Advertisement
ಜಗತ್ತಿನಲ್ಲಿಯೇ ಭಾರತ ಅಕ್ಕಿ ರಫ್ತು ಮಾಡುವ ಅತೀ ದೊಡ್ಡ ದೇಶವಾಗಿದೆ. ಚೀನಾ ಅತೀ ದೊಡ್ಡ ಆಮದುದಾರ ದೇಶವಾಗಿತ್ತು. ಬೀಜಿಂಗ್ ವಾರ್ಷಿಕವಾಗಿ ಭಾರತದಿಂದ 4 ಮಿಲಿಯನ್ ಟನ್ ಗಳಷ್ಟು ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಗುಣಮಟ್ಟದ ವಿಚಾರದಿಂದಾಗಿ ಚೀನಾ ಭಾರತದ ಅಕ್ಕಿಯನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು.
Related Articles
Advertisement
ಡಿಸೆಂಬರ್ ನಿಂದ ಫೆಬ್ರವರಿವರೆಗೆ ಪ್ರತಿ ಟನ್ ಗೆ 300 ಡಾಲರ್ ನಂತೆ ಒಟ್ಟು ಒಂದು ಲಕ್ಷ ಟನ್ ಅಕ್ಕಿಯನ್ನು ಹಡಗಿನಲ್ಲಿ ಕಳುಹಿಸಲು ವ್ಯಾಪಾರಿಗಳು ಒಪ್ಪಂದ ಮಾಡಿಕೊಂಡಿರುವುದಾಗಿ ಕೈಗಾರಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾಕ್ಕೆ ಥಾಯ್ ಲ್ಯಾಂಡ್, ವಿಯೆಟ್ನಾಂ, ಮ್ಯಾನ್ಮಾರ್ ಹಾಗೂ ಪಾಕಿಸ್ತಾನ ನಿಗದಿತವಾಗಿ ಹೆಚ್ಚುವರಿ ಅಕ್ಕಿ ರಫ್ತು ಮಾಡುವ ಸಾಂಪ್ರದಾಯಿಕ ದೇಶಗಳಾಗಿವೆ ಎಂದು ವರದಿ ಹೇಳಿದೆ.