Advertisement
ತೀರ್ಥಹಳ್ಳಿಯ ಕ್ಯಾಟರಿಂಗ್ ಸಂಸ್ಥೆಯೊಂದು ಮಂಗಳೂರಿನಲ್ಲಿ ಕಾರ್ಯಕ್ರಮ ನಡೆಸಿ ಊಟದ ಉಳಿದ ತ್ಯಾಜ್ಯವನ್ನು ತುಂಬಿಸಿ ಚಿಲಿಂಬಿ ರಸ್ತೆ ಬಳಿ ಎಸೆದು ಹೋಗಿದ್ದರು. ಬೇರೆ ಬೇರೆ ಕಡೆಯ ತ್ಯಾಜ್ಯಗಳನ್ನು ಚಿಲಿಂಬಿ ಬಳಿ ಎಸೆದು ಹೋಗುತ್ತಿದ್ದ ಬಗ್ಗೆ ಸಾಕಷ್ಟು ದೂರುಗಳಿತ್ತು. ಈ ಬಗ್ಗೆ ಸ್ಥಳೀಯ ಯುವಕರು ಸಾಕಷ್ಟು ನಿಗಾ ವಹಿಸಿದ್ದರು.
ಇತ್ತೀಚೆಗೆ ಎಸೆದ ತ್ಯಾಜ್ಯ ಗಳ ಚೀಲದಲ್ಲಿ ಕ್ಯಾಟರಿಂಗ್ ಸಂಸ್ಥೆಯೊಂದರ ಟಿಶ್ಯೂ ಪೇಪರ್ ಲಭಿಸಿತ್ತು. ಅದರಲ್ಲಿದ್ದ ಮೊಬೈಲ್ ನಂಬರ್‌ನ ಆಧಾರದ ಮೇಲೆ ಮಾಹಿತಿ ಕಲೆ ಹಾಕಿದ ಯುವಕರ ತಂಡವು ಕರೆ ಮಾಡಿ ಕ್ಯಾಟರಿಂಗ್ ಸಂಸ್ಥೆ ಮಾಲಕರನ್ನು ತರಾಟೆ ತೆಗೆದುಕೊಂಡರಲ್ಲದೆ ತ್ಯಾಜ್ಯವನ್ನು ಚಿಲಿಂಬಿಯಿಂದ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಜು. 31 ರಾತ್ರಿ ಕ್ಯಾಟರಿಂಗ್ ಸಂಸ್ಥೆ ಮಾಲಕರು ತ್ಯಾಜ್ಯವನ್ನು ತುಂಬಿಸಿ ಕೊಂಡೊಯ್ದಿದ್ದಿದ್ದಾರೆ. 7,000 ರೂ. ದಂಡ
ಈ ಸಂದರ್ಭ ಕಾಂತಾವರ ಗ್ರಾ.ಪಂ. ಅಧ್ಯಕ್ಷ ರಾಜೇಶ್ ಕೋಟ್ಯಾನ್ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆದು ಕಾನೂನು ಉಲ್ಲಂಘಿಸಿದ್ದಕ್ಕಾಗಿ ಕ್ಯಾಟರಿಂಗ್ ಸಂಸ್ಥೆಗೆ 7,000 ರೂ. ದಂಡ ವಿಧಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಬಂಗ್ಲೆ ಫ್ರೆಂಡ್ಸ್, ಬಾರಾಡಿ ಫ್ರೆಂಡ್ಸ್ ಯುವಕರು ಸಹಕರಿಸಿದ್ದರು.