Advertisement

ಮಕ್ಕಳ ಶೌರ್ಯ, ಸಾಹಸ ಶ್ಲಾಘನೀಯ

11:43 AM Dec 06, 2018 | |

ಬೆಂಗಳೂರು: ಯಾವುದೇ ತರಬೇತಿ ಇಲ್ಲದೆ ಧೈರ್ಯ, ಶೌರ್ಯ, ಸಾಹಸ ತೋರಿದ ಮಕ್ಕಳ ಸಾಧನೆ ಶಾಘÉನಿಯವಾದದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಜಯಮಾಲಾ ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬುಧವಾರ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರು ಅವರನ್ನು ಮರೆತರೆ ಬದುಕಿನಲ್ಲಿ ಎಲ್ಲವನ್ನು ಕಳೆದುಕೊಂಡಂತೆ. ಮಕ್ಕಳು ಈ ದೇಶದ ಭವಿಷ್ಯ ಎಂಬ ಕಲ್ಪನೆಯನ್ನು ನೀಡಿದವರು ನೆಹರು. ಮಕ್ಕಳು ಮನಸು ಮಾಡಿದರೆ ಸುಲಭದಲ್ಲಿ ಬದಲಾವಣೆಯನ್ನು ತರಬಹುದು. ಇಂದು ಪ್ರಶಸ್ತಿ ಪಡೆದ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಮಗುವೊಂದು ಹಾರಂಗಿ ಜಲಾಶಯದ ಬಳಿ ಕಾಲುಜಾರಿ ನೀರಿಗೆ ಬಿದ್ದ ವೃದ್ಧೆಯೊಬ್ಬರನ್ನು ರಕ್ಷಿಸಿದೆ. ಇದೇ ಅಲ್ಲವೇ ಮಕ್ಕಳ ಶೌರ್ಯ. ತರಬೇತಿ ಇಲ್ಲದೆ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸಾಹಸ ಮೆರೆದಿರುವ ಈ ಮಕ್ಕಳ ಸಾಧನೆ ಮೆಚ್ಚುವಂತಹುದು. ಈ ನಿಸ್ವಾರ್ಥ ಸೇವೆಗೆ ಯಾವುದೇ ಪ್ರಶಸ್ತಿ ಪುರಸ್ಕಾರ ನೀಡಿದರೂ ಕಡಿಮೆಯೇ. ಅಂಗವೈಕಲ್ಯ ಹಾಗೂ ಎಚ್‌ಐವಿ ಪೀಡಿತ ಮಕ್ಕಳನ್ನು ಪೋಷಣೆ ಮಾಡುವಂತಹ ಸಂಸ್ಥೆಗಳ ಕಾರ್ಯ ಶಾಘÉನೀಯವಾದುದು ಎಂದು ತಿಳಿಸಿದರು.

ಮಕ್ಕಳು ಎಂದರೆ ಬಂಡವಾಳ ಹೂಡುವ ವಸ್ತುವಲ್ಲ. ಅವರ ಮೇಲೆ ಒತ್ತಡ ಹೇರುವ ವಾತಾವರಣ ನಿರ್ಮೂಲನೆಯಾಗಬೇಕು. ಇಂದಿನ ಮಕ್ಕಳು ಮನಸು ಮಾಡಿದರೆ ಇಡೀ ಸಮಾಜವನ್ನು ಬದಲಾಯಿಸಬಹುದು. ಆದರೆ, ಬಾಲ್ಯದಿಂದಲೇ ಮಕ್ಕಳ ಮಾನಸಿಕತೆಯ ಮೇಲೆ ಒತ್ತಡ ಹೇರುವುದನ್ನು ಪೋಷಕರು ಬಿಡಬೇಕು. ಆಗ ಮಕ್ಕಳು ಸಾಹಸಿಗರಾಗಲು ಸಾಧ್ಯವಾಗುತ್ತದೆ ಎಂದರು.

ಈಗಿನ ಮಕ್ಕಳ ಕಾಲದಲ್ಲಿ ತಂತ್ರಜ್ಞಾನ ಮುಂದುವರಿದಿದೆ. ನಾವು ಮಕ್ಕಳಿದ್ದಾಗ ಇಲ್ಲದಂತಹ ಸೌಲಭ್ಯಗಳು ಈಗೀನ ಮಕ್ಕಳಿಗೆ ದೊರೆತ್ತಿದೆ. ಮಕ್ಕಳು ಈ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಹಂತ ತಲುಪಬೇಕು. ತಂದೆ ತಾಯಿ ಹಾಗೂ ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ. ಸಮಾಜದಿಂದ ವಿದ್ಯೆ ಒಳ್ಳೆಯ ಮೌಲ್ಯಗಳನ್ನು ಪಡೆದುಕೊಂಡು ಸಮಾಜಕ್ಕೆ ಅರ್ಪಿಸಬೇಕು ಎಂದು ತಿಳಿಸಿದರು.

Advertisement

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಮಕ್ಕಳಿಗಾಗಿ ಮಾತೃಪೂರ್ಣ, ಕ್ಷೀರಭಾಗ್ಯ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈಗೀನ ಸರ್ಕಾರ ಕೂಡ ಈ ಯೋಜನೆಗಳನ್ನು ಮುಂದುವರೆಸುತ್ತಿದ್ದು ಮಕ್ಕಳ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿದೆ. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌, ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next