Advertisement

ಸೊಮಾಲಿಯಾ ಹಡಗು ಹೈಜಾಕ್‌ : ಭಾರತದ ಸಾಹಸ ಕಡೆಗಣಿಸಿದ ಚೀನ

06:01 PM Apr 10, 2017 | Team Udayavani |

ಬೀಜಿಂಗ್‌ : ‘ಗಲ್ಫ್  ಆಫ್ ಏಡನ್‌ನಲ್ಲಿ ಸೊಮಾಲಿ ಕಡಲ್ಗಳ್ಳರು ಹೈಜ್ಯಾಕ್‌ ಮಾಡಿದ್ದ ಹಡಗನ್ನು ರಕ್ಷಿಸಿದ್ದು ತಾನೇ’ ಎಂದು ಭಾರತವನ್ನು ಎಲ್ಲಿಯೂ ಉಲ್ಲೇಖೀಸದೆ ಈ ಸಾಹಸ ಕಾರ್ಯಾಚರಣೆಯ ಪೂರ್ತಿ ಹೆಗ್ಗಳಿಕೆಯನ್ನು  ಚೀನ ಪಡೆದುಕೊಂಡಿದೆ. 

Advertisement

ಈ ಸಾಹಸ ಕಾರ್ಯಾಚರಣೆಯಲ್ಲಿ   ಚೀನೀ ನೌಕಾ ಪಡೆಯ ನೌಕೆಗೆ ಬೆಂಗಾವಲಾಗಿ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ಗಳು ಸಹಕರಿಸಿದ್ದವು. 

“ಏಡನ್‌ ಕೊಲ್ಲಿಯಲ್ಲಿ ಸೊಮಾಲಿ ಕಡಲ್ಗಳ್ಳರ ವಶದಲ್ಲಿದ್ದ ಹಡಗನ್ನು  ಬಿಡಿಸಿಕೊಳ್ಳುವಲ್ಲಿ ನಮ್ಮ ನೌಕಾಪಡೆ ಯೋಧರು ತೋರಿರುವ ಸಾಹಸದಿಂದ ಕಡಲ್ಗಳ್ಳರ ವಿರುದ್ಧ ಹೋರಾಡುವಲ್ಲಿನ ನಮ್ಮ  ಶಕ್ತಿಯ ಪರಿಣಾಮಕಾರಿತ್ವವು ಈಗ ಜಗಜ್ಜಾಹೀರಾಗಿದೆ’ ಎಂದು ಚೀನ ರಕ್ಷಣಾ ಸಚಿವಾಲಯದ ವಕ್ತಾರ ಹುಆ ಚ್ಯುನ್ಯಿಂಗ್‌ ಹೇಳಿದರು. ತಮ್ಮ ಹೇಳಿಕಯಲ್ಲಿ ಎಲ್ಲಿಯೂ ಅವರು ಕಾರ್ಯಾಚರಣೆಗೆ ಸಹಕರಿಸಿದ ಭಾರತವನ್ನು ಉಲ್ಲೇಖೀಸಲಿಲ್ಲ.

ಈ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಯ ಪಾತ್ರವೇನು ಎಂಬ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ನಮಗಿನ್ನೂ ಕಾರ್ಯಾಚರಣೆ ಕುರಿತ ಪೂರ್ಣ ಮಾಹಿತಿ ಸಿಕ್ಕಿಲ್ಲ ಎಂದಷ್ಟೇ ಉತ್ತರಿಸಿದರು. ಎಪ್ರಿಲ್‌ 8ರಂದು ಸಂಜೆ ಐದು ಗಂಟೆಯ ಹೊತ್ತಿಗೆ ಈ ಕಾರ್ಯಾಚರಣೆ ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next