Advertisement

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

05:10 PM Sep 22, 2023 | Team Udayavani |

ಹೊಸದಿಲ್ಲಿ: ಹ್ಯಾಂಗ್ ಝೂ ನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕೂಟದಲ್ಲಿ ಭಾಗವಹಿಸಬೇಕಾಗಿದ್ದ ಅರುಣಾಚಲ ಪ್ರದೇಶದ ಮೂವರು ಆಟಗಾರರಿಗೆ ಚೀನಾ ವೀಸಾ ನಿರಾಕರಿಸಿದೆ. ಭಾರತ ಸರ್ಕಾರವು ಚೀನಾ ನಿರ್ಧಾರಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ. ಭಾರತದ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಉದ್ದೇಶಿತ ಚೀನಾ ಭೇಟಿಯನ್ನೂ ರದ್ದು ಮಾಡಲಾಗಿದೆ.

Advertisement

ಆಟಗಾರರಾಗಿ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಅವರಿಗೆ ಚೀನಾದ ಅಧಿಕಾರಿಗಳು “ಉದ್ದೇಶಿತ ಮತ್ತು ಪೂರ್ವಭಾವಿ ಯೋಜಿತ ರೀತಿಯಲ್ಲಿ” ಪ್ರವೇಶವನ್ನು ನಿರಾಕರಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಉಳಿದ ಏಳು ಆಟಗಾರರು ಮತ್ತು ಸಿಬ್ಬಂದಿಯನ್ನು ಒಳಗೊಂಡಿರುವ ತಂಡವು ಹಾಂಗ್ ಕಾಂಗ್‌ ಮೂಲಕ ಹ್ಯಾಂಗ್‌ ಝೂ ವಿಮಾನ ಏರಿದರು.

“ವಾಸಸ್ಥಳ ಅಥವಾ ಜನಾಂಗೀಯತೆಯ ಆಧಾರದ ಮೇಲೆ ಭಾರತೀಯ ನಾಗರಿಕರನ್ನು ಭಿನ್ನವಾಗಿ ನಡೆಸಿಕೊಳ್ಳುವುದನ್ನು ಭಾರತವು ದೃಢವಾಗಿ ತಿರಸ್ಕರಿಸುತ್ತದೆ” ಎಂದು ಗೃಹ ಸಚಿವಾಲಯವು ಹೇಳಿದೆ. ಅರುಣಾಚಲ ಪ್ರದೇಶವು “ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗ” ಎಂದು ಸರ್ಕಾರ ಪ್ರತಿಪಾದಿಸಿದೆ.

“ನಮ್ಮ ಕೆಲವು ಕ್ರೀಡಾಪಟುಗಳ ಉದ್ದೇಶಪೂರ್ವಕ ಮತ್ತು ಆಯ್ದ ಅಡಚಣೆ ಗಾಗಿ ಬೀಜಿಂಗನ್ನು ದೂಷಿಸಿದ ಸರ್ಕಾರ, “ಚೀನಾದ ಕ್ರಮವು ಏಷ್ಯನ್ ಗೇಮ್ಸ್ ಮತ್ತು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ನಿಯಮಗಳನ್ನು ಉಲ್ಲಂಘಿಸುತ್ತದೆ” ಎಂದು ಹೇಳಿದೆ.

Advertisement

“ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಸರ್ಕಾರ ಹೊಂದಿದೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ದೆಹಲಿಯ ಜವಾಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ಗೆ ಭಾರತೀಯ ಆಟಗಾರರನ್ನು ಮರಳಿ ಕರೆತರಲಾಯಿತು.

ಈತನ್ಮಧ್ಯೆ, ಭಾರತೀಯ ಆಟಗಾರರಿಗೆ ಚೀನಾಕ್ಕೆ ಪ್ರವೇಶ ನಿರಾಕರಿಸಲಾಗಿದೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಆ ದೇಶದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್, “ಆತಿಥೇಯ ರಾಷ್ಟ್ರವಾಗಿ, ಚೀನಾ ಎಲ್ಲಾ ದೇಶಗಳ ಕಾನೂನುಬದ್ಧ ದಾಖಲೆಗಳನ್ನು ಹೊಂದಿರುವ ಕ್ರೀಡಾಪಟುಗಳನ್ನು ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಹ್ಯಾಂಗ್‌ ಝೂಗೆ ಬರಲು ಸ್ವಾಗತಿಸುತ್ತದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next