದು. ಹಾಗಾಗಿ ಸ್ಥಾಈ ಇಂಗ್‌ -ವೆನ 2ನೇ ಮತ್ತು ಕೊನೆಯ ಅವಧಿಯು 2024ರ ಮೇಯಲ್ಲಿ ಕೊನೆಗೊಳ್ಳಲಿದೆ. ಇಲ್ಲಿ 2024ರ ಜನವರಿಯಲ್ಲಿ ಚುನಾವಣೆ ನಡೆಯಲಿದ್ದು, 25.5 ಮಿಲಿಯನ್‌ ಜನರು ಮತದಾರರಿದ್ದಾರೆ. ತೈವಾನ್‌ನ ಉಪಾಧ್ಯಕ್ಷ ವಿಲಿಯಂ ಲಾಯ್‌ ಚುನಾವಣ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಯಾರೆಲ್ಲ ಸ್ಪರ್ಧಿಗಳು ?
ತೈವಾನ್‌ನ ಎರಡು ಪ್ರಮುಖ ಪಕ್ಷಗಳು ಚುನಾವಣೆಯ ಮುಖ್ಯ ಭೂಮಿಕೆಯಲ್ಲಿವೆ. ಈಗಿರುವ ಸ್ಥಾಈ ನಾಯಕತ್ವದ ಡೆಮೊಕ್ರೆಟಿಕ್‌ ಪ್ರೊಗ್ರೆಸಿವ್‌ ಪಾರ್ಟಿ(ಡಿಪಿಪಿ)ಯು 2016ರಿಂದ ಅಧಿಕಾರದಲ್ಲಿದೆ. ಡಿಪಿಪಿ ಪಕ್ಷದಿಂದ ಸ್ಥಾಈಹೆ ಹತ್ತಿರವಾಗಿರುವ, ತೈಪೆಯ ಕೌನ್ಸಿಲರ್‌ವು ಪೆಈ -ಯೀ ಸ್ಪರ್ಧಿಸಲಿದ್ದಾರೆ. ಇನ್ನೊಂದೆಡೆ ಚೀನದೊಂದಿಗೆ ಉತ್ತಮ ಸಂಬಂಧವಿರಿಸಿಕೊಂಡಿರುವ ಕೆಎಂಟಿಯಿಂ ಪಕ್ಷದಿಂದ‌ ಮಾಜಿ ಪೊಲೀಸ್‌ ಅಧಿಕಾರಿ ಹೌ ಯು- ಇಹ್‌ ಸ್ಪರ್ಧಿಸಲಿದ್ದಾರೆ. ಚುನಾವಣೆಗೆ ಇನ್ನು ಕೆಲವು ತಿಂಗಳುಗಳ ಸಮಯವಿದ್ದು, ಹೌ ಯು- ಇಹ್‌ ಜನಪ್ರಿಯತೆ ಗಳಿಸದಿದ್ದರೆ 2016ರ ಮಾದರಿಯಲ್ಲಿ ತನ್ನ ಅಭ್ಯರ್ಥಿಯನ್ನು ಬದಲಿಸುವ ಸಾಧ್ಯತೆಯೂ ಇದೆ. ತೈವಾನ್‌ನ ಪ್ರಮುಖ ಎರಡು ಪಕ್ಷಗಳ ಜತೆಗೆ 2019ರಲ್ಲಿ ಆರಂಭವಾದ ತೈವಾನ್‌ ಪೀಪಲ್ಸ್‌ ಪಾರ್ಟಿಯೂ ಕಣದಲ್ಲಿದ್ದು ಕೊ ವೆನ್‌- ಜೆ ಅವರನ್ನು ತನ್ನ ಅಭ್ಯರ್ಥಿಯಾಗಿಸಿದೆ. ವೆನ್‌ – ಜೆ ಮೊದಲಿನಿಂದಲೂ ಚೀನ ವಿರೋಧಿಯಲ್ಲ ಎಂದೇ ಹೇಳಿಗೊಂಡುಬರುತ್ತಿದ್ದಾರೆ. ಇದರೊಂದಿಗೆ ಸಣ್ಣ ಪಕ್ಷಗಳೂ ಚುನಾವಣ ಕಣದಲ್ಲಿದೆ.

