ಹರಪನಹಳ್ಳಿ: ಮಹಾಮಾರಿ ಕೊರಾನಾದಿಂದ ಹಲವಾರು ಆರ್ಥಿಕಸಂಕಷ್ಟ ಎದುರಿಸುತ್ತಿರುವ ಸಮಯದಲ್ಲೂ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಶಾಲೆಗಳ ನಡೆಯಿಂದ ಬೇಸತ್ತಿರುವ ಹಲವು ಪೋಷಕರು ಇದೀಗ ಸರ್ಕಾರಿ ಶಾಲೆಗಳತ್ತ ಒಲವು ತೋರಿದರ ಹಿನ್ನೆಲೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ.
ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಈಬಾರಿ ದಾಖಲಾತಿ ಪ್ರಮಾಣ ಹೆಚ್ಚಳಕಂಡಿದ್ದು ಕಳೆದ ವರ್ಷ ತಾಲೂಕಿನಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 53406ಮಕ್ಕಳು ದಾಖಲಾಗಿದ್ದರೆ, ಪ್ರಸಕ್ತ ವರ್ಷ55192 ಮಕ್ಕಳು ದಾಖಲಾಗಿದ್ದಾರೆ, 1786 ಮಕ್ಕಳು ಹೆಚ್ಚು ಈ ಬಾರಿದಾಖಲಾತಿ ಪಡೆದುಕೊಂಡಿದ್ದಾರೆ ಎಂದುಕ್ಷೇತ್ರ ಸಮನ್ವಯಾಧಿಕಾರಿ ಹುಸೇನ್‌ಪೀರ್‌ತಿಳಿಸಿದರು.
ಮೇಗಳ ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿ ಹೆಚ್ಚು ಮಕ್ಕಳು ದಾಖಲಾತಿ ಹೊಂದಿದ್ದು, ಒಟ್ಟು 630 ಮಕ್ಕಳ ಪೈಕಿ 1ನೇ ತರಗತಿಯಲ್ಲಿಯೇ 102ಮಕ್ಕಳು ದಾಖಲಾಗಿ ಪಡೆಯುವ ಮೂಲಕತಾಲೂಕಿನಲ್ಲಿಯೆ ದಾಖಲಾತಿ ಪ್ರಮಾಣದಲ್ಲಿಮೊದಲ ಸ್ಥಾದಲ್ಲಿದೆ.
ತಾಲೂಕಿನಉಚ್ಚಂಗಿ ದುರ್ಗ¨ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 555 ಮಕ್ಕಳುದಾಖಲಾತಿ ಪಡೆದುಕೊಂಡಿದ್ದು ಅದರಲ್ಲಿ 1ನೇ ತರಗತಿಗೆ 61 ಮಕ್ಕಳು ದಾಖಲಾಗಿಪಡೆದು ಎರಡನೆ ಸ್ಥಾನದಲ್ಲಿದೆ.ಮೇಗಳಪೇಟೆ ಸರ್ಕಾರಿಮಾದರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಲ್ಲಿ 102 ಮಕ್ಕಳು ದಾಖಲಾಗಿದ್ದಕ್ಕೆ ಆಶಾಲೆಯಲ್ಲಿಸಂತಸ ಹಂಚಿಕೊಳ್ಳಲು ಹಾಗೂ ಇತರಶಾಲೆಗಳಿಗೆ ಮಾದರಿಯಾಗಲು ಸೆ. 1ರಂದುಬುಧವಾರ ಬೆಳಗ್ಗೆ ನೂರರ ಸಂಭ್ರಮ ಎಂಬಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಈ ಶಾಲೆ ಪ್ರಭಾರಿ ಮುಖ್ಯ ಶಿಕ್ಷಕ ಎಚ್.ಸಲೀಂ ಅವರು 100ನೇ ದಾಖಲಾತಿಯಾಗಿತಮ್ಮ ಮಗಳನ್ನೇ ಸೇರಿಸಿ ಇನ್ನಷ್ಟುಮಾದರಿಯಾಗಿದ್ದಾರೆ. ಶಿಕ್ಷಕರ ಮತ್ತುಮುಖ್ಯ ಶಿಕ್ಷಕರ ಪ್ರಯತ್ನದಿಂದ ಈಶಾಲೆ ತಾಲೂಕಿನಲ್ಲಿ ದಾಖಲಾತಿಯಲ್ಲಿಪ್ರಥಮ ಸ್ಥಾನ ಪಡೆದು ಇತರ ಶಾಲೆಗಳಿಗೆಮಾದರಿಯಾಗಿದೆ.