Advertisement

ಮೆಣಸಿನಕಾಯಿ ದರದಲ್ಲಿ ದಿಢೀರ್‌ ಕುಸಿತ : ಆವಕ ಪ್ರಮಾಣವೂ ಇಳಿಮುಖ

03:47 PM Jan 08, 2021 | Team Udayavani |

ಬ್ಯಾಡಗಿ: ಗುರುವಾರ ಬೆಳ್ಳಂ ಬೆಳಿಗ್ಗೆ ಸುರಿದ ಅಕಾಲಿಕ ಮಳೆಯಿಂದ ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಕ್ವಿಂಟಲ್‌ ಗೆ 44 ಸಾವಿರ ರೂ. ದರ ಪಡೆಯುವ ಮೂಲಕ ದಿಢೀರ್‌ ಕುಸಿತ ಕಂಡಿದೆ. ಅಲ್ಲದೇ, ಆವಕ ಪ್ರಮಾಣವೂ ಇಳಿಮುಖವಾಗಿತ್ತು.

Advertisement

ಕಳೆದ ಹಲವು ವಾರಗಳಿಂದ ಲಕ್ಷಕ್ಕೂ ಅಧಿಕವಾಗಿದ್ದ ಮೆಣಸಿಕಾಯಿ ಚೀಲಗಳ ಆವಕ ಇದೀಗ 94 ಸಾವಿರದ ಗಡಿಗೆ ಬಂದು ತಲುಪಿದೆ. ಪರಿಣಾಮ ಆವಕದಲ್ಲಿ ಗುರುವಾರ ಇಳಿಮುಖ ಕಂಡು ಬಂದಿತು.

ಟೆಂಡರ್‌ ಪ್ರಕ್ರಿಯೆ ವಿಳಂಬ: ಗುರುವಾರ ಬೆಳ್ಳಂಬೆಳಿಗ್ಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ಒಂದು ಗಂಟೆ ತಡವಾಗಿ ಆರಂಭಿಸಲಾಯಿತು. ಗುರುವಾರದ ಮಾರುಕಟ್ಟೆಗೆ ಬುಧವಾರ ರಾತ್ರಿಯಿಂದಲೇ ಮೆಣಸಿಕಾಯಿ ಚೀಲಗಳ ಆವಕ ಆರಂಭವಾಗಿತ್ತು. ಮೆಣಸಿನಕಾಯಿ ಚೀಲಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿನ ಅಂಗಡಿಗಳ ಎದುರು ಟೆಂಡರ್‌ ಗೆ ಇಡಲಾಗಿತ್ತು. ಆದರೆ, ಗುರುವಾರ ಬೆಳಿಗ್ಗೆ ಏಕಾಏಕಿ ಸುರಿದ ಮಳೆಯಿಂದಾಗಿ
ಆತಂಕಗೊಂಡ ರೈತರು ಹಾಗೂ ವ್ಯಾಪಾರಸ್ಥರು ಮೆಣಸಿನಕಾಯಿ ಚೀಲಗಳ ರಕ್ಷ‚ಣೆಗೆ ಮುಂದಾದರು. ಇಷ್ಟಾದರೂ ಕೆಲ
ಕಡೆಗಳಲ್ಲಿ ಚೀಲಗಳು ತೊಯ್ದ ಪರಿಣಾಮ ಮೆಣಸಿಕಾಯಿಯನ್ನು ಒಣಗಿಸುವ ಕಾರ್ಯದಲ್ಲಿ ರೈತರು ಮುಂದಾದರು. ಈ ಹಿನ್ನೆಲೆಯಲ್ಲಿ ಟೆಂಡರ್‌ ಪ್ರಕ್ರಿಯೆಯನ್ನು ವರ್ತಕರ ಸಂಘದ ಆದೇಶದ ಮೇರೆಗೆ ಒಂಡು ಗಂಟೆ ತಡವಾಗಿ ಆರಂಭಿಸಲಾಯಿತು.

ದರದಲ್ಲಿ ದಿಢೀರ್‌ ಕುಸಿತ: ಕಳೆದ ಒಂದು ತಿಂಗಳಿನಿಂದ ದರದಲ್ಲಿ ದಾಖಲೆ ಸೃಷ್ಟಿಸಿದ್ದ ಮೆಣಸಿನಕಾಯಿ ದರದಲ್ಲಿ ಗುರುವಾರ
ದಿಢೀರ್‌ ಕುಸಿತ ಕಂಡು ಬಂದಿತು. ಕಳೆದ ವಾರ 55 ಸಾವಿರ ಆಸುಪಾಸಿನಲ್ಲಿದ್ದ ಡಬ್ಬಿ ಮೆಣಸಿನಕಾಯಿ ಈ ವಾರ 44 ಸಾವಿರ
ರೂ. ದರ ಪಡೆದುಕೊಂಡಿದೆ. ಉಳಿದಂತೆ ಕಡ್ಡಿ ಹಾಗೂ ಗುಂಟೂರ ತಳಿಗಳಲ್ಲಿ ಇಳಿಕೆ ಕಂಡು ಬಂದಿದೆ. ಅಕಾಲಿಕ ಮಳೆಯ
ಪರಿಣಾಮ ಮೆಣಸಿನಕಾಯಿ ತೇವಾಂಶಕ್ಕೆ ತುತ್ತಾದ ಕಾರಣ ಮೆಣಸಿನಕಾಯಿ ದರದಲ್ಲಿ ಇಳಿಮುಖ ಕಂಡುಬಂದಿದೆ ಎನ್ನಲಾಗುತ್ತಿದೆ.

ಗುರುವಾರದ ಮಾರುಕಟ್ಟೆ ದರ: ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಟ್ಟು 94080 ಮೆಣಸಿನಕಾಯಿ ಚೀಲಗಳು ಆವಕವಾಗಿದ್ದು, ಬ್ಯಾಡಗಿ ಕಡ್ಡಿ ತಳಿ ಪ್ರತಿ ಕ್ವಿಂಟಲ್‌ಗೆ ಕನಿಷ್ಟ 1309, ಗರಿಷ್ಟ 30111 ಮಾದರಿ 12869 ದರಗಳಿಗೆ ಮಾರಾಟ ವಾದರೇ, ಡಬ್ಬಿ ತಳಿ ಕನಿಷ್ಟ 2509, ಗರಿಷ್ಟ 44319, ಸರಾಸರಿ 16800 ಹಾಗೂ ಗುಂಟೂರ ತಳಿ ಕನಿಷ್ಟ 700, ಗರಿಷ್ಟ 12047, ಮಾದರಿ 6209 ರೂ.ಗೆ ಮಾರಾಟವಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next