Advertisement

ಸ್ಟಾಕ್‌ ಮಾರ್ಕೆಟ್‌ ನಂ. 2 ಪಟ್ಟದಿಂದ ಚೀನಾ ಕುಸಿತ? 

06:00 AM Jun 21, 2018 | Team Udayavani |

ನವದೆಹಲಿ: ವಿಶ್ವದಲ್ಲೇ 2ನೇ ಅತಿದೊಡ್ಡ ಷೇರು ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಚೀನಾದ ಷೇರು ಮಾರುಕಟ್ಟೆ ಈ ಪಟ್ಟವನ್ನು ಕಳೆದುಕೊಳ್ಳುವ ಆತಂಕ ಹೊಂದಿದೆ. ಜನವರಿಯಲ್ಲಿ 1.60 ಲಕ್ಷ ಕೋಟಿ ಡಾಲರ್‌ ಮೌಲ್ಯ ಹೊಂದಿದ್ದ ಮಾರುಕಟ್ಟೆ ಸತತ ಕುಸಿಯುತ್ತಿದೆ. ಮಂಗಳವಾರ 40 ಸಾವಿರ ಕೋಟಿ ಡಾಲರ್‌ ಕುಸಿದಿದ್ದು, ಇನ್ನೊಂದು ದಿನ ಇದೇ ಮೊತ್ತ ಕುಸಿತ ಕಂಡರೆ ಜಪಾನ್‌ ಮಾರುಕಟ್ಟೆಯ ಮೌಲ್ಯಕ್ಕಿಂತ ಕಡಿಮೆಯಾಗಲಿದೆ.

Advertisement

2014ರ ವೇಳೆಗೆ ಜಪಾನ್‌ ಮೀರಿಸಿದ್ದ ಚೀನಾ ಏಷ್ಯಾದ ಅತ್ಯಂತ ಪ್ರಮುಖ ಷೇರು ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಚೀನಾ ಉತ್ಪನ್ನಗಳ ಮೇಲೆ ಅಮೆರಿಕದ ತೆರಿಗೆ ಹೇರಿಕೆಯಿಂದಾಗಿ ಆರ್ಥಿಕತೆ ಕುಸಿಯುತ್ತಿದೆ. ಅಮೆರಿಕದ ಮಾರುಕಟ್ಟೆ ವಿಶ್ವದಲ್ಲೇ ಅತಿದೊಡ್ಡದಾಗಿದ್ದು, 31 ಲಕ್ಷ ಕೋಟಿ ಡಾಲರ್‌ ಮೌಲ್ಯ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next