Advertisement

ಅಫ್ಘಾನ್‌ನಲ್ಲಿ ಚೀನ ಸೇನಾ ನೆಲೆ ? ಕಾಬೂಲ್‌ ಜತೆ ಮಾತುಕತೆ

04:38 PM Feb 02, 2018 | Team Udayavani |

ಕಾಬೂಲ್‌ : ಸಮರತ್ರಸ್ತ ಅಫ್ಘಾನಿಸ್ಥಾನದಿಂದ ತನ್ನ ಪ್ರಕ್ಷುಬ್ಧ ಮತ್ತು ಉದ್ರಿಕ್ತ ಕ್ಸಿಂಜಿಯಾಂಗ್‌ ಗಡಿ ಪ್ರಾಂತ್ಯಕ್ಕೆ ಇಸ್ಲಾಮಿಕ್‌ ಉಗ್ರರು ಒಳ ನುಸುಳಿ ಬರಬಹುದು ಎಂಬುದನ್ನು ಮುಂದಾಗಿ ಅಂದಾಜಿಸಿರುವ ಬೀಜಿಂಗ್‌, ಇದೀಗ ಅಫ್ಘಾನಿಸ್ಥಾನದ ದುರ್ಗಮ ಪ್ರದೇಶದಲ್ಲಿ ತನ್ನ ಸೇನಾ ನೆಲೆಯೊಂದನ್ನು ನಿರ್ಮಿಸುವ ಬಗ್ಗೆ ಕಾಬೂಲ್‌ ಜತೆಗೆ ಮಾತುಕತೆ ನಡೆಸುತ್ತಿದೆ.  

Advertisement

ಅಫ್ಘಾನಿಸ್ಥಾನದಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪಿಸುವ ಮೂಲಕ ಉಗ್ರರನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ತಾನು ಕಾಬೂಲ್‌ಗೆ ನೆರವಾಗಲು ಸಾಧ್ಯ ಎಂದು ಬೀಜಿಂಗ್‌ ಹೇಳಿದೆ. 

ಈ ನಿಟ್ಟಿನಲ್ಲಿ ಬೀಜಿಂಗ್‌ ಉನ್ನತ ಅಧಿಕಾರಿಗಳು ಇದೀಗ ಅಫ್ಘಾನ್‌ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಕಾಬೂಲ್‌ ಸರಕಾರಿ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next