Advertisement

ಬೆಂಕಿ ಹಚ್ಚೋ ಲೇಸರ್‌ ಗನ್‌:1ಕಿ.ಮೀ.ದೂರದಿಂದಲೂ ದಾಳಿ ನಡೆಸಬಹುದು!

09:45 AM Jul 04, 2018 | |

ಬೀಜಿಂಗ್‌: ಪೊಲೀಸರಿಗೆ ಸುಮಾರು ಒಂದು ಕಿ.ಮೀ. ದೂರದಲ್ಲಿ ನಿಂತು ಪ್ರತಿಭಟನಾ ಕಾರರನ್ನು ಚದುರಿಸಲು ಸಾಧ್ಯವೇ? ಚೀನಾದಲ್ಲಿ ಅದು ಸಾಧ್ಯ. ಹೇಗೆ ಗೊತ್ತಾ?

Advertisement

ಇಲ್ಲಿನ ಕಂಪನಿಯೊಂದು ಪೊಲೀಸರ ಬಳಕೆಗೆಂದೇ ಲೇಸರ್‌ ಗನ್‌ವೊಂದನ್ನು ಅಭಿವೃದ್ಧಿಪಡಿಸಿದೆ. ಈ ಗನ್‌ನಿಂದ ಒಂದು ಕಿ.ಮೀ. ದೂರದಲ್ಲಿರುವ ವ್ಯಕ್ತಿಗೂ ಶೂಟ್‌ ಮಾಡಬಹುದು. ಹಾಗಂತ, ಶೂಟ್‌ ಮಾಡಿ ದೊಡನೆ ವ್ಯಕ್ತಿಯ ಪ್ರಾಣಕ್ಕೇನೂ ಅಪಾಯ ವಾಗುವುದಿಲ್ಲ. ಬದಲಿಗೆ, ಆತನ ಕೂದಲಿಗೆ ಅಥವಾ ಬಟ್ಟೆಗೆ ಬೆಂಕಿ ಹತ್ತಿಕೊಳ್ಳುತ್ತದೆ. ಪ್ರತಿಭಟನಾಕಾರರ ಕೈಯಲ್ಲಿರುವ ಬ್ಯಾನರ್‌ಗಳನ್ನು ಸುಟ್ಟು ಹಾಕಲೂ ಇದನ್ನು ಬಳಸಬಹುದು ಎಂದು ಗನ್‌ ತಯಾರಿಸಿರುವ ಝೆಡ್‌ಕೆಝೆಡ್‌ಎಂ ಫೈಬರ್‌ ಲೇಸರ್‌ ಕಂಪನಿ ಹೇಳಿದೆ.

15 ಮಿ.ಮೀ. ಕ್ಯಾಲಿಬರ್‌ನ ಗನ್‌ 3 ಕೆ.ಜಿ. ತೂಕ ಹೊಂದಿದ್ದು, 800 ಮೀ. ದೂರದ ಗುರಿ ತಲುಪಬಲ್ಲದು. ಗಾಜು ಸೇರಿದಂತೆ ಪಾರದರ್ಶಕ ವಸ್ತುಗಳ ಮೂಲಕವೂ ಇದು ಹಾದುಹೋಗಬಲ್ಲದು. ವ್ಯಕ್ತಿಗೆ ತಾಗಿದೊಡನೆ ಆತನಿಗೆ ಸ್ವಲ್ಪ ಹೊತ್ತು ನೋವು ಕಾಣಿಸಿಕೊಳ್ಳುತ್ತದೆ. ಆದರೆ, ಪ್ರಾಣಹಾನಿ ಉಂಟಾಗುವುದಿಲ್ಲ ಎಂದೂ ತಿಳಿಸಿದೆ.

ಪೊಲೀಸರ ಬಳಕೆಗೆಂದೇ ಚೀನಾದ ಕಂಪನಿಯಿಂದ ಅಭಿವೃದ್ಧಿ 
ಪ್ರತಿಭಟನಾಕಾರರನ್ನು ಚದುರಿಸಲು ನೆರವು
ಶೂಟ್‌ ಮಾಡಿದರೆ ಪ್ರತಿಭಟನಾಕಾರರ ಕೂದಲು, ಬಟ್ಟೆಗೆ ಬೆಂಕಿ

Advertisement

Udayavani is now on Telegram. Click here to join our channel and stay updated with the latest news.

Next