Advertisement
ಭಾರತದ ಜನರಿಗೆ ನೀಡಲಾಗಿರುವ ಶೇ.96ರಷ್ಟು ಲಸಿಕೆಗಳು ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಆಗಿವೆ. ಚೀನಾದಲ್ಲಿ ಕೊರೊನಾವ್ಯಾಕ್ ಮತ್ತು ಸೈನೋಫಾರ್ಮ್ ಲಸಿಕೆಗಳನ್ನೇ ಹೆಚ್ಚಾಗಿ ನೀಡಲಾಗಿದೆ. ಕೊವಿಶೀಲ್ಡ್ ಮತ್ತು ಕೊರೊನಾ ವ್ಯಾಕ್ ಲಸಿಕೆ ಪಡೆದಿದ್ದ ಬ್ರೆಜಿಲ್‌ನ 10 ಲಕ್ಷ ಮಂದಿ ಯನ್ನು ಪರೀಕ್ಷಿಸಿದಾಗ, ಯುವಕರಲ್ಲಿ ಎರಡೂ ಲಸಿಕೆಗಳ ಪರಿಣಾಮ ಒಂದೇ ಆಗಿತ್ತು. ಆದರೆ, ವೃದ್ಧರ ಮೇಲೆ ಕೊರೊನಾವ್ಯಾಕ್ ಕಡಿಮೆ ಪರಿ ಣಾಮ ಬೀರಿತ್ತು. ಹೀಗಾಗಿ, ಭಾರತದ ನಾಗರಿಕರು ಪಡೆದಿರುವ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂಬುದು ಈ ಅಧ್ಯಯನದಿಂದ ತಿಳಿದುಬಂದಿದೆ.
Related Articles
Advertisement
ಚೀನಾದಲ್ಲಿ ಈಗ ಅವಾಂತರ ಸೃಷ್ಟಿಯಾಗಿರುವುದು ಒಮಿಕ್ರಾನ್‌ನ ರೂಪಾಂತರಿಯಿಂದ. ಬಿಎಫ್.7 ಉಪತಳಿಯು ಚೀನಾದಲ್ಲಿ ಪತ್ತೆಯಾಗಿದ್ದೇ ಡಿ.9ರಂದು. ತದನಂತರ ಅಲ್ಲಿ ಏಕಾಏಕಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಾ ಸಾಗಿತು. ಆದರೆ, ಭಾರತದಲ್ಲಿ ಈ ಉಪತಳಿಯು ಜುಲೈನಲ್ಲೇ ಪತ್ತೆಯಾಗಿತ್ತು. ಆದರೂ, ಪ್ರಕರಣಗಳ ಸಂಖ್ಯೆ ದೊಡ್ಡಮಟ್ಟದಲ್ಲಿ ಏರಿಕೆಯಾಗಿಲ್ಲ.