Advertisement

ಮಕ್ಕಳಲ್ಲಿ “ಬೊಜ್ಜು”ಇರಲಿ ಮುನ್ನೆಚ್ಚರಿಕೆ

10:45 PM Aug 19, 2019 | mahesh |

ಸದ್ಯ ಜಗತ್ತಿನಾದ್ಯಂತ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಕೂಡ ಒಂದು. ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ವಯೋಮಾನದವರನ್ನೂ ಕಾಡುತ್ತಿರುವ ಬೊಜ್ಜಿನ ಸಮಸ್ಯೆಗೆ ಪರಿಹಾರ ಹುಡುಕುವುದೇ ಸವಾಲಾಗಿದೆ. ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ದೇಹಕ್ಕೆ ವ್ಯಾಯಾಮ ಇಲ್ಲದೆ ಇರುವುದು ಮೊದಲಾದ ಕಾರಣಗಳಿಂದ ಬೊಜ್ಜಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಕೆಲವು ವರ್ಷಗಳ ಹಿಂದೆ ಮಧ್ಯವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೊಜ್ಜು ಈಗ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸುತ್ತಿದೆ.

Advertisement

ಒಬ್ಬ ವ್ಯಕ್ತಿ ಆರೋಗ್ಯಕರವಾದ ದೇಹ ತೂಕಕ್ಕಿಂತ ಹೆಚ್ಚು ತೂಕವನ್ನು ಹೊಂದಿದ್ದರೆ ಅದನ್ನು ಬೊಜ್ಜು ಎನ್ನಲಾಗುತ್ತದೆ. ಚಿಕ್ಕಂದಿನಲ್ಲೇ ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವ ಮಕ್ಕಳು ಪ್ರೌಢ ವಯಸ್ಕರಾದಾಗಲೂ ಈ ಸಮಸ್ಯೆ ಹಾಗೆಯೇ ಉಳಿದುಬಿಡುವ ಸಾಧ್ಯತೆಗಳು ಹೆಚ್ಚು. ಅಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಮಧುಮೇಹ, ಹೃದ್ರೋಗಗಳಂತಹ ತೊಂದರೆಗೆ ತುತ್ತಾಗುವ ಸಾಧ್ಯತೆಗಳಿವೆ. ಮುಂದೆ ಬರುವ ಆರೋಗ್ಯ ಸಮಸ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಬಾಲ್ಯದಲ್ಲಿಯೇ ಬೊಜ್ಜು ಬರದಂತೆ ತಡೆಯುವುದು ಅಗತ್ಯ.

ಮಕ್ಕಳಲ್ಲಿ ಬೊಜ್ಜು ಬೆಳೆಯಲು ಕಾರಣವೇನು?
ಮಕ್ಕಳಲ್ಲಿ ಎಳೆವಯಸ್ಸಿನಲ್ಲಿಯೇ ಬೊಜ್ಜು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿವೆ. ಇದಕ್ಕೆ ಆನುವಂಶೀಯ ಕಾರಣಗಳು ಇವೆ ಎಂದು ಹೇಳಲಾಗುತ್ತಿದೆ. ಆದರೆ ಅಧ್ಯಯನಗಳ ಪ್ರಕಾರ ಬೊಜ್ಜಿಗೆ ಆನುವಂಶೀಯತೆ ಮತ್ತು ಹಾರ್ಮೋನ್‌ ಸಂಬಂಧಿತ ಕಾರಣಗಳು ಇವೆಯಾದರೂ ಮಕ್ಕಳು ಹೆಚ್ಚು ತಿನ್ನುವುದು ಮತ್ತು ಅತಿ ಕಡಿಮೆ ವ್ಯಾಯಾಮ ಮಾಡುವುದು ಬೊಜ್ಜಿಗೆ ಕಾರಣ ಎನ್ನಲಾಗುತ್ತದೆ.

