Advertisement

ವಿವಾದಿತ ಪಿಓಕೆಯಲ್ಲಿ ಪಾಕಿಸ್ಥಾನದ ಬೃಹತ್‌ ಅಣೆಕಟ್ಟಿಗೆ ಚೀನದ ಹಣ ?

04:33 PM Jun 22, 2017 | udayavani editorial |

ಬೀಜಿಂಗ್‌ : ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಬೃಹತ್‌ ದೈಮರ್‌-ಭಾಷಾ ಅಣೆಕಟ್ಟು ನಿರ್ಮಾಣಕ್ಕಾಗಿ ಚೀನವು 14 ಶತಕೋಟಿ ಡಾಲರ್‌ ಮೊತ್ತವನ್ನು ಒದಗಿಸಲಿದ್ದು ಇದನ್ನು 50 ಶತಕೋಟಿ ಡಾಲರ್‌ಗಳ ಚೀನ – ಪಾಕಿಸ್ಥಾನ ಆರ್ಥಿಕ ವಲಯ ಯೋಜನೆಗೆ ಸೇರ್ಪಡೆಗೊಳಿಸಲಿದೆ ಎಂಬ ವರದಿಗಳು ಪಾಕ್‌ ಮಾಧ್ಯಮದಲ್ಲಿ ಪ್ರಕಟವಾಗಿದ್ದು ಈ ಬಗ್ಗೆ ಚೀನ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವನ್ನು ಪ್ರದರ್ಶಿಸಿದೆ. 

Advertisement

ಪಾಕ್‌ ಮಾಧ್ಯಮಗಳಲ್ಲಿ ವರದಿಯಾಗಿರುವ ಬೃಹತ್‌ ಪಿಓಕೆ ಅಣೆಕಟ್ಟಿನ ಬಗ್ಗೆ ನಮಗೆ ಯಾವುದೇ ಮಾಹಿತಿಗಳಿಲ್ಲ; ಆ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಚೀನದ ವಿದೇಶ ಸಚಿವಾಲಯದವಕ್ತಾರ ಗೆಂಗ್‌ ಶುವಾಂಗ್‌ ಇಂದು ಮಾಧ್ಯಮಕ್ಕೆ ಹೇಳಿದರು.

ಬಹಳ ಹಿಂದಿನಿಂದಲೂ ಪಾಕಿಸ್ಥಾನ ಗಿಲ್‌ಗಿಟ್‌-ಬಾಲ್ಟಿಸ್ಥಾನ್‌ ವಲಯದಲ್ಲಿ ದೈಮರ್‌-ಭಾಷಾ ಅಣೆಕಟ್ಟು ನಿರ್ಮಾಣಕ್ಕಾಗಿ 12ರಿಂದ 14 ಬಿಲಿಯ ಡಾಲರ್‌ ಮೊತ್ತವನ್ನು ಪಡೆಯಲು ಯತ್ನಿಸುತ್ತಿತ್ತು. ಆದರೆ ಪಿಓಕೆ ವಿವಾದಾತ್ಮಕ ಪ್ರದೇಶವಾಗಿರುವುದರಿಂದ ಪಾಕ್‌ ಯೋಜನೆಗೆ ಎಲ್ಲಿಂದಲೂ ಹಣ ಬಂದಿರಲಿಲ್ಲ. ಏಶ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಮತ್ತು ವಿಶ್ವ ಬ್ಯಾಂಕ್‌ ಈ ಹಿಂದೆಯೇ ಪಾಕಿಸ್ಥಾನದ ಈ ವಿವಾದಾತ್ಮಕ ಯೋಜನೆಗೆ ಹಣ ಒದಗಿಸಲು ಅಸಾಧ್ಯವೆಂದು ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next