ಹೊಸದಿಲ್ಲಿ : ಸ್ವಘೋಷಿತ ದೇವಮಾನವ ಬಾಬಾ ವೀರೇಂದ್ರ ದೇವ ದೀಕ್ಷಿತ್ ಅವರ ವಿವಾದಾತ್ಮಕ ಆಶ್ರಮ ಆಧ್ಯಾತ್ಮಿಕ ವಿಶ್ವ ವಿದ್ಯಾಲಯದ ದಿಲ್ಲಿಯಲ್ಲಿನ ಎಲ್ಲ ಎಂಟು ಕೇಂದ್ರಗಳ ಮೇಲೆ ದಿಲ್ಲಿ ಹೈಕೋರ್ಟ್ ಆದೇಶದ ಪ್ರಕಾರ ದಾಳಿ ನಡೆಸಿದ ವೇಳೆ ನಡುಕ ಹುಟ್ಟಿಸುವ ಅನೇಕ ವಿವರಗಳು ಬಯಲಾಗಿವೆ.
ಕಳೆದ 22 ವರ್ಷಗಳಿಂದಲೂ ಇಲ್ಲಿ ಮಹಿಳೆಯರನ್ನು ಅಕ್ರಮ ಬಂಧನದಲ್ಲಿಟ್ಟು ಅವರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ; ಆಧ್ಯಾತ್ಮಕ ವಿಶ್ವ ವಿದ್ಯಾಲಯದವಾರದ ಅವರನ್ನು ಬಸ್ಸಿನಲ್ಲಿ ಅಜ್ಞಾತ ಸ್ಥಳಕ್ಕೆ ಒಯ್ದು ಅಲ್ಲಿ ಅವರಿಗೆ ವೇಶ್ಯಾಗಾರಿಕೆಯ ತರಬೇತಿ ನೀಡಿ ಅವರನ್ನು ಅಕ್ರಮ ಮೈಮಾರುವ ಧಂಧೆಗೆ ಬಳಲಾಗುತ್ತಿದೆ; ಆಶ್ರಮದಲ್ಲಿ ತುಂಬಿಟ್ಟ ಅನೇಕ ಚೀಲಗಳಲ್ಲಿ ಸಿರಿಂಜ್ ಮತ್ತು ಮಾದಕ ದ್ರವ್ಯಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ.
ವಿಶ್ವವಿದ್ಯಾಲಯ ಸ್ಥಾಪನೆಗೆಂದು ಸರಕಾರ ನೀಡಿರುವ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಆಧ್ಯಾತ್ಮಿಕ ವಿಶ್ವ ವಿದ್ಯಾಲಯವನ್ನು ಬಾಬಾ ವೀರೇಂದ್ರ ದೇವ ದೀಕ್ಷಿತ್ ಸೆಕ್ಸ್ ಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಅವರ ಈ ಸಂಸ್ಥೆ ನೋಂದಾವಣೆಗೊಳ್ಳದ ಸೊಸೈಟಿಯಾಗಿದೆ.
ವೀರೇಂದ್ರ ದೇವ ದೀಕ್ಷಿತ್ ಅವರು ತಮ್ಮ ಈ ಆಧ್ಯಾತ್ಮಿಕ ಕೇಂದ್ರವನ್ನು ಸೇರುವ ಹುಡುಗಿಯರಿಂದ ಅಫಿದಾವಿತ್ ಬರೆಸಿಕೊಂಡಿದ್ದಾರೆ. ತಾವೆಂದೂ ತಮ್ಮ ಹೆತ್ತವರು ಕಾಣಲು ಮನೆಗೆ ಹೋಗುವುದಿಲ್ಲ ಎಂದು ಅವರು ಅಫಿದಾವಿತ್‌ನಲ್ಲಿ ಬರೆದುಕೊಟ್ಟಿದ್ದಾರೆ.
Related Articles
ದೀಕ್ಷಿತ್ ಅವರ ಒಟ್ಟು ಕಾರ್ಯ ವೈಖರಿ ಈಚೆಗೆ ಜೈಲುಪಾಲಾಗಿರುವ ವಿವಾದಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರ ಕಾರ್ಯವೈಖರಿಯನ್ನು ಹೋಲುತ್ತದೆ.
ದಿಲ್ಲಿ ಹೈಕೋರ್ಟಿನ ಜಸ್ಟಿಸ್ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಸಿ ಹರಿ ಶಂಕರ್ ಅವರನ್ನು ಒಳಗೊಂಡ ವಿಭಾಗೀಯ ಪೀಠದ ಆದೇಶದ ಪ್ರಕಾರ ದಿಲ್ಲಿ ಪೊಲೀಸರು ಮತ್ತು ದಿಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಜಂಟಿ ದಾಳಿಯಲ್ಲಿ ಈ ಬಗೆಯ ಹಲವು ಆಘಾತಕಾರಿ ವಿವರಗಳು ಬಯಲಾಗಿವೆ.
ದಿಲ್ಲಿಯ ರೋಹಿಣಿಯಲ್ಲಿನ ವಿಜಯ ವಿಹಾರದಲ್ಲಿರುವ ಬಾಬಾ ದೀಕ್ಷಿತ್ ಅವರ ಕೇಂದ್ರ ಹಾಗೂ ಇತರ ಕೇಂದ್ರಗಳ ಮೇಲೆ ನಡೆಸಲಾದ ದಾಳಿಯಲ್ಲಿ ಕಳೆದ 22 ವರ್ಷಗಳಿಂದಲೂ ಬಂಧಿಗಳಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿರುವ ಹಲವಾರು ಮಹಿಳೆಯರನ್ನು ರಕ್ಷಿಸಲಾಗಿದೆ.