Advertisement
ದಾಸರ ಹೆಂಡತಿ ಲಗುಬಗೆಯಿಂದ ಮನೆಗೆ ಧಾವಿಸಿದರು. ಹಿಂದೆಯೇ ದಾಸರೂ ದಕ್ಷಿಣೆ ಸ್ವೀಕರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಮರಳಿದರು. ಬೆಳಗಿನಿಂದ ಉಪವಾಸ ಇದ್ದ ದಾಸರಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಹರಿಕಥೆ ಮಾಡುವಾಗಲೂ ಅವರಿಗೆ ಹೊಟ್ಟೆಯದ್ದೇ ಯೋಚನೆ. ಹಸಿವಿನಿಂದ ತುಂಬಾ ಬಳಲಿದ್ದ ಅವರು ಹೆಂಡತಿಗೆ ಹೇಳಿದರು “ಬೇಗ ತಟ್ಟೆ ಹಾಕು. ಕೈಕಾಲು ಮುಖ ತೊಳೆದುಕೊಂಡು ಬರುತ್ತೇನೆ..’ ಹೆಂಡತಿ ದೇವರ ಕೋಣೆಯಿಂದಲೇ ಕೂಗಿ ಹೇಳಿದಳು: “ನೀವು ಹೇಳಿದಂತೆ ಸಂಜೆ ಅಡುಗೆ ಮಾಡಿದ್ದೆ. ಉಪವಾಸಕ್ಕೆ ಶ್ಯಾವಿಗೆ ಪಾಯಸವನ್ನೂ ಮಾಡಿದ್ದೆ. ಆದರೆ ನಿಮ್ಮ ಹರಿಕಥೆ ಕೇಳಿದ ಮೇಲೆ ಭಯವಾಯಿತು. ಬೆಂಕಿ ಮರ ಅಪ್ಪುವ ಶಿಕ್ಷೆ ನನಗೆ ಬೇಡ, ನಿಮಗೂ ಬೇಡ. ಅದಕ್ಕೆ ಮಾಡಿಟ್ಟ ಭಕ್ಷಯ ಭೋಜನವನ್ನು ಹೊರಗೆ ಚೆಲ್ಲಿಬಿಟ್ಟೆ.’ ಎಂದಳು. ದಾಸರ ಜಂಘಾಬಲವೇ ಉಡುಗಿ ಹೋಯಿತು. ಕುಸಿದು ಕುಳಿತ ಅವರು ಹೇಳಿದರು “ಆ ಬೆಂಕಿಯ ಮರವನ್ನು ಎಲ್ಲರೂ ಅಪ್ಪಿ ತಣ್ಣಗಾಗಿ ಹೋಗಿರುತ್ತಿತ್ತು. ಆದ್ದರಿಂದ ನಾವು ಊಟ ಮಾಡಬಹುದಿತ್ತು. ಪಾಯಸ ಸವಿಯಬಹುದಿತ್ತು’ ಎಂದು ನಿಡುಸುಯ್ದರು. ಹೆಂಡತಿ ದಾಸರ ಮುಖವನ್ನೇ ಮಿಕಿ ಮಿಕಿ ನೋಡುತ್ತ ನಿಂತರು.
Advertisement
ಹರಿಕತೆ ದಾಸಯ್ಯ ಮತ್ತು ಕೆಂಡದ ಮರ!
03:45 AM Apr 20, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.