Advertisement

ಭಾರತದಲ್ಲಿ ಚೀನದ ನೂತನ ರಾಯಭಾರಿಯಾಗಿ ಸನ್‌ ವೀಡಾಂಗ್‌ ನೇಮಕ

10:11 AM Jun 13, 2019 | Team Udayavani |

ಬೀಜಿಂಗ್‌ : ಹಿರಿಯ ಚೀನೀ ರಾಜತಂತ್ರಜ್ಞ ಸನ್‌ ವೀಡಾಂಗ್‌ ಅವರನ್ನು ಚೀನ ಭಾರತಕ್ಕೆ ತನ್ನ ಹೊಸ ರಾಯಭಾರಿಯನ್ನಾಗಿ ನೇಮಿಸಿದೆ.

Advertisement

ಭಾರತದ ಈಗಿನ ವಿದೇಶ ವ್ಯವಹಾರಗಳ ಸಚಿವರಾಗಿರುವ ಎಸ್‌ ಜೈಶಂಕರ್‌ ಈ ಹಿಂದೆ ಬೀಜಿಂಗ್‌ ನಲ್ಲಿ ಭಾರತದ ರಾಯಭಾರಿಯಾಗಿದ್ದ ವೇಳೆ ಸನ್‌ ವೀಡಾಂಗ್‌ ಅವರೊಂದಿಗೆ ನಿಕಟವಾಗಿ ದುಡಿದಿದ್ದರು. ವೀಡಾಂಗ್‌ ಅವರು ದಕ್ಷಿಣ ಏಶ್ಯ ವಿಷಯಗಳ ಪರಿಣತರಾಗಿದ್ದಾರೆ.

ಈ ಹಿಂದೆ ಪಾಕಿಸ್ಥಾನದಲ್ಲಿನ ಚೀನ ರಾಯಭಾರಿಯಾಗಿಯೂ ದುಡಿದ್ದ ಸನ್‌ ವೀಡಾಂಗ್‌ ಅವರು ಪ್ರಕೃತ ಚೀನದ ವಿದೇಶ ಸಚಿವಾಲಯದ ನೀತಿ ಮತ್ತು ಯೋಜನೆ ರೂಪಣೆ ವಿಭಾಗದ ಮಹಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸನ್‌ ಅವರು ಲೂ ಝಾವೋಹುಯಿ ಅವರ ಉತ್ತರಾಧಿಕಾರಿಯಾಗಿದ್ದಾರೆ. ಲೂ ಅವರನ್ನು ಚೀನ ಸರಕಾರ, ವಿದೇಶ ವ್ಯವಹಾರ ಗಳ ಉಪ ಸಚಿವರನ್ನಾಗಿ ನೇಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next