Advertisement
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜು.9 ರಿಂದ 13 ವರೆಗೆ ಜರಗಿದ ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಪೆಷಲ್ ಒಲಿಪಿಂಕ್ಸ್ ಭಾರತ್-ಕರ್ನಾಟಕ ಪ್ರತಿನಿಧಿಸಿ ವಿಜೇತರಾದ ಮಂಗಳೂರಿನ ಸಾನ್ನಿಧ್ಯ ಹಾಗೂ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಮೂವರು ಕ್ರೀಡಾಪಟುಗಳನ್ನು ಅಭಿನಂದಿಸುವ ಕಾರ್ಯಕ್ರಮ ಶನಿವಾರ ನಗರದ ಸರ್ಕ್ನೂಟ್ ಹೌಸ್‌ನಲ್ಲಿ ಜರ ಗಿದ್ದು, ವಿಜೇ ತ ರನ್ನು ಶಾಲು, ಹೂಹಾರ ಹಾಕಿ ಸಮ್ಮಾನಿಸಿ ಅಭಿನಂದಿಸಿ ಅವರು ಮಾತನಾಡಿರು.ಮೇಯರ್ ಕವಿತಾ ಸನಿಲ್ ಅವರು ಮಾತನಾಡಿ, ಭಿನ್ನ ಸಾಮರ್ಥ್ಯದ ಮಕ್ಕಳ ಈ ಸಾಧನೆ ಶ್ರೇಷ್ಠವಾದುದು ಎಂದು ಶ್ಲಾಘಿಸಿದರು. ಈ ಕ್ರೀಡಾಪಟುಗಳಿಗೆ ತರಬೇತಿ ನೀಡಿದ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರ ಪ್ರೇಮನಾಥ್ ಉಳ್ಳಾಲ್ ಅವರನ್ನು ಕೂಡಾ ಸಮ್ಮಾನಿಸಿ ಅಭಿನಂದಿಸಲಾಯಿತು.
ಸ್ವಾಗತಿಸಿ ಪ್ರಸ್ತಾವನೆಗೈದ ಸ್ಪೆಷಲ್ ಒಲಿಪಿಂಕ್ಸ್ ಭಾರತ್-ಕರ್ನಾಟಕ ಪ್ರಾದೇಶಿಕ ನಿರ್ದೇಶಕ ವಸಂತ್ ಕುಮಾರ್ ಶೆಟ್ಟಿ ಅವರು ಸ್ಪೆಷಲ್ ಒಲಿಂಪಿಕ್ಸ್ ರಾಜ್ಯ ಸಂಸ್ಥೆ ಸಂಘಟಿಸುತ್ತಿರುವ ಕ್ರೀಡಾ ತರಬೇತಿ ಹಾಗೂ ಸ್ಪರ್ಧೆಗಳಿಗೆ ಸರಕಾರದ ವತಿಯಿಂದ ಪೂರ್ಣ ಪ್ರಮಾಣದ ಅನುದಾನ ನೀಡುವಂತೆ ಹಾಗೂ ರಾಜ್ಯ ಸಂಸ್ಥೆಯ ಕಚೇರಿಯ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕೊಠಡಿ ಒದಗಿಸುವಂತೆ ಮನವಿ ಸಲ್ಲಿಸಲಾಗಿದ್ದು ಇದಕ್ಕೆ ಶೀಘ್ರ ಸರಕಾರದ ಶೀಘ್ರ ಸ್ಪಂದಿಸಬೇಕು ಎಂದು ಕೋರಿದರು. ಅಬುದಾಭಿಯಲ್ಲಿ ನಡೆಯಲಿರುವ ವರ್ಲ್ಡ್ ಸಮ್ಮರ್ ಗೇಮ್ಸ್‌ನಲ್ಲಿ ರಾಜ್ಯದ ಈ ಆರು ಮಂದಿ ಕ್ರೀಡಾಪಟುಗಳು ಭಾಗವಹಿಸಲಿದ್ದು ಅವರಿಗೆ ಸರಕಾರದ ವತಿಯಿಂದ ಆರ್ಥಿಕ ನೆರವು ಒದಗಿಸಿಕೊಡುವಂತೆ ಎಂದು ವಸಂತ್ ಕುಮಾರ್ ಶೆಟ್ಟಿ ಸಚಿವರಿಗೆ ವಿನಂತಿಸಿದರು.
Related Articles
Advertisement
ಪದಕ ವಿಜೇತರುಪದಕ ವಿಜೇತರಾದ ಸೈಂಟ್ ಆ್ಯಗ್ನೆಸ್ ವಿಶೇಷ ಶಾಲೆಯ ಆಸ್ಲಿ ಡಿಸೋಜಾ (ಎತ್ತಿದ ತೂಕ: ಎಂ 6 ವಿಭಾಗದಲ್ಲಿ 245ಕಿ.ಲೋ 2 ಚಿನ್ನದ ಪದಕ ಹಾಗೂ ಸಾನ್ನಿಧ್ಯ ವಸತಿಯುತ ಶಾಲೆಯ ಕ್ರೀಡಾಪಟುಗಳಾದ ಅಭಿಲಾಷ್ ( ಎಂ 1 ವಿಭಾಗದಲ್ಲಿ 187.5 ಕಿ.ಲೋ ) 1 ಚಿನ್ನ, ಒಂದು ಬೆಳ್ಳಿ ಪದಕ ಹಾಗೂ ಪ್ರಜ್ವಲ್ ಲೋಬೋ (ಎಂ8 ವಿಭಾಗದಲ್ಲಿ 235 ಕಿಲೋ ) 1 ಚಿನ್ನ ಹಾಗೂ 1 ಬೆಳ್ಳಿ ಪದಕ ಪಡೆದಿದ್ದಾರೆ. ಸ್ಪೆಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸ್ಪೆಷಲ್ ಒಲಿಂಪಿಕ್ಸ್ ಭಾರತ್- ಕರ್ನಾಟಕವನ್ನು ಪ್ರತಿನಿಧಿಸಿ ಆರು ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಅವರಲ್ಲಿ ನಾಲ್ವರು ಪುರುಷ ಕ್ರೀಡಾಪಟುಗಳು ಐದು ಚಿನ್ನದ ಪದಕಗಳನ್ನು ಗಳಿಸಿದ್ದರೆ, ಇಬ್ಬರು ಮಹಿಳೆಯರು ಒಂದು ಬೆಳ್ಳಿ ಹಾಗೂ 3 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.