Advertisement

ಮಕ್ಕಳ ಗ್ರಾಮಸಭೆ ಅಗತ್ಯ: ಪಾಟೀಲ

05:42 PM Nov 29, 2020 | Suhan S |

ಹೂವಿನಹಿಪ್ಪರಗಿ: ಶಾಲಾ ಮಕ್ಕಳ ಕೊರತೆಗಳನ್ನು ನೀಗಿಸಲು ಮಕ್ಕಳ ಗ್ರಾಮಸಭೆ ಸಹಕಾರಿಯಾಗಿದೆ ಎಂದು ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸಂಗನಗೌಡ ಪಾಟೀಲ ಹೇಳಿದರು.

Advertisement

ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಆರೋಗ್ಯ, ಶಿಕ್ಷಣ ಅವಶ್ಯವಾಗಿದೆ. ಮಕ್ಕಳು ಸಾಹಿತ್ಯ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಮನೆಯಲ್ಲಿಯೇ ತಿದ್ದಿ ಸಂಸ್ಕಾರ ನೀಡಬೇಕು. ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಗ್ರಾಪಂನವರುಎಲ್ಲ ರೀತಿ ಸಹಕಾರ ನೀಡಬೇಕೆಂದು ಹೇಳಿದರು.ತಾಪಂ ಇಒ ಭಾರತಿ ಚಲುವಯ್ಯ ಮಾತನಾಡಿ, ಪ್ರತಿ ಗ್ರಾಪಂನಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಿ ಶೈಕ್ಷಣಿಕತೊಂದರೆಗಳನ್ನು ನಿಭಾಯಿಸಲು ಮುಂದಾಗುವುದಾಗಿ ಹೇಳಿದರು.

ಜೆಡಿಎಸ್‌ ಮುಖಂಡ ರಾಜುಗೌಡ ಪಾಟೀಲ (ಕುದುರಿ ಸಾಲವಾಡಗಿ), ಬಿ.ಎಂ. ದೇಸಾಯಿ, ರುದ್ರಗೌಡ ಹಚಡದ, ಭೀಮನಗೌಡ ಹಚಡದ, ಜಾಕೀರ್‌ಹುಸೇನ್‌ ಶಿವಣಗಿ, ಅನಿಲಗೌಡ ಪಾಟೀಲ, ಡಾಣ ಹಸನ್‌ಸಾಬ ಢವಳಗಿ, ಎಸ್‌.ಬಿ. ಲಿಂಗರೆಡ್ಡಿ, ಬಿ.ಎಸ್‌. ಬಡಿಗೇರ, ಎಸ್‌.ಟಿ. ಕರಿಗಾರ, ಬೆಳ್ಳಿಪ್ಪ ಜೆಕ್ಕೆನಾಳ ಇದ್ದರು.

ಗ್ರಂಥಾಲಯದಲ್ಲಿ ಶಾಲಾ ಮಕ್ಕಳ ಹೆಸರು ನೋಂದಣಿ ಮಾಡಿಕೊಂಡು ಪುಸ್ತಕ ಕೊಡಲಾಯಿತು. ಗ್ರಾಪಂ ಕಾರ್ಯದರ್ಶಿ ಶೈಲಜಾ ಕೆ. ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಸಾನಿಯಾ ಚಿತ್ತಾಪುರ, ಶಶಿಕಾಂತ ಬಡಿಗೇರ, ರೋಹಿಣಿ ಹಾವರಗಿ, ದಾನಮ್ಮ ಅನಿಸಿಕೆ ಹಂಚಿಕೊಂಡರು. ಎಸ್‌.ಬಿ. ಬಾಗೇವಾಡಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next