Advertisement

ನೋಡುತ್ತಲೇ ಕಲಿತು ಚಿತ್ರಕಲೆಯಲ್ಲಿ ಮಿಂಚಿದ ಮಕ್ಕಳು

10:23 PM Sep 14, 2019 | mahesh |

ಡಗನ್ನೂರು: ಎಲ್ಲ ವಿದ್ಯೆಗಳಿಗೂ ಗುರು ಇರುತ್ತಾನೆ. ಆದರೆ ಕೆಲವೊಂದು ವಿದ್ಯೆಗಳು ಪ್ರತಿಭೆಯಿಂದ ಅನಾವರಣಗೊಳ್ಳುತ್ತವೆ ಎನ್ನುವ ಮಾತು ಕುಂಬ್ರದಲ್ಲಿರುವ ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿಯ 10ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸ್ವಯಂ ಪ್ರತಿಭೆಯಿಂದ ಚಿತ್ರಕಲೆಯಲ್ಲಿ ಮಿಂಚುತ್ತಿರುವುದನ್ನು ಗಮನಿಸಿದರೆ ಸತ್ಯವೆಂದು ತೋರುತ್ತದೆ.

Advertisement

ಹತ್ತು ವಿದ್ಯಾರ್ಥಿಗಳೂ ಚಿತ್ರಕಲೆಯಲ್ಲಿ ಪರಿಣತಿ ಹೊಂದಿದ್ದಾರೆ. ಅವರ ಪೈಕಿ ಪ್ರಥಮ ಪದವಿ ವಿದ್ಯಾರ್ಥಿ ಸುಹೈಲ್ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿ ತಪ್ಸೀರ್‌ ಕಲೆಯಲ್ಲಿ ನೈಪುಣ್ಯ ಸಾಧಿಸಿದ್ದಾರೆ. ಇವರಿಬ್ಬರೂ ನೂರಾರು ಚಿತ್ರಗಳನ್ನು ಬಿಡಿಸಿದ್ದಾರೆ. ವಿಶ್ವನಾಯಕರು, ರಾಷ್ಟ್ರದ ನಾಯಕರು, ಧಾರ್ಮಿಕ ಪಂಡಿತರು, ಪ್ರಕೃತಿ ಹೀಗೆ ಹಲವು ಬಗೆಯ ಚಿತ್ರಗಳನ್ನು ರಚಿಸಿದ್ದಾರೆ. ಅದೂ ಹವ್ಯಾಸಕ್ಕಾಗಿ. ಕಲೆಯಲ್ಲಿ ಪರಿಣತಿ ಇದ್ದರೂ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿಲ್ಲ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಕುಂಬ್ರದ ಕರ್ನಾಟಕ ಇಸ್ಲಾಮಿಕ್‌ ಅಕಾಡೆಮಿಯಲ್ಲಿವೆ 10ಕ್ಕೂ ಹೆಚ್ಚು ಪ್ರತಿಭೆಗಳು

ಗಣ್ಯರ ಚಿತ್ರಗಳು
ರಾಜಕೀಯ ಸ್ಥಿತಿಗತಿ, ರಾಜಕೀಯ ನಾಯಕರ ಹೇಳಿಕೆಗಳು, ಸಂಘಟನೆಗಳ ವಿವಿಧ ಹೋರಾಟಗಳು ಮುಂತಾದ ವಿಷಯಗಳನ್ನು ಇಟ್ಟುಕೊಂಡು ಕ್ಷಣಮಾತ್ರದಲ್ಲಿ ವ್ಯಂಗ್ಯ ಕಾಟೂìನ್‌ಗಳನ್ನು ಈ ವಿದ್ಯಾರ್ಥಿಗಳು ರಚಿಸುತ್ತಾರೆ. ನೆಲ್ಸನ್‌ ಮಂಡೇಲಾ, ಮದರ್‌ ತೆರೇಸಾ, ಮೊಘಲ್‌ ಚಕ್ರವರ್ತಿ ಅಕ್ಬರ್‌, ಅಬ್ರಾಹಂ ಲಿಂಕನ್‌, ಮಾಜಿ ಪ್ರಧಾನಿ ಇಂದಿರಾಗಾಂಧಿ, ಜೋಕರ್‌, ಲಿಯೋನಲ್‌ ಮೆಸ್ಸಿ, ಇತ್ತೀಚೆಗೆ ನಿಧನರಾದ ಖ್ಯಾತ ಮುಸ್ಲಿಂ ವಿದ್ವಾಂಸ ಅತ್ತಿಪಟ್ಟೆ ಉಸ್ತಾದ್‌ ಸಹಿತ ಹಲವು ಗಣ್ಯ ವ್ಯಕ್ತಿಗಳ ಕ್ಯಾರಿಕೇಚರ್‌ಗಳನ್ನು ಚಿತ್ತಾಕರ್ಷಕವಾಗಿ ಬಿಡಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