ಫಾಸ್ಟ್‌ ಫುಡ್‌, ಬೇಕರಿ ತಿಂಡಿಗಳ ಸೇವನೆ
ಅಡುಗೆ ಮಾಡಲು ಸಮಯವಿಲ್ಲ ಎಂಬ ಕಾರಣಕ್ಕಾಗಿ ಆನ್‌ಲೈನ್‌ ಆಹಾರ , ಬೇಕರಿ ತಿಂಡಿಗಳಿಗೆ ಮೊರೆ ಹೋಗುವುದು ಸಾಮಾನ್ಯವಾಗಿದೆ. ಇಂಥ ಆಹಾರದಲ್ಲಿ ಸಕ್ಕರೆ ಮತ್ತು ಕೊಬ್ಬು ಜಾಸ್ತಿ. ಅಲ್ಲದೆ ಸಾಫ್ಟ್‌ ಡ್ರಿಂಕ್ಸ್‌ ಈಗ ಹೆಚ್ಚು ಜನಪ್ರಿಯ. ಇದರಿಂದ ಮಕ್ಕಳ ದೇಹದಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಇದರೊಂದಿಗೆ ಸರಿಯಾದ ಸಮಯಕ್ಕೆ ಪೌಷ್ಟಿಕಾಂಶವಿರುವ ಆಹಾರಗಳನ್ನು ಸೇವಿಸದೆ ಇರುವುದರಿಂದಲೂ ಬೊಜ್ಜು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ.

ಪೌಷ್ಟಿಕ ಆಹಾರ ಸೇವನೆಯ ಕೊರತೆ
ಪೌಷ್ಟಿಕಾಂಶ ಇರುವ ಬೇಳೆಕಾಳುಗಳು, ಹಣ್ಣುಗಳ ಬದಲು ಈಗ ಮಕ್ಕಳು ಕೊಬ್ಬು, ಸಕ್ಕರೆ, ಇರುವ ಆಹಾರಗಳನ್ನು ಹೆಚ್ಚು ಸೇವಿಸುತ್ತಾರೆ. ಸದ್ಯ ಮಕ್ಕಳು ಇಷ್ಟಪಟ್ಟು ಸೇವಿಸುವ ಆಹಾರಗಳಲ್ಲಿ ಹೆಚ್ಚು ಕ್ಯಾಲೋರಿಗಳು ಇರುವುದಿಲ್ಲ ಎಂಬುದಾಗಿ ವೈದ್ಯರೇ ಹೇಳುತ್ತಾರೆ. ಮಕ್ಕಳು ಹೆಚ್ಚು ಇಷ್ಟಪಟ್ಟು ಸೇವಿಸುವ ಕೇಕ್‌, ಜ್ಯೂಸ್‌, ಪಿಜ್ಜಾ, ಚೀಸ್‌ ಐಸ್‌ಕ್ರೀಮ್‌ಗಳು ದೇಹಕ್ಕೆ ಕೊಬ್ಬು ಮತ್ತು ಸಕ್ಕರೆಯನ್ನು ಪೂರೈಸುತ್ತವೆ.

Advertisement

ಸಮಸ್ಯೆಗಳೇನು?
ಬಾಲ್ಯದಲ್ಲಿ ಬೊಜ್ಜು ಅಥವಾ ಅಧಿಕ ದೇಹ ತೂಕ ಉಂಟಾದರೆ ಅದು ಅನೇಕ ರೀತಿಗಳಲ್ಲಿ ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಮಕ್ಕಳಲ್ಲಿ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್‌ ಪ್ರತಿರೋಧ ಶಕ್ತಿ ಕಡಿಮೆಯಾಗುವುದು ಮತ್ತು ಟೆ„ಪ್‌ 2 ಮಧುಮೇಹ ಉಂಟಾಗುವ ಅಪಾಯ ಹೆಚ್ಚುವುದು. ಆಸ್ತಮಾ, ಉಸಿರಾಟ ಸಂಬಂಧಿ ತೊಂದರೆಗಳು, ಸಂದುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸ್ನಾಯು-ಎಲುಬು ಸಂಬಂಧಿ ಸಮಸ್ಯೆಗಳು ಕಾಡುವ ಸಾಧ್ಯತೆ ಹೆಚ್ಚು.

ಪರಿಹಾರವೇನು?
ಹೆತ್ತವರು ಮಕ್ಕಳಿಗೆ ಹೊರಗಿನ ತಿಂಡಿಗಳನ್ನು ಕಡಿಮೆ ಮಾಡಿ ಮನೆಯಲ್ಲೇ ತಯಾರಿಸಿದ ಹಣ್ಣು ತರಕಾರಿಗಳ ಆಹಾರಗಳಿಗೆ ಆದ್ಯತೆ ನೀಡಬೇಕು. ಸಾಫ್ಟ್‌ ಡ್ರಿಂಕ್ಸ್‌, ಜ್ಯೂಸ್‌, ಸಿ ಮತ್ತು ಕೊಬ್ಬು ಜಾಸ್ತಿ ಇರುವ ತಿಂಡಿಗಳನ್ನು ದೂರವಿಡಬೇಕು. ನೀರು ಹಾಗೂ ಕೊಬ್ಬಿನಾಂಶ ಕಡಿಮೆ ಇರುವ ಹಾಲು ಮತ್ತು ಆರೋಗ್ಯಕರ ತಿಂಡಿಗಳನ್ನು ಕೊಡಬೇಕು. ದೇಹಕ್ಕೆ ವ್ಯಾಯಾಮ ನೀಡುವ ಆಟಗಳಲ್ಲಿ ಭಾಗವಹಿಸಲು ಸೂಚಿಸಬೇಕು.

