Advertisement
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನಲ್ಲಿ ಡಿ.20ರಂದು ನಡೆದ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ನಾರಾಯಣ ಸನಿಲ್ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಶಿಯಾನ್ ಪ್ರಶ್ನಿಸಿ, ನಮ್ಮದು ಸಹ ಸರಕಾರಿ ಶಾಲೆಯಾಗಿದೆ. ನಮಗೂ ಹಾಲು, ಮೊಟ್ಟೆ ಬೇಕು ಎಂದು ಆಗ್ರಹಿಸಿದಾಗ ಸಭೆಯಲ್ಲಿನ ಮಕ್ಕಳಲ್ಲೂ ಸಂಚಲನ ಮೂಡಿತಲ್ಲದೇ ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಹಳೆಯಂಗಡಿ ಯುಬಿಎಂಸಿ ಶಾಲೆಯ ಸಪ್ತಮಿ, ಸಿಎಸ್‌ಐ ಶಾಲೆಯ ರಕ್ಷಣ್, ಸಸಿಹಿತ್ಲು ಇದಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶೀಲಾವತಿ, ಈ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ತಲುಪಿಸಲಾಗುವುದು ಎಂದರು.
Related Articles
ಶಾಲಾ ವಠಾರದಲ್ಲಿ ಸೂಚನ ಶಾಲೆಯ ಕಾರ್ತಿಕ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿ ಕೇಶವ ದೇವಾಡಿಗ, ಅಂಗನವಾಡಿ ಮೇಲ್ವಿಚಾರಕಿ ಶೀಲಾವತಿ, ಆರೋಗ್ಯ ಇಲಾಖೆಯ ಪ್ರದೀಪ್ ಕುಮಾರ್, ಸಿ.ಆರ್.ಪಿ. ಕುಸುಮಾ, ಮುಖ್ಯ ಶಿಕ್ಷಕ ಮೈಕಲ್ ಡಿ’ಸೋಜಾ, ಪ್ರಾಂಶುಪಾಲೆ ಜಯಶ್ರೀ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ನಾರಾಯಣ ಸನಿಲ್ ಪದವಿ ಪೂರ್ವ ಕಾಲೇಜಿನ ಅಶ್ವಿನ್ ಸ್ವಾಗತಿಸಿದರು. ದೀಪ್ತಿ ವಂದಿಸಿದರು. ನಮಿತಾ ನಿರೂಪಿಸಿದರು.
Advertisement
ಮಕ್ಕಳಿಂದ ಕೇಳಿ ಬಂದ ದೂರು-ದುಮ್ಮಾನ ಉಡುಪಿ/ಮಂಗಳೂರು ಕಡೆಗಳಲ್ಲಿ ಸಂಚರಿಸುವ ಲೋಕಲ್ ಬಸ್‌ಗಳು ಶಾಲಾ ಮುಂಭಾಗದಲ್ಲಿ ನಿಲ್ಲುವುದೇ ಇಲ್ಲ. ಬಸ್ ತಂಗುದಾಣ ಅಗತ್ಯವಾಗಿ ಬೇಕಾಗಿದೆ. ಇಲ್ಲದಿದ್ದಲ್ಲಿ ಒಂದು ಕಿ.ಮೀ. ನಡೆಯಬೇಕು.
ನಿಶ್ಮಿತಾ,
ನಾರಾಯಣ ಸನಿಲ್ ಪ.ಪೂ. ಕಾಲೇಜು. ಶಾಲೆಯ ಬಾವಿಯಿಂದ ನೀರು ಎಳೆಯಲು ಕಷ್ಟವಾಗುತ್ತದೆ. ಟಾಂಕಿಗೆ ನೀರು ಸುರಿಯದ ಕಾರಣ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡಿದೆ.
ವಿದ್ಯಾ, ಯುಬಿಎಂಸಿ ಶಾಲೆ. ಶಾಲಾ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಾರೆ. ಮದ್ಯಪಾನ ಮಾಡಿ,ಬಾಟಲಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೆಂಚುಗಳನ್ನು ಕದಿಯುತ್ತಿದ್ದಾರೆ.
