Advertisement
ಹೌದು, ಇದು ಹುಳಿಯಾರು ಪಟ್ಟಣದ ಎ ಕೇಂದ್ರದ ಅಂಗನವಾಡಿ ಕಟ್ಟಡದ ದುಸ್ಥಿತಿ. 1959ರಲ್ಲಿ ಮೈಸೂರು ಸಂಸ್ಥಾನದ ನ್ಯಾಯಂಗ, ಕಾರ್ಮಿಕ ಮತ್ತು ಸ್ಥಳೀಯ ಸಂಸ್ಥೆಗಳ ಸಚಿವರಾದ ಸುಬ್ರಹ್ಮಣ್ಯ ಅವರು ಉದ್ಘಾಟಿಸಿದ ಶಿಶು ವಿಹಾರದ ಕಟ್ಟಡದಲ್ಲಿ 1989ರಿಂದ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಆದರೆ, ಈಗ ಈ ಕಟ್ಟಡ ಸಂಪೂರ್ಣ ಹಾಳಾಗಿದ್ದು, ದುರಸ್ಥಿ ಮಾಡಿಸುವುದಕ್ಕಿಂದ ತೆರವುಗೊಳಿಸುವುದೇ ಲೇಸು ಎನ್ನುವಂತಿದೆ.
Related Articles
Advertisement
ಮನವಿ ಮಾಡಿದರೂ ಪ್ರಯೋಜನವಿಲ್ಲ: ಗಂಡ ಹೆಂಡತಿ ಜಗಳ ಕೂಸು ಬಡವಾಯ್ತು ಎನ್ನುವಂತೆ ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪಂಚಾಯ್ತಿ ಜಗಳದಿಂದ ಅಂಗನವಾಡಿ ಕೇಂದ್ರ ಸಂಪೂರ್ಣ ಶಿಥಿಲವಾಗಿದೆ. ಇಂದು-ನಾಳೆ ಬೀಳುವಂತಹ ಸ್ಥಿತಿಯಲ್ಲಿದ್ದು, ಮಕ್ಕಳು ಭಯದಲ್ಲೇ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಅಂಗನವಾಡಿಯು ಸಂಪೂರ್ಣ ಹಳೆಯದಾಗಿದ್ದು, ಹೊಸ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿ, ಅಲಿಯವರೆವಿಗೂ ಬಾಡಿಗೆ ಪಡೆದು ಕೇಂದ್ರ ನಡೆಸಿ ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪೋಷಕರು ಹೇಳುತ್ತಾರೆ.
ಇನ್ನಾದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಕ್ಷಣ ಕಟ್ಟಡ ಬದಲಾಯಿಸಿ, ಪುಟ್ಟಾಣಿಗಳನ್ನು ಪ್ರಾಣಭಯದಿಂದ ಪಾರು ಮಾಡಬೇಕಿದೆ. ಕಟ್ಟಡವು ಶಿಥಿಲಾಗಿದ್ದು, ಮಕ್ಕಳ ಕಲ್ಯಾಣ ಇಲಾಖೆಯ ಹೆಸರಿನಲ್ಲಿ ಕಟ್ಟಡ ಇಲ್ಲವಾಗಿರುವುದರಿಂದ ದುರಸ್ತಿಗೆ ಹಣ ಹಾಕಲು ಅವಕಾಶವಿಲ್ಲ. ಹೀಗಾಗಿ, ಮಕ್ಕಳ ಪಾಠಕ್ಕೆ ತೊಂದರೆಯಾಗದ ರೀತಿ ಬೇರೆ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುವಂತೆ ಅಲ್ಲಿನ ಶಿಕ್ಷಕಿಯರಿಗೆ ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದು ಮುತುವರ್ಜಿ ವಹಿಸಿ ಕಟ್ಟಡ ಬದಲಾಯಿಸಲು ಕ್ರಮ ಕೈಗೊಳ್ಳುತ್ತೇನೆ. – ಜಿ.ಹೊನ್ನಪ್ಪ, ಸಿಡಿಪಿಒ, ಚಿ.ನಾ.ಹಳ್ಳಿ
ಅಂಗನವಾಡಿ ಕೇಂದ್ರದ ಸಿಬ್ಬಂದಿ ಶಿಕ್ಷಣ, ಆಹಾರ ಜತೆಗೆ ಮಕ್ಕಳನ್ನು ಉತ್ತಮ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿನ ಕಟ್ಟಡ ಮಕ್ಕಳಿಗೆ ಸುರಕ್ಷಿತವಾಗಿಲ್ಲ. ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಕುಸಿದು ಬೀಳುತ್ತದೆ ಗೊತ್ತಾಗುತ್ತಿಲ್ಲ. ಜೀವ ಕೈಯಲ್ಲಿ ಹಿಡಿದು ಭಯದ ವಾತಾವರಣದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಕೇಂದ್ರ ಬದಲಾಯಿಸಿ ಎಂದು ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ●ಸೈಯದ್ ಖಾಜಾ, ಪೋಷಕರು, ಹುಳಿಯಾರು
– ಎಚ್.ಬಿ.ಕಿರಣ್ ಕುಮಾರ್