Advertisement
ತೆಲಂಗಾಣದ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಚಿಲ್ಕೂರು ಬಾಲಾಜಿ ದೇವಸ್ಥಾನ ಬಹಳ ವಿಶೇಷತೆಗಳನ್ನು ಹೊಂದಿರುವ ದೇವಸ್ಥಾನವಾಗಿದೆ. ಇಲ್ಲಿ ದಿನವೊಂದಕ್ಕೆ ಸಾವಿರಾರು ಮಂದಿ ಭಕ್ತರು ಈ ದೇವಳಕ್ಕೆ ಬರುತ್ತಾರೆ. ಇದರಲ್ಲಿ ಸುಮಾರು 80% ಮಂದಿ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳುವವರು ಅಲ್ಲದೆ ವಿದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲೆಂದು ವಿದೇಶಕ್ಕೆ ಪ್ರಯಾಣ ಬೆಳೆಸುವವರ ಸಂಖ್ಯೆಯ ಹೆಚ್ಚಾಗಿರುತ್ತದೆ ಕಾರಣ, ವಿದೇಶಕ್ಕೆ ತೆರಳಬೇಕಾದರೆ ವೀಸಾ ಅಗತ್ಯ.. ಕೆಲವೊಂದು ಜನರಿಗೆ ವೀಸಾ ಬಹು ಬೇಗನೆ ಸಿಗುತ್ತದೆ. ಇನ್ನು ಕೆಲವರಿಗೆ ವೀಸಾ ಸಿಗುವುದು ತಡವಾಗಬಹುದು ಇಲ್ಲವೇ ಸಿಗದೇ ಇರಬಹುದು ಆದರೆ ಚಿಲ್ಕೂರಿನಲ್ಲಿರು ಬಾಲಾಜಿ ದೇವಸ್ಥಾನಕ್ಕೆ ಬಂದು ದೇವರಲ್ಲಿ ವೀಸಾ ಆದಷ್ಟು ಬೇಗ ಕರುಣಿಸುವಂತೆ ಮಾಡು ದೇವರೇ ಎಂದು ಬೇಡಿಕೊಂಡರೆ ಕೆಲವೇ ದಿನಗಳಲ್ಲಿ ವೀಸಾ ಬರುತ್ತಂತೆ ಅಷ್ಟು ಶಕ್ತಿ ಈ ವೆಂಕಟೇಶ್ವರ ದೇವರಿಗೆ ಇದೆಯಂತೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತರು.
ನಮ್ಮ ದೇಶದಲ್ಲಿ ಉದ್ಯೋಗಾವಕಾಶಕ್ಕೆ, ವಿದ್ಯಾಭ್ಯಾಸಕ್ಕೆ ಎಲ್ಲಾ ಅವಕಾಶಗಳು ಇದ್ದರೂ ಇಲ್ಲಿನ ಕೆಲ ಜನರಿಗೆ ವಿದೇಶಕ್ಕೆ ತೆರಳಿ ಅಲ್ಲಿ ಉದ್ಯೋಗ ಮಾಡಬೇಕು ಹೆಚ್ಚಿನ ಸಂಪಾದನೆ ಮಾಡಬೇಕು ಎಂಬುದು ಆಸೆ. ಅದರಂತೆ ಕೆಲವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದರೆ ಒಳ್ಳೆಯ ಕೆಲಸ, ಹೆಚ್ಚಿನ ಸಂಬಳ ದೊರೆಯುತ್ತದೆ ಎಂದು ವಿದೇಶಕ್ಕೆ ತೆರಳಲು ತುದಿಗಾಲಿನಲ್ಲಿ ನಿಲ್ಲುತ್ತಾರೆ. ಹಾಗೆಯೆ ಹೈದರಾಬಾದಿನ ಹೆಚ್ಚಿನ ಯುವಕ/ ಯುವತಿಯರು ತಮ್ಮ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಲು ನಿರ್ಧರಿಸಿದ್ದಾರೆ ಅಲ್ಲದೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಂಡರು ವೀಸಾ ಮಾತ್ರ ಬಂದಿರಲಿಲ್ಲ. ಇದರಿಂದ ಬೇಸತ್ತ ವಿದ್ಯಾರ್ಥಿಗಳು ತೆಲಂಗಾಣದ ಚಿಲ್ಕೂರಿನಲ್ಲಿರುವ ಬಾಲಾಜಿ ದೇವಸ್ಥಾನಕ್ಕೆ ತೆರಳಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ವೀಸಾ ಸಮಸ್ಯೆಯಾಗಿದೆ ಆದಷ್ಟು ಬೇಗ ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದರು. ಅದರಂತೆ ದೇವರಲ್ಲಿ ಬೇಡಿದ ಕೆಲ ದಿನಗಳಲ್ಲೇ ಕೆಲವು ಮಂದಿಗೆ ವೀಸಾ ಬಂದಿದೆ ಅಂದಿನಿಂದ ಹೈದರಾಬಾದ್ ಸುತ್ತಮುತ್ತ ಯಾರೇ ವಿದೇಶಕ್ಕೆ ತೆರಳುವುದಾದರೂ ವೀಸಾ ಪ್ರಕ್ರಿಯೆಗಾಗಿ ಈ ದೇವರಲ್ಲಿ ಪ್ರಾರ್ಥನೆ ಸಲ್ಲುಸುತ್ತಿದ್ದರು. ಕ್ರಮೇಣ ಈ ದೇವಸ್ಥಾನಕ್ಕೆ ವೀಸಾ ಸಂಬಂಧಿತ ಜನರೇ ಹೆಚ್ಚೆಚ್ಚು ಬರಲು ಆರಂಭವಾಯಿತು ಅಂದಿನಿಂದ ಈ ಬಾಲಾಜಿ ದೇವಸ್ಥಾನವನ್ನು ‘ವೀಸಾ ಬಾಲಾಜಿ ದೇವಸ್ಥಾನ’ ಎಂದು ಕರೆಯಲು ಆರಂಭವಾಯಿತು.
