Advertisement
ವಿಶೇಷವೆಂದರೆ ವಯಸ್ಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಕೊವ್ಯಾಕ್ಸಿನ್ ಹಾಗೂ ಕೊವಿಶೀಲ್ಡ್ 2 ಡೋಸ್‌ಗಳಿದ್ದರೆ, ಮಕ್ಕಳಿಗೆ ಪ್ರಯೋಗ ಮಾಡುತ್ತಿರುವ ಈ ಲಸಿಕೆ ಮೂರು ಡೋಸ್‌ನಲ್ಲಿರಲಿದೆ. ಈಗಾಗಲೇ ಮೊದಲ ಡೋಸ್ ಅನ್ನು 12ರಿಂದ 18 ವಯಸ್ಸಿನೊಳಗಿನ ಮಕ್ಕಳಿಗೆ ನೀಡಲಾಗಿದೆ. ಇದುವರೆಗೆ ಅಡ್ಡ ಪರಿಣಾಮಗಳು ವರದಿಯಾಗಿಲ್ಲ. ಎರಡನೇ ಡೋಸ್ ನೀಡಲು ಸಿದ್ಧತೆ ನಡೆದಿದೆ. ಮೊದಲ ಡೋಸ್ ಆದ ಬಳಿಕ 28 ದಿನಗಳಿಗೆ ಎರಡನೇ ಡೋಸ್ ನೀಡಲಾಗುವುದು. 54 ದಿನಗಳ ಬಳಿಕ ಮೂರನೇ ಡೋಸ್ ನೀಡಲಾಗುವುದು.
Related Articles
Advertisement
ಫೈಜರ್ ಲಸಿಕೆಯನ್ನು ಮಕ್ಕಳಿಗೆ (12 ರಿಂದ 15 ವಯಸ್ಸಿನವರಿಗೆ) ತುರ್ತು ಸಂದರ್ಭದಲ್ಲಿ ಬಳಸಲು ಅಮೆರಿಕ, ಕೆನಡಾದ ಬಳಿಕ ಸಿಂಗಾಪುರ್ ಹಾಗೂ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಅನುಮತಿ ನೀಡಿವೆ. ಇದೇ ಸಂದರ್ಭದಲ್ಲಿ ಯುರೋಪಿಯನ್ ಮೆಡಿಕಲ್ ಏಜೆನ್ಸಿ ಸಹ ಮಕ್ಕಳಿಗೆ ಫೈಜರ್ ಲಸಿಕೆ ಬಳಸುವ ಕುರಿತು ಪರಿಶೀಲನೆಯಲ್ಲಿದೆ.
ಇದೇ ಹೊತ್ತಿನಲ್ಲಿ ಭಾರತದಲ್ಲೂ ಮಕ್ಕಳಿಗೆ ಲಸಿಕೆ ನೀಡುವ ಕುರಿತು ಕೇಂದ್ರ ಸರಕಾರ ಪ್ರಕ್ರಿಯೆ ಆರಂಭಿಸಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಕಚೇರಿಯು, 2ರಿಂದ 18ರೊಳಗಿನ ವಯಸ್ಸಿನ ಮಕ್ಕಳಲ್ಲಿ ಕೊವ್ಯಾಕ್ಸಿನ್ ನ ಕೊವ್ಯಾಕ್ಸಿನ್‌ನ ಎರಡು ಮತ್ತು ಮೂರನೇ ಹಂತದ ವೈದ್ಯಕೀಯ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ನವರಿಗೆ ಅನುಮತಿ ನೀಡಿದೆ. ಹದಿನೈದು ದಿನಗಳೊಳಗೆ ಪ್ರಯೋಗ ಆರಂಭವಾಗುವ ಸಂಭವವಿದೆ.
ವೈದ್ಯಕೀಯ ಪರಿಣಿತರ ಪ್ರಕಾರ ಅಂದಾಜು ಅಕ್ಟೋಬರ್ ಸುಮಾರಿನಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ.