Advertisement
ಕಾಟಾಚಾರಕ್ಕೆ ಮಾತ್ರರಜೆಯಲ್ಲಿ ಮಕ್ಕಳು ಅಜ್ಜಿ ಮನೆಯಲ್ಲಿ ಕಳೆಯಲಿ ಎಂಬ ಮನೋಭಾವ ಕಡಿಮೆಯಾಗುತ್ತಿದೆ. ಮಕ್ಕಳಿಗೆ ಏನು ಬೇಕು ಬೇಡ ಎಂದು ಅರ್ಥ ಮಾಡಿಕೊಳ್ಳದೆ ತಮ್ಮ ಮಕ್ಕಳು ಇನ್ನಷ್ಟು ಬುದ್ಧಿವಂತರಾಗಲಿ ಎಂದು ಎಲ್ಲವನ್ನು ಹೇರಲಾಗುತ್ತಿದೆ. ರಜೆಯಲ್ಲಿ ನಾಲ್ಕು ದಿನ ಇದ್ದು ಹೋಗುವುದಕ್ಕೆ ಮಾತ್ರ ಅಜ್ಜಿಮನೆ ಸೀಮಿತವಾಗಿದೆ. ಅಧುನಿಕ ಯುಗದಲ್ಲಿ ಅಜ್ಜ ಅಜ್ಜಿ ತೋರುವ ಪ್ರೀತಿಯಲ್ಲಿ ಮಕ್ಕಳು ಇರಲು ಬಯಸುವುದಿಲ್ಲ. ಅವರಿಗೇನಿದ್ದರೂ ಪೇಟೆಯ ಜೀವನ ಒಗ್ಗಿ ಹೋಗಿದೆ. ರಜೆಯಲ್ಲೂ ಬಿಟ್ಟಿರಲಾರದ ವಿಡಿಯೋ ಗೇಮ್, ಟಿ. ವಿ., ಮೊಬೈಲ್‌ಗಳ ಮಧ್ಯದಲ್ಲೇ ಉಳಿಯುತ್ತಾರೆ. ಹಳ್ಳಿಯ ಜೀವನ ಪದ್ಧತಿ, ಹಳ್ಳಕೊಳ್ಳಗಳು, ಪ್ರಾಣಿ ಪಕ್ಷಿಗಳು ಮರಗಿಡಗಳನ್ನು ನೋಡುವ, ಅವುಗಳ ಮಧ್ಯೆ ಆಡುವ ಆಸಕ್ತಿಯೇ ಇಲ್ಲವಾಗಿದೆ. ಹಿಂದೆ ಶಾಲೆಗೆ ರಜೆ ಬಂತೆಂದರೆ ಸಾಕು ಅಜ್ಜಿ -ಅಜ್ಜನ ಮನೆ, ಚಿಕ್ಕಮ್ಮ-ದೊಡ್ಡಮ್ಮ, ಮಾವನ ಮನಗೆ ಹೋಗಿ ರಜೆಯನ್ನು ಕಳೆಯುವ ಸಂತಸದ ಕ್ಷಣಗಳಿತ್ತು. ಆದರೆ ಈಗೆಲ್ಲಿ?
ಮಕ್ಕಳನ್ನು ಅಜ್ಜ ಅಜ್ಜಿ, ಸೇರಿದಂತೆ ತಂದೆ ತಾಯಿ, ಬಂಧು ಬಳಗ, ಹೆಚ್ಚು ಕಾಲ ಬೆರೆಯುವಂತೆ ಮಾಡಬೇಕು, ಸಂಬಂಧಿಕರೆಲ್ಲರೂ ಒಟ್ಟಿಗೆ ಸೇರುವ ಮೂಲಕ ಕುಟುಂಬ ವ್ಯವಸ್ಥೆಯನ್ನು ಬಲಪಡಿಸಿದಂತಾಗುತ್ತದೆ. ಸಭೆ ಸಮಾರಂಭ, ಉತ್ಸವಗಳಲ್ಲೂ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು. ಗ್ರಾಮೀಣ ಪ್ರದೇಶ, ಹೊಲಗದ್ದೆ, ತೋಟಗಳಲ್ಲಿ ಬೆರೆಯುವಂತೆ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಮಕ್ಕಳು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಬಲ್ಲ ಹಿರಿಯರ ಅಭಿಪ್ರಾಯ.
Related Articles
ಸಂಬಂಧಗಳು ಮರೆಯಾಗುತ್ತಿರುವ ಈ ದಿನಗಳಲ್ಲಿ ಹಳ್ಳಿಯ ಸೊಗಡು, ಸಂಪ್ರದಾಯವನ್ನು ಆಸ್ವಾದಿಸಲು, ಜೀವನದ ಅನುಭವಗಳನ್ನು ಕಟ್ಟಿಕೊಳ್ಳಲು ಮಕ್ಕಳನ್ನು ಸಾಧ್ಯವಾದಷ್ಟು ಅಜ್ಜ ಅಜ್ಜಿಯ ಮನೆಗೆ ಕಳುಹಿಸಬೇಕು. ಒಂದಷ್ಟು ದಿನ ಅವರ ಮನಸ್ಸ ಇಚ್ಚೆಯಂತೆ ಸ್ವಚ್ಚಂದವಾಗಿ ತಿರುಗಲು ಬಿಡಬೇಕು. ಇದರಿಂದ ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸಾಧ್ಯವಿದೆ.
–ಶಿವರಾಮ್ ಕಲ್ಮಾಡಿ
Advertisement