Advertisement

ಫೆ. 2: ಬಾರಕೂರಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ

01:00 AM Jan 31, 2019 | Harsha Rao |

ಬ್ರಹ್ಮಾವರ: ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನೇಶನಲ್‌ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಠಾರದಲ್ಲಿ ಫೆ. 2ರಂದು ಮಕ್ಕಳ ಸಾಹಿತ್ಯ ಸಮ್ಮೇಳನ ಜರಗಲಿದೆ.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌, ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಶ್ರೀ ರಾಮಕೃಷ್ಣ ಆಶ್ರಮ ಬೆಳಗಾವಿ ಮತ್ತು ಮಂಗಳೂರು, ಬಾರಕೂರು ಆನ್‌ಲೈನ್‌ ಡಾಟ್ಕಾಮ್‌, ಕನ್ನಡ ಸಾಹಿತ್ಯ ಪರಿಷತ್‌ ಬ್ರಹ್ಮಾವರ-ಬಾರಕೂರು ವಲಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 156ನೇ ಜಯಂತಿ ಪ್ರಯುಕ್ತ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 18ನೇಯ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನ ಜರಗಲಿದೆ. ಸಾಹಿತಿ, ಲೇಖಕ ಬಾರಕೂರಿನ ಬಾಬು ಶಿವ ಪೂಜಾರಿ ಉದ್ಘಾಟಿಸುವರು. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೈಂದೂರು ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಎಂಟನೆಯ ತರಗತಿಯ ವಿದ್ಯಾರ್ಥಿನಿ ಸ್ವೀಕೃತಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಮಕ್ಕಳ ಸ್ವರಚಿತ ಕವನಗಳ ಸಂಕಲನವನ್ನು ಕೆ. ಅಶೋಕ್‌ ಭಟ್ ಚಾಂತಾರು ಬಿಡುಗಡೆಗೊಳಿ ಸಲಿದ್ದಾರೆ. ಮಧುಕರ ಎಸ್‌. ಶುಭಾಶಂಸನೆ ಗೈಯುವರು. ಅತಿಥಿಗಳಾಗಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಡಾ| ಐ. ಶಶಿಕಾಂತ್‌ ಜೈನ್‌, ಕೆ. ವಸಂತ್‌ರಾಜ್‌ ಶೆಟ್ಟಿ, ಎರಿಕ್‌ ಸೋನ್ಸ್‌, ಶ್ರೀನಿವಾಸ ಶೆಟ್ಟಿಗಾರ್‌ ಉಪಸ್ಥಿತರಿರುವರು. ನಾಗೇಶ್‌ ಶ್ಯಾನುಭಾಗ್‌ ಎಚ್. ಚಂದ್ರಶೇಖರ ಕೆದ್ಲಾಯ ಅವರನ್ನು ಅಭಿನಂದಿಸಲಾಗುವುದು. ಕ್ರೀಡಾ ಪ್ರತಿಭೆಗಳಾದ ಪ್ರಸನ್ನ ಮತ್ತು ವಿಘ್ನೕಶ, ಪ್ರತಿಭಾನ್ವಿತ ವಿದ್ಯಾರ್ಥಿ ಅಶ್ವನ್‌ ಅವರನ್ನು ಪುರಸ್ಕರಿಸಲಾಗುವುದು.

ಗೋಷ್ಠಿಗಳು

ಮಕ್ಕಳ ಸ್ವರಚಿತ ಕವನಗೋಷ್ಠಿ ಚಿಂತನಗೋಷ್ಠಿಗಳು ನಡೆಯಲಿವೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರೋಪ ಭಾಷಣಗೈಯುವರು. ಅತಿಥಿಯಾಗಿ ನಿತ್ಯಾನಂದ ಪಡ್ರೆ ಉಪಸ್ಥಿತರಿರುವರು ಎಂದು ಸಮ್ಮೇಳನದ ಪ್ರಧಾನ ಸಂಘಟಕ ರಾಮಭಟ್ಟ ಸಜಂಗದ್ದೆ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

Advertisement

ಪ್ರಮುಖರಾದ ಬಿ. ಅಶೋಕ ಸಿ. ಪೂಜಾರಿ, ಬಿ. ಗುರುರಾಜ ರಾವ್‌, ಕೆ. ಅಶೋಕ್‌ ಭಟ್ ಚಾಂತಾರು, ಸೂರಾಲು ನಾರಾಯಣ ಮಡಿ, ಸ್ವೀಕೃತಿ ಶೆಟ್ಟಿ, ಶಾರದಾ ಜೋಷಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next