ಬೀಜಿಂಗ್: “ನೀವು ನಮ್ಮ ದೇಶದಲ್ಲಿ ಆನ್‌ಲೈನ್ ಮೂಲಕ ಧರ್ಮದ ಪ್ರಚಾರ ಮಾಡುವುದು ಬೇಡ’ ಹೀಗೆಂದು ಚೀನ ಸರಕಾರ ವಿದೇಶಗಳ ಧಾರ್ಮಿಕ ಸಂಘಟನೆಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ, ತಡೆಯೊಡ್ಡಿದೆ.
ದೇಶದ ಸಾರ್ವಭೌಮತೆಗೆ ಇಂಥ ಪ್ರಚಾರಗಳಿಂದ ಧಕ್ಕೆ ಉಂಟಾಗಲಿದೆ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಸರಕಾರ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಸಮ ರ್ಥನೆಯನ್ನೂ ನೀಡಿದೆ.
ಚೀನದ ಧಾರ್ಮಿಕ ವ್ಯವಸ್ಥೆಯ ನಿಯಂತ್ರಣ ವ್ಯವಸ್ಥೆಯ ಪರವಾನಿಗೆ ಇದ್ದರೆ ಮಾತ್ರ ಆನ್‌ಲೈನ್‌ನಲ್ಲಿ ಧರ್ಮಪ್ರಚಾರ ಕೈಗೊಳ್ಳಲು ಅವಕಾಶ ಇದೆ.
ಇದನ್ನೂ ಓದಿ:ಟಿಪ್ಪು ಸುಲ್ತಾನ್, ಬಾಬರ್ ಬಗ್ಗೆ ಪಾಕ್‌ನಿಂದ ಬಯೋಪಿಕ್: ಚೌಧರಿ
ಆನ್‌ಲೈನ್ ಪ್ರಚಾರಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿ ಅಥವಾ ಸಂಘಟನೆ ಚೀನದಲ್ಲಿಯೇ ಇರಬೇಕು ಮತ್ತು ನೆಲದ ಕಾನೂನಿಗೆ ಮಾನ್ಯತೆ ನೀಡುವವರಾಗಿರಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಇಷ್ಟು ಮಾತ್ರವಲ್ಲದೆ ಧಾರ್ಮಿಕ ಕಾರ್ಯಕ್ರಮಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ಅನ್ನೂ ನಿಷೇಧಿಸಲಾಗಿದೆ.