Advertisement
ಪಟ್ಟಣದ ಮುರಗೋಡ ರಸ್ತೆಯ ಪೃಥ್ವಿ ಗಾರ್ಡನಲ್ಲಿ ಭಾನುವಾರ ಬೆಳಗಾವಿ ಜಿಲ್ಲಾ ಗಾಣಿಗ ಸಂಘ, ಗಾಣಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಮತ್ತು ತಾಲೂಕಾ ಘಟಕದ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಗಾಣಿಗ ಸಮಾಜ ಹಾಗೂ ನೌಕರರ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಗಾಣಿಗ ಸಮಾಜವನ್ನು 3ಬಿ ವರ್ಗದಿಂದ 2 ಎ ವರ್ಗಕ್ಕೆ ತರಲು ಪ್ರಯತ್ನಿಸಿದೆನು. ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಹೆಣ್ಣು ಮಕ್ಕಳ ಅಭಿವೃದ್ದಿಗೆ ಕಾರ್ಯಕ್ರಮ ರೂಪಿಸಿದ್ದೇನು. ಯಾವುದೇ ಸಮಾಜಕ್ಕೆ ನಿಗಮ, ಮಂಡಳಿ ನಿರ್ಮಾಣ ಮಾಡದೆ ಸಮಾಜಕ್ಕೆ ಕೆಲಸ ಮಾಡಬಹುದು. ಗಾಣಿಗ ಸಮಾಜಕ್ಕೆ ಶಿವಮೊಗ್ಗ, ಮುದೋಳದಲ್ಲಿ ನಿವೇಶನ ದೊರಕಿಸಿ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಿದ್ದೇನೆ. ಬೈಲಹೊಂಗಲದಲ್ಲಿ ಪುರಸಭೆಯಿಂದ ಗಾಣಿಗ ಸಮಾಜ ಭವನ ನಿರ್ಮಾಣಕ್ಕೆ 8 ಗುಂಟೆ ಜಮೀನು ನೀಡಿದೆ. ಇಲ್ಲಿ ಎರಡು ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣ ಮಾಡಬೇಕೆಂದು ಸರಕಾರಕ್ಕೆ ನಿವೇದಿಸಿಕೊಂಡು ಪ್ರಾಮಾಣಿಕ ಕಾರ್ಯ ಮಾಡುತ್ತೇನೆಂದರು.
Related Articles
Advertisement
ಸಾಧಕ ಪ್ರಗತಿಪರ ರೈತರು, ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ವೈದ್ಯರನ್ನು, ಗಣ್ಯರನ್ನು ಸನ್ಮಾನಿಸಲಾಯಿತು.
ಗಾಣಿಗ ಸಮಾಜದ ನಿಗಮ ಸ್ಥಾಪಿಸಬೇಕೆಂದು ಬಿ.ಎಸ್.ಯಡಿಯೂರಪ್ಪನವರಿಗೆ ಮನವಿಯನ್ನು ಸಲ್ಲಿಸಲಾಯಿತು.ಇದಕ್ಕೂ ಮೊದಲು ಪಟ್ಟಣದ ಶಿವಬಸವ ಕಲ್ಯಾಣಮಂಟಪದಿಂದ ಶ್ರೀಗಳ ಬೆಳ್ಳಿ ಸಾರೋಟಿನ ಮೆರವಣಿಗೆ ಮುರಗೋಡ ರಸ್ತೆಯ ವೇದಿಕೆ ವರೆಗೆ ಜರುಗಿತು. ಮೆರವಣಿಗೆಯಲ್ಲಿ ಸುಮಂಗಲೆಯರ ಕುಂಭಮೇಳ, ಕುದುರೆ ಕುಣಿತ ನೋಡುಗರ ಗಮನ ಸೆಳೆದವು.