Advertisement
ಡ್ರ್ಯಾಗನ್‌ಗೆ ತಟ್ಟಿದ 2ನೇ ಸೋಂಕಿನ ಅಲೆಚೀನದಲ್ಲೂ 2ನೇ ಬಾರಿಗೆ ಸೋಂಕು ಹರಡುತ್ತಿದ್ದು, ನಿರಂತರವಾಗಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಲೇ ಇವೆ. ಶನಿವಾರ ಒಂದೇ ದಿನ 21 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಎಲ್ಲ ಪ್ರಕರಣಗಳು ಸ್ಥಳೀಯ ಹಿನ್ನೆಲೆಯದ್ದೇ ಆಗಿವೆ. ಈ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳು ಮತ್ತೂಮ್ಮೆ ಲಾಕ್‌ಡೌನ್ ಮಂತ್ರದ ಮೊರೆ ಹೋಗಿದ್ದು, ಕೆಲ ಸ್ಥಳೀಯ ಪ್ರದೇಶಳಗಳ ಅಂಗಡಿ ಮುಂಗಟ್ಟುಗಳು ಸೇರಿದಂತೆ ಶಾಲೆ ಕಾಲೇಜುಗಳನ್ನು ಬಂದ್ ಮಾಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚೀನದಲ್ಲಿ ಎರಡಂಕಿಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ಸಿಯೋಲ್ ನಗರದಲ್ಲಿ ಎರಡನೇ ಹಂತದ ಸೋಂಕಿನ ಹಾವಳಿ ಪ್ರಾರಂಭವಾಗಿದ್ದು, ಪ್ರತ್ಯೇಕ ಸಿಯೋಲ್ ಸುತ್ತ ಮುತ್ತ ಪ್ರದೇಶಗಳಲ್ಲಿ ಸುಮಾರು 35 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಪ್ರಮುಖವಾಗಿ ದೇಶದಲ್ಲಿ ಪಬ್, ರೆಸ್ಟೋರೆಂಟ್, ಚರ್ಚ್ ಸೇರಿದಂತೆ ವಲಸೆ ಕಾರ್ಮಿಕರಿಂದ ಸೋಂಕು ಹರಡುತ್ತಿದ್ದು, ಆರೋಗ್ಯಾಧಿಕಾರಿಗಳಿಗೆ ಸೋಂಕಿನ ಮೂಲ ಪತ್ತೆ ಹಚ್ಚುವುದೇ ದೊಡ್ಡ ತಲೆ ನೋವಾಗಿದೆ. ಅಮೆರಿಕದಲ್ಲಿ ಲಗಾಮಿಲ್ಲ
ಅಮೆರಿಕದ ಪ್ರಕರಣಗಳ ಸಂಖ್ಯೆ 25 ಲಕ್ಷ ದಾಟಿದ್ದು, ಸೋಂಕು ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರತಿನಿತ್ಯ 20-40 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಮೃತರಾದವರ ಸಂಖ್ಯೆಯಲ್ಲೂ ಮೊದಲ ಸ್ಥಾನದಲ್ಲಿದೆ. ಈವರೆಗೆ 1.26 ಲಕ್ಷಕ್ಕೂ ಹೆಚ್ಚು ಜನರು ಸೋಂಕಿನಿಂದಾಗಿ ಮೃತರಾಗಿದ್ದಾರೆ. ಈಗಿನ ಲೆಕ್ಕಾಚಾರದ ಪ್ರಕಾರ ಸಾವಿನ ಪ್ರಮಾಣ 2 ಲಕ್ಷ ದಾಟುವ ಸಂಭವವಿದೆ. ಪ್ರತಿಯೋರ್ವ ಸೋಂಕಿತನಿಂದ ಕನಿಷ್ಠ 10 ಮಂದಿಗೆ ಸೋಂಕು ತಗುಲುತ್ತಿದೆ ಎಂದು ವರದಿ ಹೇಳಿದೆ. ಇನ್ನು ಹೆಚ್ಚಿನ ಸಂಖ್ಯೆಯ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಸರಕಾರ ವಿಫಲವಾಗಿದ್ದು, ದೇಶದ ಶೇ. 6ರಷ್ಟು ಜನರು ಸೋಂಕಿಗೆ ತುತ್ತಾಗಿದ್ದರೂ ಲಾಕ್‌ಡೌನ್ ನಿಯಮಗಳನ್ನು ಹಿಂದೆಗೆದುಕೊಳ್ಳಲಾಗಿದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್‌ಶನ್ (ಸಿಡಿಸಿ) ನಿರ್ದೇಶಕ ಡಾ.ರಾಬರ್ಟ್ ರೆಡ್ ಪೀಲ್ಡ… ತಿಳಿಸಿ¨ªಾರೆ. ಅಮೆರಿಕದಲ್ಲಿ ಕೋವಿಡ್-19 ಸೋಂಕಿನ ಅಲೆ ಶುರುವಾಗಿ ಕಳೆದೊಂದು ತಿಂಗಳಲ್ಲಿ 10 ಸಾವಿರಕ್ಕಿಂತ ಹೆಚ್ಚೇ ಪ್ರಕರಣಗಳು ನಿತ್ಯವೂ ಕಂಡುಬಂದಿದ್ದವು. ಇದು ಅಲ್ಲಿನ ಆಡಳಿತವನ್ನು ಚಿಂತೆಗೀಡು ಮಾಡಿದೆ.
Related Articles
Advertisement