Advertisement

ಪಾಕ್‌ ಬಂದರಿಗೆ ಬಂತು ಡ್ರ್ಯಾಗನ್‌!

07:36 AM Jun 04, 2020 | mahesh |

ಹೊಸದಿಲ್ಲಿ: ಚೀನದ ಯುದ್ಧ ದಾಹ ಯಾಕೋ ಎಲ್ಲೆಮೀರಿದೆ. ಒಂದೆಡೆ ಲಡಾಖ್‌ನ ಗಡಿಯಲ್ಲಿ ಪೀಪಲ್ಸ್‌ ಲಿಬ ರೇಶನ್‌ ಆರ್ಮಿ ಠಿಕಾಣಿ ಹೂಡಿದ್ದರೆ, ಇನ್ನೊಂದೆಡೆ ಚೀನದ ನೌಕಾದಳವು ಪಾಕಿಸ್ಥಾನದ ಗ್ವದಾರ್‌ ಬಂದರನ್ನು ಭದ್ರ ಯುದ್ಧ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದೆ. ಉಪಗ್ರಹ ತೆಗೆದ ಚಿತ್ರಗಳಲ್ಲಿ ಗ್ವದಾರ್‌ನಲ್ಲಿ ಚೀನ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಸ್ಪಷ್ಟವಾಗಿ ಗೋಚರಿಸಿವೆ. ಅತ್ಯಂತ ವೇಗದಲ್ಲಿ ಗ್ವದಾರ್‌ ಬಂದರಿನ ಚಹರೆಯನ್ನೇ ಬದಲಿಸಿರುವ ಚೀನ, ಅಲ್ಲಿ ಅತ್ಯಾಧುನಿಕ ನೌಕಾನೆಲೆ ನಿರ್ಮಿಸಿದೆ ಎಂದು ಭಾರತೀಯ ರಕ್ಷಣಾ ತಜ್ಞರು ಮಾಹಿತಿ ನೀಡಿದ್ದಾರೆ.

Advertisement

“ಕಾರಿಡಾರ್‌’ ಕಟಾಕ್ಷ: ಚೀನವು ಪಾಕಿಸ್ಥಾನದಲ್ಲಿ ಕೈಗೊಂಡ 46 ಬಿಲಿಯನ್‌ ಡಾಲರ್‌ ವೆಚ್ಚದ ಆರ್ಥಿಕ ಕಾರಿಡಾರ್‌ ಯೋಜನೆಯಡಿ ಗ್ವದಾರ್‌ ಬಂದರನ್ನು ನವೀಕರಿಸುತ್ತಿದೆ. ಯುದ್ಧ ಸಾಮಗ್ರಿ, ಇತ್ಯಾದಿ ಸರಕು ಸಾಗಾಟಕ್ಕಾಗಿ ಚೀನ ಈ ಕಾರಿಡಾರನ್ನು ಬಳಸಿ ಕೊಳ್ಳುತ್ತಿದೆ. ಪಾಕ್‌ನ ಗ್ವದಾರ್‌ ಮುಖ್ಯವಾಗಿ ಇರಾನ್‌ಗೆ ಅತ್ಯಂತ ಹತ್ತಿರದಲ್ಲಿದೆ. ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾ ಸಾಗರ ಮಾರ್ಗಗಳ ಮೇಲೆ ವ್ಯಾಪಾರ ಹಿಡಿತ ಸಾಧಿಸಲು ಚೀನ ಈ ಬಂದ ರನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ.

ನಿರ್ಮಾಣ ಹೇಗಿದೆ?: ಚೀನದ 100ಕ್ಕೂ ಅಧಿಕ ಎಂಜಿನಿಯರ್‌ಗಳು ಗ್ವದಾರ್‌ನ ನವೀಕರಣದಲ್ಲಿ ತೊಡ ಗಿದ್ದಾರೆ. ಬಂದರಿನ ಸುತ್ತಲೂ ವಿದ್ಯುತ್‌ ಬೇಲಿ ಒಳಗೊಂಡ ಎತ್ತರದ ಕಾಂಪೌಂಡ್‌ಗಳನ್ನು ನಿರ್ಮಿ ಸಲಾಗಿದೆ. ಯಾವುದೇ ದಾಳಿಗೂ ನಲುಗದಂತೆ ಗಟ್ಟಿಗೊಳಿಸುತ್ತಿದೆ. ಚೀನ ನೌಕಾ ಪಡೆಯ ಸುಸಜ್ಜಿತ ಬೋಟ್‌ಗಳೂ ತೀರದಲ್ಲಿ ನಿಯೋಜನೆಗೊಂಡಿವೆ.

ಶನಿವಾರ ಮಾತುಕತೆ
ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಸಂಬಂಧ ಭಾರತ- ಚೀನದ ಉನ್ನತ ಮಟ್ಟದ ಸೇನಾಧಿಕಾರಿಗಳು ಜೂ.6ಕ್ಕೆ ಮಾತು ಕತೆ ನಡೆಸಲಿದ್ದಾರೆ. ಭಾರತದ ಗಡಿಯ ಮೀಟಿಂಗ್‌ ಪಾಯಿಂಟ್‌, ಚುಷುಲ್‌- ಮೊಲ್ಡೊನಲ್ಲಿ ಮಾತುಕತೆ ಜರಗಲಿದೆ. ಭಾರತದ ಪರವಾಗಿ ಲೆ.ಜ. ಹರಿಂದರ್‌ ಸಿಂಗ್‌ ಪಾಲ್ಗೊಳ್ಳಲಿದ್ದಾರೆ. ಹಲವು ಸುತ್ತಿನ ಮಾತು ಕತೆಗಳು ಮುರಿದುಬಿದ್ದಿದ್ದು, ಈ ಬಾರಿ ಧನಾ ತ್ಮಕ ಫ‌ಲಿತಾಂಶ ಸಿಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next