Related Articles
Advertisement
ದೇವಸ್ಥಾನದ ವಿಶೇಷತೆ:ಅಂದಹಾಗೆ ಈ ವೀಸಾ ಬಾಲಾಜಿ ದೇವಸ್ಥಾನದಲ್ಲಿ ಹುಂಡಿಗಳಿಲ್ಲ ದೇವಸ್ಥಾನಕ್ಕೆ ಬರುವ ಭಕ್ತರು ಇಲ್ಲಿ ದೇವರಿಗೆ ಕಾಣಿಕೆ ಹಾಕುವಂತಿಲ್ಲ ಬದಲಾಗಿ ಭಕ್ತರು ತಾವು ಬೇಡಿದ ಬೇಡಿಕೆ ಈಡೇರಿದಲ್ಲಿ ದೇವರಿಗೆ 108 ಪ್ರದಕ್ಷಿಣೆ ಹಾಕಿ ನಮಸ್ಕರಿಸಿದರೆ ಅದೇ ಕಾಣಿಕೆ. ಹಾಗಾಗಿ ಇಲ್ಲಿನ ದೇವರ ಮೇಲೆ ಇಲ್ಲಿಗೆ ಬರುವ ಭಕ್ತರಿಗೂ ಅಪಾರ ನಂಬಿಕೆ, ಇಲ್ಲಿನ ದೇವರು ಭಕ್ತರಿಂದ ಯಾವುದೇ ರೀತಿಯಲ್ಲಿ ಹಣವನ್ನು ಪಡೆಯುವುದಿಲ್ಲ ಹಾಗಾಗಿ ಈ ದೇವಸ್ಥಾನದಲ್ಲಿ ಕಾಣಿಕೆ ಹಾಕಲು ಹುಂಡಿಯೇ ಇಲ್ಲ. ದೇವರಲ್ಲಿ ಪ್ರಾರ್ಥನೆ ಮಾಡಲು ಬರುವವರು ದೇವರಿಗೆ ಮೂರು ಸುತ್ತು ಪ್ರದಕ್ಷಿಣೆ ಬಂದು ತಮ್ಮ ಬೇಡಿಕೆಗಳನ್ನು ಬೇಡಿಕೊಳ್ಳುತ್ತಾರೆ ಅದರಂತೆ ತಮ್ಮ ಬೇಡಿಕೆ ಈಡೇರಿದ ಬಳಿಕ ದೇವಸ್ಥಾನಕ್ಕೆ ಬಂದು ದೇವರಿಗೆ 108 ಸುತ್ತು ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕರಿಸಿದರೆ ಅದೇ ಕಾಣಿಕೆ, ಅದೇ ಹರಕೆ ಸಂದಾಯ ಮಾಡಿದಂತೆ. ವಿಶೇಷ ದರ್ಶನಕ್ಕೆ ಅನುಮತಿ ಇಲ್ಲ
ಈ ದೇವಸ್ಥಾನದ ಇನ್ನೊಂದು ವಿಶೇಷತೆ ಏನೆಂದರೆ ಎಷ್ಟೇ ಶ್ರೀಮಂತ ವ್ಯಕ್ತಿಯಾದರೂ ಸರತಿ ಸಾಲಿನಲ್ಲೇ ನಿಲ್ಲಬೇಕು ಆಗ ಮಾತ್ರ ಈ ದೇವರ ದರುಶನಕ್ಕೆ ಅವಕಾಶ, ಎಷ್ಟೇ ಶ್ರೀಮಂತ ವ್ಯಕ್ತಿಯಾಗಿರಲಿ ಅವರು ಸಾಮಾನ್ಯರು ನಿಂತ ಸಾಲಿನಲ್ಲೇ ನಿಲ್ಲಬೇಕು ಹಾಗಾಗಿ ಇಲ್ಲಿಗೆ ಬರುವ ಎಲ್ಲರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. *ಸುಧೀರ್ ಎ. ಪರ್ಕಳ