Advertisement

ಫೆ.11ರಂದು ಪ್ರಶಸ್ತಿ ಸ್ವೀಕರಿಸಬೇಕಿದ್ದ ಚಿ.ಮೂ!

10:01 AM Jan 13, 2020 | Lakshmi GovindaRaj |

ಬೆಂಗಳೂರು: ಡಾ.ಎಂ. ಚಿದಾನಂದ ಮೂರ್ತಿ ಅವರು 2018ನೇ ಸಾಲಿನ “ಡಾ ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಫೆ.11ರಂದು ಪ್ರಶಸ್ತಿ ಸಮಾರಂಭ ನಿಗದಿಯಾಗಿತ್ತು! 15 ದಿನಗಳ ಹಿಂದೆಯೇ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ.8ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಸಲು ಸಿದ್ಧತೆ ನಡೆಸಲಾಗಿತ್ತು.

Advertisement

ಆಮಂತ್ರಣ ಪ್ರತಿಕೆಯನ್ನೂ ಮುದ್ರಣಕ್ಕೆ ಕಳುಹಿಸಲಾಗಿತ್ತು. ಆದರೆ, ಅಂದು ಭಾರತ್‌ ಬಂದ್‌ ಹಿನ್ನಲೆ ಕಾರ್ಯಕ್ರಮ ಕೊನೇ ಹಂತದಲ್ಲಿ ಮುಂದೂ ಡಲ್ಪಟ್ಟಿತ್ತು.ಮುಂದೂಡಿದ ಕಾರ್ಯಕ್ರಮವು ಫೆ.11ರಂದು ನಿಗದಿಯಾಗಿದ್ದು, ಇದೀಗ ಪ್ರಶಸ್ತಿ ಪಡೆಯಲು ಚಿ.ಮೂ ಅವರೇ ಇಲ್ಲವಾಗಿದ್ದಾರೆ. ಈ ಪ್ರಶಸ್ತಿಯು 75 ಸಾವಿರ ನಗದು, ಫ‌ಲಕ, ಸ್ಮರಣಿಕೆ ಒಳಗೊಂಡಿದ್ದು, ಎಲ್ಲಾ ಅಂದುಕೊಂಡಂತಾಗಿದ್ದರೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ನಯನ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿದ್ದರು.

ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದ ಇಬ್ಬರು ಸಾಧಕರು ನಿಧನ: ಪ್ರಶಸ್ತಿ ಘೋಷಣೆ ಯಾದ ಮರುದಿನವೇ “ಡಾ.ಜಿ.ಪಿ.ರಾಜರತ್ನಂ ಸಾಹಿತ್ಯ ಪರಿಚಾರಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದ ಕಾರ್ಕಳದ ಪ್ರೊ.ಎಂ. ರಾಮಚಂದ್ರ ಅವರು ನಿಧನರಾಗಿದ್ದರು.

ಕನ್ನಡ ಪುಸ್ತಕ ಪ್ರಾಧಿಕಾರ 2018ನೇ ಸಾಲಿನ ಡಾ. ಎಂ.ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿಗೆ ಚಿದಾನಂದ ಮೂರ್ತಿ ಅವರನ್ನು ಆಯ್ಕೆ ಮಾಡಿತ್ತು. ಫೆ. 11 ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಿಗದಿಯಾಗಿತ್ತು. ಅದಕ್ಕೂ ಮುನ್ನವೇ ಅವರು ವಿಧಿವಶರಾಗಿದ್ದು ನಮ್ಮ ದುರ್ದೆçವ. ಅವರ ನಿಧನದಿಂದ ಕನ್ನಡ ಸಾಹಿತ್ಯ ಒಂದು ತಲೆಮಾರಿನ ಕೊಂಡಿಯನ್ನು ಕಳಚಿಕೊಂಡಿದೆ.
-ಡಾ.ಎಂ.ಎನ್‌. ನಂದೀಶ್‌ ಹಂಚೆ, ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ

ಚಿಮೂ ಅವರ ಪ್ರಮುಖ ಕೃತಿಗಳು: ವೀರಶೈವ ಧರ್ಮ, ಭಾರತೀಯ ಸಂಸ್ಕೃತಿ ಪ್ರಕಾಶನ, ವಾಗರ್ಥ, ವಚನ ಸಾಹಿತ್ಯ, Sweetness and light Sahithigala Kalavidara Balaga.

Advertisement

ಸಂಶೋಧನೆ: ಸಂಶೋಧನಾ ತರಂಗ, ಪುರಾಣ ಸೂರ್ಯಗ್ರಹಣ, ಪಾಂಡಿತ್ಯ ರಸ, ಶೂನ್ಯ ಸಂಪಾದನೆಯನ್ನು ಕುರಿತು, ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ, ಲಿಂಗಾಯತ ಅಧ್ಯಯನಗಳು, ವಾಗ್ದೇವಿ ಪುಸ್ತಕಗಳು, ಕವಿರಾಜಮಾರ್ಗಕ್ಕೆ ಹಿಂದಿನ ಕನ್ನಡ ಸಾಹಿತ್ಯ, ಕರ್ನಾಟಕ ಸಂಸ್ಕೃತಿ, ಕನ್ನಡಾಯಣ, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಚಿದಾನಂದ ಸಮಗ್ರ ಸಂಪುಟ. ಬಸವಣ್ಣ.

ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.(ಹೊಸತು ಹೊಸತು ಕೃತಿ), ಪಂಪ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ.

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next