Advertisement

ಮದ್ಯದಂಗಡಿ ಮುಂದೆ ಮಕ್ಕಳನ್ನೂ ಕ್ಯೂ ನಿಲ್ಲಿಸಿದ ಮದ್ಯ ಪ್ರಿಯರು

08:47 PM May 27, 2021 | Team Udayavani |

ಲಕ್ಮೇಶ್ವರ: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ತಡೆಯುವ ನಿಟ್ಟಿನಲ್ಲಿ ಗುರುವಾರದಿಂದ ಗದಗ ಜಿಲ್ಲೆ ಸಂಪೂರ್ಣ ಲಾಕ್‌ ಆಗುವುದರಿಂದ ಬುಧವಾರ ಲಕ್ಮೇಶ್ವರದಲ್ಲಿ ಮದ್ಯಪ್ರಿಯರು ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತ ದೃಶ್ಯ ಕಂಡು ಬಂದಿತು.

Advertisement

ನಸುಕಿನ 5 ಗಂಟೆಯಷ್ಟರಲ್ಲಾಗಲೇ ಮದ್ಯದ ಅಂಗಡಿಗಳ ಮುಂದೆ ಮದ್ಯಪ್ರಿಯರು ಕಾದು ಕುಳಿತಿದ್ದರು. ನೆರೆಯ ಧಾರವಾಡ, ಹಾವೇರಿ ಜಿಲ್ಲೆ ಕಳೆದ ಮೂರ್‍ನಾಲ್ಕು ದಿನಗಳ ಹಿಂದೆಯೇ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಈ ಭಾಗದಿಂದ ಮದ್ಯ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡು ಬಂದಿತು. ಮೇ 27 ರಿಂದ ಮದ್ಯದದ ಅಂಗಡಿ ಬಂದ್‌ ಆದರೆ 5 ದಿನಗಳ ಕಾಲ ಮದ್ಯ ಸಿಗುವುದಿಲ್ಲ ಎಂಬ ಕಾರಣದಿಂದ ಮದ್ಯ ಖರೀದಿಗೆ ಒಬ್ಬರ ಮೇಲೊಬ್ಬರು ಬೀಳುತ್ತಾ ಮದ್ಯ ಖರೀದಿಸಿದರು.

ಮಕ್ಕಳನ್ನೂ ಕ್ಯೂ ನಿಲ್ಲಿಸಿದ ಮದ್ಯ ಪ್ರಿಯರು: ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿನ ಕೆಲವರು ಲಾಭದ ಉದ್ದೇಶದಿಂದ ಮದ್ಯ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಕಳೆದ 2 ದಿನಗಳಿಂದ ಎಲ್ಲ ಮದ್ಯದ ಅಂಗಡಿಗಳಲ್ಲಿ ಸಿಕ್ಕಷ್ಟು ಮದ್ಯ ಸಂಗ್ರಹಿಸುತ್ತಿದ್ದಾರೆ. ಇನ್ನು ಎಂಎಸ್‌ಐಎಲ್‌ನಲ್ಲಿಯೂ ವೈನ್‌ನ ಕೊರತೆ ಕಂಡು ಬಂದಿದ್ದರಿಂದ ಮಾರಾಟಗಾರರು ಒಬ್ಬರಿಗೆ 1/2 ಬಾಟಲ್‌ ಮಾತ್ರ ಕೊಡುತ್ತಿರುವ ಹಿನ್ನೆಲೆ ಸರದಿಯಲ್ಲಿ ಮಕ್ಕಳು ಸೇರಿ ಆತ್ಮೀಯರನ್ನು ನಿಲ್ಲಿಸಲಾಗಿತ್ತು. ಬಾಕ್ಸ್‌-ಚೀಲಗಳಲ್ಲಿ ನೆರೆಯ ಜಿಲ್ಲೆಯ ಮದ್ಯಪ್ರಿಯರು ಮತ್ತು ಮಾರಾಟಗಾರರು ಹೆಚ್ಚಿನ ಬೆಲೆಗೆ ಬೇಡಿಕೆ ಇಟ್ಟಿದ್ದು ಕೇಳಿ ಬಂದಿತು. ಈ ವೇಳೆ ಪರಸ ³ರ ಅಂತರ, ಮಾಸ್ಕ್ ಮರೆತಿದ್ದು ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next