ಸಾಹಸವೇ ಸರಿ
ಯಾವುದೇ ಚಿತ್ರ ಅಥವಾ ಫೋಟೋವನ್ನು ಅವರಿಗೆ ನೀಡಿದರೆ ಸಾಕು, ಕೆಲವೇ ನಿಮಿಷದಲ್ಲಿ ಆ ಚಿತ್ರವನ್ನು ಯಥಾಪ್ರಕಾರ ಬಿಡಿಸುವ ಕಲೆ ಸುಹೈಲ್‌ ಮತ್ತು ತಪ್ಸಿರ್‌ ಅವರಿಗೆ ಸಿದ್ಧಿಸಿದೆ. ಅವರು ಯಾವುದೇ ಚಿತ್ರಕಲಾ ತರಗತಿಗೆ ಹೋಗಿಲ್ಲ. ಬಿಡುವಿನ ಸಮಯದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದ್ದು ಕೇವಲ ಆಸಕ್ತಿಯ ಫ‌ಲವಾಗಿ. ವ್ಯಕ್ತಿಗಳ ರೇಖಾ ಚಿತ್ರ ಬಿಡಿಸುವ ಕಲೆಯಂತೂ ಅದ್ಭುತ ಎನಿಸುವಷ್ಟು ಒಲಿದಿದೆ.

ಈ ಮಕ್ಕಳಿಗೆ ಅರೇಬಿಕ್‌ ಕಲೆಯೂ ಕರಗತ
ಅರೇಬಿಕ್‌ ಪದಗಳನ್ನು ಜೋಡಿಸಿ, ಚಿತ್ರದಂತೆ ಬಿಡಿಸುವ ಕಲೆ ಅತ್ಯಂತ ಕಠಿನ. ಆದರೂ ಅರೇಬಿಕ್‌ ಭಾಷೆಗಳಲ್ಲಿರುವ ಕೆಲವೊಂದು ಸಾಹಿತ್ಯವನ್ನು ಅಕ್ಷರ ಜೋಡಣೆಯ ಮೂಲಕ ಚಿತ್ರ ರೂಪಕ್ಕೆ ತರುವ ಕಾಲಿಯೋಗ್ರಫಿಯ ಅನೇಕ ಮಾದರಿಗಳು ಇವರಲ್ಲಿವೆ. ಸಂಸ್ಥೆಗೆ ಭೇಟಿ ನೀಡುವ ಗಣ್ಯ ವ್ಯಕ್ತಿಗಳ ಚಿತ್ರ ಬಿಡಿಸಿ, ಅದನ್ನೇ ಅವರಿಗೆ ಗಿಫ್ಟ್ ಕೊಡುವ ಹವ್ಯಾಸವನ್ನು ಈ ಇಬ್ಬರೂ ಬೆಳೆಸಿಕೊಂಡಿದ್ದಾರೆ.

Advertisement

ದಿನೇಶ್‌ ಪೇರಾಲು

Advertisement

Udayavani is now on Telegram. Click here to join our channel and stay updated with the latest news.

Next