ವುಹಾನ್: ಚೀನಾದಲ್ಲಿ ಕೊರೋನಾ ವೈರಸ್ ಭೀತಿ ಮತ್ತಷ್ಟು ಹೆಚ್ಚಾಗಿದ್ದು ಸಾವಿನ ಸಂಖ್ಯೆ ಏರುತ್ತಲೇ ಇದೆ. ಶನಿವಾರ 41 ಜನರು ಈ ಮಾರಾಣಾಂತಿಕ ವೈರಾಣುವಿಗೆ ಬಲಿಯಾಗಿದ್ದರೇ ಇಂದು 56 ಜನರು ಸಾವನ್ನಪ್ಪಿದ್ದಾರೆ. ಸೋಂಕುವಿಗೆ ತುತ್ತಾದವರ ಪ್ರಮಾಣ ಕೂಡ ಏರಿಕೆಯಾಗಿದ್ದು 2,000 ಜನರು ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಷ್ಟ್ರೀಯ ಆರೋಗ್ಯ ಆಯೋಗ ವರದಿಯ ಪ್ರಕಾರ ಶನಿವಾರ ಒಂದೇ ದಿನ 15 ಜನರು ಬಲಿಯಾಗಿದ್ದಾರೆ. ಮಾತ್ರವಲ್ಲದೇ 688 ಹೊಸದಾಗಿ ಸೋಂಕು ಪೀಡಿತರನ್ನು ಪತ್ತೆಹಚ್ಚಲಾಗಿದೆ ಎಂದು ಖಚಿತಪಡಿಸಲಾಗಿದೆ.
ವುಹಾನ್ ಪ್ರಾಂತ್ಯದ ಹುಬೆಯ್ ನಗರದಲ್ಲೇ ಶನಿವಾರ 13 ಜನರು ಮೃತಪಟ್ಟಿದ್ದಾರೆ. ಆ ಮೂಲಕ ಮೊದಲು ವೈರಸ್ ಪತ್ತೆಯಾದ ವುಹಾನ್ ಪ್ರಾಂತ್ಯವೊಂದರಲ್ಲೇ ಬಲಿಯಾದವರ ಸಂಖ್ಯೆ 52 ಕ್ಕೇರಿದೆ.
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ‘ದೇಶವು ಗಂಭೀರ ಪರಿಸ್ಥಿಯನ್ನು’ ಎದುರಿಸುತ್ತಿದೆ. ಸಮರ್ಪಕ ಆರೋಗ್ಯ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಸ್, ರೈಲು, ವಿಮಾನಗಳು ಸಹಿತ ಎಲ್ಲೆಲ್ಲೂ ಸೋಂಕಿತರ ಪತ್ತೆಗೆ ದೇಶವ್ಯಾಪಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
17 ನಗರಗಳಲ್ಲಿ ಜನರು ದಿಗ್ಬಂಧನಕ್ಕೊಳಗಾಗಿದ್ದು, ಒಳಗಿರುವವರು ಹೊರಗೆ ಹೋಗಲೂ ಸಾಧ್ಯವಾಗದೆ, ಹೊರಗಿನವರು ಒಳಗೆ ಬರಲೂ ಸಾಧ್ಯವಾಗದೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ.