Advertisement

Pakistan ರಕ್ಷಣಾ ಮೂಲಸೌಕರ್ಯ ನಿರ್ಮಾಣದಲ್ಲಿ ಚೀನ ಸಹಾಯ

10:02 PM Jun 25, 2023 | Team Udayavani |

ನವದೆಹಲಿ: ಪಾಕಿಸ್ತಾನದ ರಕ್ಷಣಾ ಮೂಲಸೌಕರ್ಯ ನಿರ್ಮಾಣದಲ್ಲಿ ಚೀನಾ ಸಹಾಯ ಮಾಡುತ್ತಿದೆ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.

Advertisement

ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳು ಮತ್ತು ಡ್ರೋನ್‌ಗಳನ್ನು ಚೀನಾ ಒದಗಿಸುತ್ತಿದೆ. ಜತೆಗೆ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸಂವಹನ ಗೋಪುರಗಳನ್ನು ಸ್ಥಾಪಿಸಲು ಮತ್ತು ಭೂಗತ ಕೇಬಲ್‌ಗ‌ಳನ್ನು ಅಲವಡಿಸಲು ಸಹಾಯ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನ ಸುರಕ್ಷತೆಯ ಹಿನ್ನೆಲೆಯಲ್ಲಿ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಚೀನಾದ ನಿರ್ಮಾಣ ಕಾರ್ಯಗಳಿಗೆ ರಕ್ಷಣೆ ಖಾತರಿಪಡಿಸಿಕೊಳ್ಳಲು ತನ್ನ ಪರಮಾಪ್ತ ಮಿತ್ರ ಪಾಕಿಸ್ತಾನಕ್ಕೆ ಚೀನಾ ಸಹಾಯ ಮಾಡುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ)ಯ ಸಮೀಪ ಪಾಕಿಸ್ತಾನವು ಅತ್ಯಾಧುನಿಕ ಶಸ್ತ್ರಾಸ್ತ್ರ “ಎಸ್‌ಎಚ್‌-15′ ಅನ್ನು ಸ್ಥಾಪಿಸಿದೆ. ಚೀನಾ ಕಂಪನಿಯಿಂದ 236 “ಎಸ್‌ಎಚ್‌-15′ ಫಿರಂಗಿ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಚೀನಾ ಮುಂದಾಗಿದೆ. 2022ರ ಜನವರಿಯಲ್ಲಿ ಮೊದಲ ಬ್ಯಾಚ್‌ನ “ಎಸ್‌ಎಚ್‌-15′ ಪಾಕಿಸ್ತಾನಕ್ಕೆ ರವಾನೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next