ಧಾರವಾಡ: ಮಕ್ಕಳ ಕಾನೂನುಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ಮುಖ್ಯವಾಗಿದ್ದು, ಇದರ ಜೊತೆಗೆ ಮಕ್ಕಳ ಸಂರಕ್ಷಣೆಯ ಕಾನೂನುಗಳು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಚಂದ್ರ ಹುದ್ದಾರ ಹೇಳಿದರು.
ನಗರದ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ “ಮಕ್ಕಳ ಸಹಾಯವಾಣಿಯೊಂದಿಗೆ ಗೆಳೆತನ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಮಕ್ಕಳು ಮೊಬೈಲ್, ಟಿವಿ ಇತ್ಯಾದಿ ನವಮಾಧ್ಯಮಗಳ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆಧುನಿಕ ಮಾಧ್ಯಮಗಳನ್ನು ಅವಶ್ಯಕತೆಯಿದ್ದಷ್ಟು ಉಪಯೋಗಿಸುವುದು ಮುಖ್ಯ. ಕ
ಷ್ಟಪಟ್ಟು ಓದಿದವರಿಗೆ ಪ್ರತಿಫಲ ಸಿಗುತ್ತದೆ. ಮಾನಸಿಕ ಹಾಗೂ ಶಾರೀರಿಕವಾಗಿ ಸವಾಲುಳ್ಳ ಮಕ್ಕಳಿಗೆ ಸಹಾಯ ಮಾಡುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು. ಚೈಲ್ಡ್ ಲೈನ್ ಸೆ ದೋಸ್ತಿ ಕಾರ್ಯಕ್ರಮ ಬಗ್ಗೆ ಮಾಹಿತಿ ಮತ್ತು ಇಲಾಖೆಯ ಅಕಾರಿಗಳೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮ ಹಾಗೂ ಕ್ಯಾಲೆಂಡರ್ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡದಿಂದ ನಾಟಕ ಪ್ರದರ್ಶನವಾಯಿತು. ಬಿಡಿಎಸ್‌ಎಸ್ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ-1098 ನಿರ್ದೇಶಕ ಫಾ| ಜೇಕಬ್ ಅಂಥೋನಿ, ವಕೀಲರ ಸಂಘದ ಅಧ್ಯಕ್ಷ ಆರ್.ಯು. ಬೆಳ್ಳಕ್ಕಿ, ಡಿಡಿಪಿಐ ಎನ್. ಎಚ್.ನಾಗೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಆರ್.ಎಂ. ದೊಡ್ಡಮನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಚ್.ಎಚ್. ನೂರ,
ಎಸ್.ಸಿ. ಕರಿಕಟ್ಟಿ, ಆರ್.ಬಿ. ಪತ್ತಾರ, ನ್ಯಾಯಾಧೀಶರಾದ ಹೊಸಮನಿ ಸಿದ್ದಪ್ಪ, ಸಾವಿತ್ರಿ ಕುಜಿ, ಸುಜಾತಾ, ಇಂದ್ರಾ ಚೆಟ್ಟಿಹಾಳ, ಶ್ರೀಕಾಂತ, ಪರಿಮಳಾ, ಸಂಜಯ ಗುಡೆಗುಡೆ, ಮಮತಾ ಇತರರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ್ ಆರ್.ಎಸ್. ಸ್ವಾಗತಿಸಿದರು. ಸಾತಿ ಮಣ್ಣೂರ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಕ್ಕಳ ಹಕ್ಕುಗಳ ಜಾಥಾಕ್ಕೆ ಎಸ್ಪಿ ಸಂಗೀತಾ ಜಿ. ಚಾಲನೆ ನೀಡಿದರು.