ರಜಾಕ್ ಮತ್ತು ನಮಿತಾ,
ನಾರಾಯಣ ಸನಿಲ್ ಪ್ರೌಢಶಾಲೆಯ ಕಿಟಕಿ ಬಾಗಿಲು ಬೀಳುವ ಸ್ಥಿತಿಯಲ್ಲಿವೆ. ಭದ್ರತೆ ಇಲ್ಲ, ಕಸ, ಕಡ್ಡಿಗಳನ್ನು ಪಕ್ಕದ ನಿವಾಸಿಗಳು ಶಾಲಾ ಆವರಣಕ್ಕೆ ಬಿಸಾಡುತ್ತಾರೆ.
ಶಬ್ರಿನಾ, ಬೊಳ್ಳೂರು ಸರಕಾರಿ ಶಾಲೆ. ಪೋಷಕರಿಲ್ಲದ ಮಕ್ಕಳ ಪಾಲನೆ, ಪೋಷಣೆಗೆ ಸರಕಾರದಿಂದ ಮಾಸಿಕ ಪೋಷಕ ಧನ ಬರುವುದು ನಿಂತಿದೆ.
ಜುನೈದ್, ನಾರಾಯಣ ಸನಿಲ್ ಮಕ್ಕಳ ದೂರುಗಳು ಇಲಾಖೆಗೆ
ಮಕ್ಕಳ ಗ್ರಾಮ ಸಭೆಯಲ್ಲಿ ಬಂದಂತಹ ದೂರುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗುವುದು. ಕೆಲವೊಂದು ಖಾಸಗಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯತ್‌ನಿಂದ ಸಾಧ್ಯವಾದಷ್ಟು ನೆರವು ನೀಡಲು ಪ್ರಯತ್ನ ನಡೆಸಲಿದ್ದೇವೆ. ಶಾಲಾ ಪರಿಸರದಲ್ಲಿನ ನಿವಾಸಿಗಳಿಗೆ ಮಕ್ಕಳ ದೂರಿನಂತೆ ನೋಟಿಸ್ ನೀಡುವ ಬಗ್ಗೆ ಆಡಳಿತದ ಗಮನಕ್ಕೆ ತರಲಾಗುವುದು.
– ಅಬೂಬಕ್ಕರ್
ಪಂಚಾಯತ್ ಅಭಿವೃದ್ಧಿ ಅಧಿಕಾರಿ. ಮಕ್ಕಳ ಧ್ವನಿಗೆ ಪರಿಹಾರ
ಮಕ್ಕಳು ಮುಗ್ದªರಾದರೂ ಅವರಿಗೆ ಸ್ಥಳೀಯ ಸಮಸ್ಯೆಗಳ ಗ್ರಹಿಕೆ ಅತಿ ಅಗತ್ಯವಾದುದರಿಂದ ಯಾವುದೇ ಅಂಜಿಕೆ ಇಲ್ಲದೇ ಇಂದು ಮಕ್ಕಳ ಗ್ರಾಮ ಸಭೆಯಲ್ಲಿ ತಮ್ಮ ಶಾಲಾ ವಠಾರದಲ್ಲಿನ ಸಮಸ್ಯೆಗಳನ್ನು ನಿರ್ಭಯದಿಂದ ಹೇಳುತ್ತಿದ್ದಾರೆ. ಮಕ್ಕಳ ಗ್ರಾಮ ಸಭೆಯಲ್ಲಿನ ಅವರ ಧ್ವನಿಗೆ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದು, ವಿಶೇಷ ಗಮನ ಹರಿಸಬೇಕು. ಅವರ ಹಕ್ಕುಗಳಿಗೆ ಆಸರೆಯಾಗಬೇಕು.
– ನಂದಾ ಪಾಯಸ್
ಶಿಕ್ಷಣ ಸಂಪನ್ಮೂಲ ಇಲಾಖೆ