ಮಂಗಳೂರಿನ ಜಲ್ಲಿಗುಡ್ಡೆಯಲ್ಲಿ ಇತ್ತೀಚೆಗೆ ನಾಗಮಂಡಲ ಸೇವೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನ ನಾಟ್ಯವೈಭವ ಕಾರ್ಯಕ್ರಮ ಜರುಗಿತು .ಕೃಷ್ಣ ನಾಗಿ ಅಮೋಘವಾಗಿ ನರ್ತಿಸಿದ ಚಿನ್ಮಯಿ ಮತ್ತು ದಕ್ಷ ಇವರು ಕಿರಿಯ ಯಕ್ಷಗಾನ ಕಲಾ ಪ್ರತಿಭೆಗಳಾಗಿ ಹಲವಾರು ವೇದಿಕೆಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದವರು.7 ವರ್ಷ ಪ್ರಾಯದ ಚಿನ್ಮಯಿ 2 ತರಗತಿಯಲ್ಲಿ ಮತ್ತು 5 ವರ್ಷ ಪ್ರಾಯದ ದಕ್ಷ ಯುಕೆಜಿ ಯಲ್ಲಿ ಕಲಿಯುತ್ತಿದ್ದಾರೆ. ಈ ಕಿರಿಯ ಪ್ರಾಯದಲ್ಲೇ ಇವರಿಬ್ಬರೂ ಅನೇಕ ವೇದಿಕೆಗಳಲ್ಲಿ ಜಾನಪದ, ಯಕ್ಷಗಾನ ನೃತ್ಯ ಪ್ರದರ್ಶನ ನೀಡಿದ್ದಾರೆ.ಜಯಕರ ಪಂಡಿತ್ ನಿರ್ದೇಶನದಲ್ಲಿ ಸುಮಾರು ಎರಡು ತಾಸು ಕೃಷ್ಣ ನ ವಿವಿಧ ಲೀಲೆಗಳನ್ನು ಪ್ರಸ್ತುತಪಡಿಸಿದ ಈ ಕಾರ್ಯಕ್ರಮದಲ್ಲಿ ಶ್ರಿ ಮೂಕಾಂಬಿಕ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ದಯಾನಂದ ಕೋಡಿಕಲ್, ಚೆಂಡೆಯಲ್ಲಿ ಚಂದ್ರಶೇಖರ ಗುರುವಾಯನಕೆರೆ, ಮದ್ದಳೆಯಲ್ಲಿ ಜಯಕರ ಪಂಡಿತ್ ಸಹಕರಿಸಿದರು.
ಸಾಂತಪ್ಪ ಯು.