Advertisement

ಹಳ್ಳಿ ಆಟಗಳಿಗೆ ಮನಸೋತ ಮಕ್ಕಳು

12:21 PM Oct 08, 2018 | Team Udayavani |

ಬೆಂಗಳೂರು: ಸುಬ್ರಹ್ಮಣ್ಯ ನಗರದ ಸಂಗೊಳ್ಳಿ ರಾಯಣ್ಣ ಉದ್ಯಾನವನದಲ್ಲಿ ಭಾನುವಾರ ಚಿಣ್ಣರ ಲೋಕ ತೆರೆದುಕೊಂಡಿತ್ತು. ಬಿ.ಪ್ಯಾಕ್‌ ಮತ್ತು ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಸೈಕಲ್‌ ದಿನ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗ್ರಾಮೀಣ ಆಟಗಳನ್ನು ಪರಿಚಯಿಸಲಾಯಿತು.

Advertisement

ಶಾಲಾ ವಿದ್ಯಾರ್ಥಿಗಳಿಗೆ ಯೋಗ, ಚಿತ್ರಕಲೆ, ಕುಂಟಬಿಲ್ಲೆ ಮತ್ತು ಹಗ್ಗಜಗ್ಗಾಟ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಚೌಕಬಾರ, ಚಿನ್ನೆಮಣೆ, ಮರಕೋತಿ ಆಟ, ಕಂಬದ ಆಟ ಸೇರಿದಂತೆ ವಿವಿಧ ಗ್ರಾಮೀಣ ಆಟಗಳನ್ನು ಆಡಿ ಮಕ್ಕಳು ಖುಷಿಪಟ್ಟರು. ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೂ ಹಲವು ಚಟುವಟಿಗೆಳನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಬಿಡಿಸುವ ಸ್ಪರ್ಧೆ, ಚಮಚದಲ್ಲಿ ನಿಂಬೆ ಹಣ್ಣು ಇರಿಸಿಕೊಂಡು ಹೋಗುವುದು, ಹಗ್ಗಜಗ್ಗಾಟ ಆಟಗಳನ್ನು ಮಹಿಳೆಯರು ಆಡಿ ಸಂತಸಗೊಂಡರು.

ಸೈಕಲ್‌ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಲಿಕೆ ಸದಸ್ಯ ಎಚ್‌.ಮಂಜುನಾಥ್‌, ಸುಬ್ರಮಣ್ಯನಗರ ವಾರ್ಡ್‌ನಲ್ಲಿ ಶಾಲಾ ಮಕ್ಕಳ ಕ್ರೀಡಾ ಆಸಕ್ತಿ ಗಮನಿಸಿ ಕೆಂಪೇಗೌಡ ಆಟದ ಮೈದಾನದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸುಸಜ್ಜಿತ ಆಟದ ಮೈದಾನ ನಿರ್ಮಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next