Advertisement

ಸೌತ್‌ಈಸ್ಟ್‌ ಏಷ್ಯಾದ ಮೇಲೆ ಏನು ಪ್ರಭಾವ ?
ತೈವಾನ್‌ ಚುನಾವಣೆಯು ನೇರ ಪರಿಣಾಮ ಅಸೋಸಿಯೇಶನ್‌ ಆಫ್ ಸೌತ್‌ ಈಸ್ಟ್‌ ಏಷ್ಯನ್‌ ನೇಷನ್ಸ್‌( ಎಎಸ್‌ಇಎಎನ್‌)ನ ಪ್ರತೀ ಸದಸ್ಯ ರಾಷ್ಟ್ರದ ಮೇಲೆ ಬೀರುತ್ತದೆ. ಅಲ್ಲದೇ ಇದು ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಯಾಗಿ ಪರಿಗಣನೆಯಾಗುತ್ತದೆ. ಹಲವಾರು ದೇಶಗಳ ಆರ್ಥಿಕ ಸ್ಥಿತಿಯು ಏರುಪೇರಾಗುತ್ತದೆ. ವಿಶ್ವದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಇದು ತೈವಾನ್‌, ಚೀನ ಮತ್ತು ಅಮೆರಿಕದ ನಡುವಿನ ಸಂಘರ್ಷವನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಭಾರತಕ್ಕೇನು
ಸಮಸ್ಯೆ?
ಭಾರತವು ಇಂಡೋ -ಪೆಸಿಫಿಕ್‌ನಲ್ಲಿ ಶಾಂತಿಯನ್ನು ಬಯಸುತ್ತದೆ. ಭಾರತವು ಚೀನದಿಂದಲೂ ಇದನ್ನೇ ಬಯಸುತ್ತದೆ. ಆದರೆ ಚೀನವು ಪ್ರತೀ ಬಾರಿ ಇದನ್ನು ಸುಳ್ಳಾಗಿಸಿದೆ. ಜತೆಗೆ ಅಮೆರಿಕವು ಭಾರತವನ್ನು ತೈವಾನ್‌ ಪರವಾಗಿರುವಂತೆ ಬಯಸುವ ಸಾಧ್ಯತೆ ಇದೆ. ಭಾರತವು ಈ ಮೈತ್ರಿಯಿಂದ ದೂರವುಳಿಯಲು ಪ್ರಯತ್ನಿಸಿದರೆ ಅಮೆರಿಕದ ಜತೆಗಿನ ಸ್ನೇಹ ಸಂಬಂಧಕ್ಕೆ ತೊಡಕಾಗುವ ಸಂಭವವಿದೆ. ಭಾರತವು ತೈವಾನ್‌ ಪರವಾಗಿ ನಿಲ್ಲುವ ಸಾಧ್ಯತೆ ಹೆಚ್ಚಿದ್ದರೂ ಮತ್ತೂಂದು ವಿಶ್ವ ಯುದ್ಧಕ್ಕೆ ಕಾರಣವಾಗದ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ.

ತೈವಾನ್‌ ಯಾಕೆ ಅಗತ್ಯ ?
ವಿಶ್ವದ ಆರ್ಥಿಕತೆಗೆ ತೈವಾನ್‌ ಮಹತ್ವದ ಸ್ಥಾನದಲ್ಲಿದೆ. ತೈವಾನ್‌, ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಸೇನಾ ನೆಲೆಯಿರುವ ದ್ವೀಪಗಳ ಮೊದಲ ಸಾಲಿನಲ್ಲಿದೆ. ಆದ್ದರಿಂದ ಭದ್ರತೆ, ಸುರಕ್ಷತೆಯ ನಿಟ್ಟಿನಲ್ಲಿ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಿಗೆ ತೈವಾನ್‌ ಅಗತ್ಯವಾಗಿದೆ. ವಿಶ್ವದ ಶೇ. 70 ಸೆಮಿಕಂಡಕ್ಟರ್‌ಗಳು ಮತ್ತು ಶೇ. 90ರಷ್ಟು ಹೆಚ್ಚು ಅಭಿವೃದ್ಧಿಗೊಂಡಿರುವ ಚಿಪ್‌ಗ್ಳು ತೈವಾನ್‌ನಿಂದಲೇ ಪೂರೈಕೆಯಾಗುತ್ತದೆ. ತೈವಾನ್‌ ಉತ್ಪಾದನೆ ನಿಲ್ಲಿ ಸಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯಾಗುತ್ತದೆ. ರಷ್ಯಾವು ಉಕ್ರೇನ್‌ ಮೇಲೆ ಸಮರ ಸಾರುತ್ತಲೇ ಇದ್ದು. ಒಂದು ವೇಳೆ ಚೀನವು ತೈವಾನ್‌ ಅನ್ನು ವಶಪಡಿಸಿಕೊಂಡರೆ ಬಲಿಷ್ಟ ರಾಷ್ಟ್ರಗಳು ಸಣ್ಣ ದೇಶಗಳನ್ನು, ದ್ವೀಪಗಳನ್ನು ವಶಪಡಿಸಿಕೊಳ್ಳುವ ಸಂಖ್ಯೆ ಹೆಚ್ಚಾಗಬಹುದು. ಇದು ವಿಶ್ವ ಶಾಂತಿಗೆ ಭಂಗ ತರಬಹುದು.

-ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next