Advertisement

ಚೀನಾ ಬತ್ತಳಿಕೆಗೆ ಸೇರಿದ ಮೂರು ಅತ್ಯಾಧುನಿಕ ಯುದ್ಧ ನೌಕೆಗಳು

10:22 PM Apr 25, 2021 | Team Udayavani |

ಬೀಜಿಂಗ್‌: ಚೀನಾ ನೌಕಾಪಡೆ ಮೂರು ಅತ್ಯಾಧುನಿಕ ನೌಕೆಗಳನ್ನು ತನ್ನಲ್ಲಿ ಸೇರ್ಪಡೆಗೊಳಿಸಿದೆ. ಚೀನಾದ ಸಾನ್ಯಾದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಈ ನೌಕೆಗಳನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದ್ದಾರೆ.

Advertisement

ಮೂರರಲ್ಲಿ ಮೊದಲನೆಯದ್ದು ಅತ್ಯಾಧುನಿಕ ವಿಧ್ವಂಸಕಾರಿ ಹಡಗಾಗಿದೆ. ಮತ್ತೂಂದು, ಪರಮಾಣು ಶಕ್ತಿ ಚಾಲಿತ ಜಲಾಂತರ್ಗಾಮಿ. ಇವೆರಡೂ ಬಿಟ್ಟರೆ ಮೂರನೆಯದ್ದು, ಆ ದೇಶದ ಅತಿ ದೊಡ್ಡ ವಿಧ್ವಂಸಕಕಾರಿ ಯುದ್ಧನೌಕೆ ಎನಿಸಿರುವ ಹಾಗೂ ಭೂಮಿ ಮತ್ತು ನೀರಿನಲ್ಲಿ ಚಲಿಸಬಲ್ಲ ಬೃಹತ್‌ ನೌಕೆ. ಇದು 30 ಯುದ್ಧ ಹೆಲಿಕಾಪ್ಟರ್‌ಗಳನ್ನು ಹಾಗೂ ನೂರಾರು ಯೋಧರನ್ನು ಒಟ್ಟಿಗೆ ತನ್ನಲ್ಲಿ ಇರಿಸಿಕೊಂಡು ಪ್ರಯಾಣಿಸಬಲ್ಲದು.

ಇದನ್ನೂ ಓದಿ :ಲಸಿಕೆ ಸ್ವೀಕಾರಕ್ಕೆ ನೋಂದಣಿ ಕಡ್ಡಾಯ : ಮೇ 1ರಿಂದ ಮೂರನೇ ಹಂತದ ಲಸಿಕೆ ವಿತರಣೆ

Advertisement

Udayavani is now on Telegram. Click here to join our channel and stay updated with the latest news.

Next