Advertisement

ಚಿಣ್ಣರ ಭಾವನೆಗಳನ್ನು ಗೌರವಿಸಿದಾಗ ಪ್ರತೀದಿನವೂ ‘ಮಕ್ಕಳ ದಿನ’ವೇ: ಕು. ನಿಶ್ಮಾ

09:53 AM Nov 15, 2019 | Hari Prasad |

ವೇಣೂರು: ‘ಮಕ್ಕಳಿಗೆ ಉತ್ತಮ ಅವಕಾಶಗಳು ಸಿಕ್ಕಿದಾಗ ಅವರಲ್ಲಿರುವ ಪ್ರತಿಭೆ ಅರಳಲು ಸಾಧ್ಯ. ಮಕ್ಕಳಿಗೆ ಅಗತ್ಯವಿರುವ ಪ್ರೀತಿ ಕಾಳಜಿ ದೊರೆತಾಗ ಪ್ರತಿದಿನವೂ ಮಕ್ಕಳ ದಿನಾಚರಣೆ’ ಎಂದು ಹೊಕ್ಕಾಡಿಗೋಳಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಾಯಕಿ ಕುಮಾರಿ ನಿಶ್ಮಾ ಅಭಿಪ್ರಾಯಪಟ್ಟರು.

Advertisement

ಹೊಕ್ಕಾಡಿಗೋಳಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14 ರಂದು ನಡೆದ ‘ಮಕ್ಕಳ ದಿನಾಚರಣೆ ಸಂಭ್ರಮ’ದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಮಕ್ಕಳ ಹಕ್ಕುಗಳಿಗೆ ಎಲ್ಲರೂ ಗೌರವ ನೀಡಲಿ, ಶಿಕ್ಷಣದ ಮಹತ್ವದ ಅರಿವು ಪೋಷಕರು ಹಾಗೂ ಸಮುದಾಯಕ್ಕೆ ತಿಳಿದು ಬರಲಿ ಎಂದು ಕುಮಾರಿ ನಿಶ್ಮಾ ಹೇಳಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸದಾಶಿವ ಪೂಜಾರಿ, ತಾಯಂದಿರ ಸಮಿತಿಯ ಚಂದ್ರಿಕಾ ,ಮುಖ್ಯ ಶಿಕ್ಷಕರಾದ ರಾಜೇಶ್ ನೆಲ್ಯಾಡಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಸುಚಿತ್ರ ಮಕ್ಕಳ ದಿನಾಚರಣೆಯ ಶುಭ ಸಂದೇಶ ನೀಡಿದರು. ಶಿಕ್ಷಕರಾದ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸಿಲ್ವಿಯಾ ಮಿರಾಂದ ಸ್ವಾಗತಿಸಿ, ಮೆಟಿಲ್ಡಾ ಡಿಸೋಜ ವಂದಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರು ,ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next