Advertisement

‘ಬೆಲ್ಟ್ ಆ್ಯಂಡ್‌ ರೋಡ್‌’ಯೋಜನೆ ನಿರ್ಮಿಸಲು ಸಿದ್ಧ: ಬಾಂಗ್ಲಾ ಜತೆಗೆ ಚೀನ ಸ್ನೇಹದ ನಾಟಕ

07:59 AM Oct 05, 2020 | keerthan |

ಬೀಜಿಂಗ್: ಕುತಂತ್ರಿ ಚೀನ ಈಗ ಭಾರತದ ನೆರೆಯ ರಾಷ್ಟ್ರಗಳ ಜತೆಗೆ ಸ್ನೇಹದ ನಾಟಕ ಆರಂಭಿಸಿದೆ. ಬಾಂಗ್ಲಾದೇಶದಲ್ಲೂ ಬಹು ಬಿಲಿಯನ್‌ ಡಾಲರ್‌ ವೆಚ್ಚದ “ಬೆಲ್ಟ್ ಆ್ಯಂಡ್‌ ರೋಡ್‌’ ಯೋಜನೆ (ಬಿಆರ್‌ಐ) ನಿರ್ಮಿಸಲು ತಾನು ಸಿದ್ಧ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಘೋಷಿಸಿದ್ದಾರೆ.

Advertisement

ಚೀನ- ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಂಬಂಧದ 45 ವಾರ್ಷಿಕೋತ್ಸವ ಸಭೆಯಲ್ಲಿ ಜಿನ್‌ಪಿಂಗ್‌ ಹೀಗೆ ಹೇಳಿದ್ದಾರೆ. ಬಿಆರ್‌ಐ ಮೂಲಕ ಬಾಂಗ್ಲಾ- ಚೀನಾ ನಡುವಿನ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದಾಗಿ ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ:ಉಗ್ರರಿಗೆ ಸೇನೆಯ ಶ್ವಾನಭಯ: “ರಫ್ಲಿಂಗ್‌ ರೋಶ್‌’ಗೆ ಬೆಚ್ಚಿ ಬೀಳುವ ಉಗ್ರರು

ಏನಿದು ಬಿಆರ್‌ಐ?: 2013ರಲ್ಲಿ ಚೀನಾ ಜಾರಿ ತಂದ ಮಹತ್ವದ ಯೋಜನೆ ಇದು. ವಾಣಿಜ್ಯ ಉದ್ದೇಶದಿಂದ ಏಷ್ಯಾ- ಯುರೋಪ್‌ ನಿಂದ ಆಫ್ರಿಕದವರೆಗೆ ಒಂದೇ ರಸ್ತೆ ನಿರ್ಮಿಸುವ ಯೋಜನೆ ಇದಾಗಿದೆ. ಸರಿಸುಮಾರು 70 ರಾಷ್ಟ್ರಗಳಿಗೆ ಈ ರಸ್ತೆ ಮೂಲಕ ಸಂಪರ್ಕ ಸಾಧಿಸುವುದು ಚೀನಾದ ಗುರಿ. ಈಗಾಗಲೇ ಪಾಕಿಸ್ಥಾನದಲ್ಲಿ ಬಿಆರ್‌ಐ ಭಾಗವಾಗಿ “ಸಿಪಿಇಸಿ’ ಕಾಮಗಾರಿ ನಿರ್ಣಾಯಕ ಹಂತ ತಲುಪಿದೆ. ಭಾರತವನ್ನು ಸುತ್ತುವರಿದು ಈ ರಸ್ತೆಗಳನ್ನು ನಿರ್ಮಿಸು ವುದು ಚೀನಾದ ಒಳತಂತ್ರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next