Advertisement
– “ಹೌದು’ ಎನ್ನುತ್ತವೆ ಮೂಲಗಳು. ಯಾಕೆಂದರೆ, ಲಿಫ್ಟ್, ಎಸ್ಕಲೇಟರ್, ಸಿಗ್ನಲಿಂಗ್ ಒಳಗೊಂಡಂತೆ ಎಲೆಕ್ಟ್ರಿಕಲ್ ಮತ್ತು ಮೆಕಾನಿಕಲ್ ಉಪಕರಣಗಳು, ಮೆಟ್ರೋ ಬೋಗಿಗಳು ಒಟ್ಟಾರೆ ಯೋಜನೆಯಲ್ಲಿ ಅಗತ್ಯವಿರುವ ಶೇ. 60-70ರಷ್ಟು ಉಪಕರಣಗಳು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಚೀನಾದಿಂದಲೇ ಪೂರೈಕೆ ಆಗುತ್ತವೆ. ಆದರೆ, ಕೋವಿಡ್ ಹಾವಳಿ ಬೆನ್ನಲ್ಲೇ ಭಾರತ-ಚೀನಾ ನಡುವಿನ ಸಂಬಂಧ ಪೂರಕವಾಗಿಲ್ಲ. ಇದೆಲ್ಲವೂ ತಿಳಿಯಾಗುವವರೆಗೆ ಕಾಮಗಾರಿಯನ್ನು ನಿಧಾನಗತಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಆಲೋಚನೆ ನಡೆದಿದೆ.
Related Articles
Advertisement
ಸ್ವಾವಲಂಬನೆಗೆ ಸಕಾಲ : ಒಂದೆಡೆ ಚೀನಾ ಉತ್ಪನ್ನಗಳನ್ನು ತಿರಸ್ಕರಿಸಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈಹಿನ್ನೆಲೆಯಲ್ಲಿ ಮೆಟ್ರೋ ಯೋಜನೆ ಅನುಷ್ಠಾನದಲ್ಲಿ ತಕ್ಕಮಟ್ಟಿಗೆ ಸ್ವಾವಲಂಬನೆ ಸಾಧಿಸಲೂ ಇದು ಸಕಾಲ. ಈಗಾಗಲೇ ಹಲವು ಕಾಮಗಾರಿಗಳಿಗೆ ಟೆಂಡರ್ ನೀಡಿರಬಹುದು. ಆದರೆ, ಇನ್ನೂ ಹಲವು ಮಾರ್ಗಗಳಿಗೆ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಇನ್ನೂ ಮೆಟ್ರೋ ಜಾಲ ವಿಸ್ತರಣೆ ಆಗಲಿದೆ. ಅಂತಹ ಕಡೆ ಪರ್ಯಾಯಗಳನ್ನು ಹುಡುಕುವುದರ ಜತೆಗೆ ರೈಲು, ಟಿಬಿಎಂಮತ್ತಿತರ ಯಂತ್ರೋಪಕರಣಗಳನ್ನು ಸ್ಥಳೀಯವಾಗಿಯೇ ತಯಾರಿಸುವ ಬಗ್ಗೆ ಚಿಂತನೆ ನಡೆಯಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಸುರಂಗದ ಮೇಲೂ ಪರಿಣಾಮ : “ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗ ಮಾರ್ಗ ನಿರ್ಮಾಣದ ಮೇಲೂ ಭಾರತ-ಚೀನಾ ನಡುವಿನ ಸಂಘರ್ಷ ಪರಿಣಾಮ ಬೀರುವ ಸಾಧ್ಯತೆ ಇದೆ. ಈಗಾಗಲೇ ಗುತ್ತಿಗೆ ಪಡೆದ ಚೀನಾ ರೈಲ್ವೆ ಕನ್ ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ (ಸಿಆರ್‌ಸಿಎಚ್‌ಐ) ಸುರಂಗ ಕೊರೆಯಲು ಅಗತ್ಯವಿರುವ ಎರಡು ಟನಲ್ ಬೋರಿಂಗ್ ಮಷಿನ್ (ಟಿಬಿಎಂ)ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈ ಪೈಕಿ ಒಂದನ್ನು ಶಿವಾಜಿನಗರ ನಿಲ್ದಾಣ ಮತ್ತೂಂದು ಕಂಟೋನ್ಮೆಂಟ್ ಬಳಿ ಕಾರ್ಯಾಚರಣೆಗೆ ಅಣಿಗೊಳಿಸಲಾಗಿದೆ. ಆದರೆ, ಇನ್ನೂ ಎರಡು ಟಿಬಿಎಂಗಳ ಅವಶ್ಯಕತೆಯಿದ್ದು, ಚೀನಾದಿಂದ ಬರಬೇಕಿದೆ. ಇದರ ಪೂರೈಕೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲದೆ, ಕಾರ್ಯಾಚರಣೆ ವೇಳೆ ಯಂತ್ರಗಳಲ್ಲಿನ ಯಾವುದೇ ಉಪಕರಣ ಹಾಳಾದರೂ ಚೀನಾದಿಂದಲೇ ಪೂರೈಕೆ ಆಗಬೇಕು. ಜತೆಗೆ ಈ ಯಂತ್ರವನ್ನು ಮುನ್ನಡೆಸುವ ತಂಡ ಕೂಡ ಅಲ್ಲಿಂದ ಬರಬೇಕಿದ್ದು, ವೀಸಾ ಮತ್ತಿತರ ಅಡ್ಡಿ ಆತಂಕಗಳು ಎದುರಾಗಲಿವೆ.
–ವಿಜಯಕುಮಾರ್ ಚಂದರಗಿ