ವ್ಯಾಯಾಮದ ಕೊರತೆ
ಮಕ್ಕಳು ದೈಹಿಕವಾಗಿ ಕ್ರಿಯಾಶೀಲರಾಗಿ ಇದ್ದಿದ್ದರೆ ಸಮಸ್ಯೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇರುತ್ತಿರಲಿಲ್ಲ. ಎಂಥ ಆಹಾರವನ್ನು ಸೇವಿಸಿದರೂ ಆಟ, ದೆ„ಹಿಕ ಶ್ರಮದ ಮೂಲಕ ಅದನ್ನು ಅರಗಿಸಿಕೊಳ್ಳಲು ಸಾಧ್ಯವಿದೆ. ಆದರೆ ಇಂದಿನ ಮಕ್ಕಳಿಗೆ ಅಂಥ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ. ಟಿ.ವಿ. ನೋಡುವುದು, ಕಂಪ್ಯೂಟರ್‌ ಗೇಮ್‌ ಆಡುವುದೇ ಅವರಿಗೆ ಮನೋರಂಜನೆೆ. ಹೊರಾಂಗಣ ಚಟು ವಟಿಕೆಗಳುಕಡಿಮೆ ಆಗಿ ರುವುದು, ಕುಳಿತಲ್ಲೇ ಆಡುತ್ತಾ, ಜತೆಗೆ ತಿನ್ನು ವುದು ಬೊಜ್ಜಿಗೆ ಕಾರಣವಾಗಿದೆ.

ಬೊಜ್ಜಿನಿಂದ ಮಾನಸಿಕ ಸಮಸ್ಯೆ
ಬೊಜ್ಜು ಹೊಂದಿರುವ ಮಕ್ಕಳು ಮಾನಸಿಕ ಸಮಸ್ಯೆಗೆ ಬೇಗನೆ ಒಳಗಾಗಬಹುದು. ಬೊಜ್ಜು ಇರುವ ಮಕ್ಕಳನ್ನು ಆಟದ ಗುಂಪಿನಲ್ಲಿ ದೂರ ಇಡಲಾಗುತ್ತದೆ. ಇವರಲ್ಲಿ ದೈಹಿಕ ಚಟುವಟಿಕೆಗಳಾದ ಓಡುವುದು, ಜಿಗಿಯುವುದು, ಬಾಗುವುದು ಇತ್ಯಾದಿಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲದೆ ಇರುವುದರಿಂದ ಮಕ್ಕಳಿಗೆ ತಾವು ಯಾವುದೇ ಉಪಯೋಗಕ್ಕೆ ಇಲ್ಲದವರು ಎನ್ನುವ ಭಾವನೆ ಮೂಡುವುದು. ಇದು ಅವರಿಗೆ ತುಂಬಾ ನಿರಾಶೆ ಉಂಟು ಮಾಡುವುದು ಮತ್ತು ಅವರ ಆತ್ಮವಿಶ್ವಾಸದ ಮಟ್ಟವನ್ನು ಕುಂದುವಂತೆ ಮಾಡುವುದು. ಇದು ಅವರ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದು.

ಜಾಗೃತಿ ಮೂಡಿಸಿ
ಬೊಜ್ಜಿನಿಂದಾಗಿ ದೈಹಿಕ ಸಮಸ್ಯೆಯ ಜತೆಗೆ ಮಾನಸಿಕ ಸಮಸ್ಯೆಗಳೂ ಎದುರಾಗುತ್ತವೆ. ಆ ಕಾರಣಕ್ಕಾಗಿ ಮಕ್ಕಳಿಗೆ ಆಹಾರ ಪದ್ಧತಿ, ವ್ಯಾಯಾಮದ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ಬೊಜ್ಜು ಹಾಗೂ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.
– ಡಾ| ವಿನಯ್‌, ವೈದ್ಯರು

-   ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next